ತುಳುವೇಶ್ವರ ದೇವಳಕ್ಕೆ ಕೇಮಾರುಶ್ರೀ ಭೇಟಿ

New Project (55)
Published on

ಮೂಡುಬಿದಿರೆ: ತುಳುವ ಮಹಾಸಭೆ ಮತ್ತು ತುಳುವಲ್ಡ್ ಸಂಸ್ಥೆ ನೇತೃತ್ವದಲ್ಲಿ ನಡೆಯುತ್ತಿರುವ ಬಸ್ರೂರಿನ ಪುರಾತನ ತುಳುವೇಶ್ವರ ದೇವಳದ ಪುನರುತ್ಥಾನ ಕಾರ್ಯಕ್ಕೆ ಸಂಬಂಧಿಸಿದಂತೆ ನಡೆದ ಅಷ್ಟಮಂಗಲ ಪ್ರಶ್ನೆ ಸಂದರ್ಭದಲ್ಲಿ ಮೂಡುಬಿದಿರೆ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ ದೇವಾಲಯಕ್ಕೆ ಭೇಟಿ ನೀಡಿ ಮಾರ್ಗದರ್ಶನ ನೀಡಿದರು.

ಮಾಧ್ಯಮದರೊಂದಿಗೆ ಮಾತನಾಡಿದ ಕೇಮಾರುಶ್ರೀ, ತುಳುವೇಶ್ವರ ದೇಗುಲದ ಜೀರ್ಣೋದ್ಧಾರ ಕಾರ್ಯ ತುಳುನಾಡಿಗೆ ಹೆಮ್ಮೆಯ ವಿಚಾರ. ಇಲ್ಲಿನ ಇತಿಹಾಸ ಮತ್ತು ಪರಂಪರೆ ಪುನರುಜ್ಜೀವಗೊಳ್ಳಲಿ. ಜೀರ್ಣೋದ್ಧಾರದ ಪ್ರತಿ ಹಂತದಲ್ಲೂ ನಮ್ಮ ಪರಂಪರೆಗೆ ಪೂರಕವಾಗಿ ಕೆಲಸ ನಡೆಯಬೇಕು. ಮುಂದಿನ ಪೀಳಿಗೆಗೆ ತುಳುವೇಶ್ವರ ದೇವಳದ ಹಿರಿಮೆ-ಗರಿಮೆ ಪಸರಿಸಲಿ ಎಂದರು.

ಪ್ರಮುಖರಾದ ಅಬುಧಾಬಿಯ ಸರ್ವೋತ್ತಮ ಶೆಟ್ಟಿ, ಬ್ರಹ್ಮಾವರದ ಆಶಾ ಹೆಗ್ಡೆ, ಕೃಷ್ಣಪ್ರಸಾದ್ ಅಡ್ಯಂತಾಯ, ರಾಜೇಶ್ ಆಳ್ವ, ಪ್ರಮೋದ್ ಸಪ್ರೆ, ಮಂದಾರ ರಾಜೇಶ್ ಭಟ್, ತುಳುವಲ್ಡ್ ತಂಡ ಹಾಗೂ ತುಳುವ ಮಹಾಸಭೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net