

ಮೂಡುಬಿದಿರೆ: ಹುಬ್ಬಳ್ಳಿ ಸೇಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಜ್ಯಮಟ್ಟದ 17ರ ವಯೋಮಿತಿಯ ಬಾಲಕ ಬಾಲಕಿಯರ ವೇಯ್ಟ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಐದು ಚಿನ್ನ ಹಾಗೂ ಒಂದು ಬೆಳ್ಳಿ ಪದಕದೊಂದಿಗೆ ಒಟ್ಟು ಆರು ಪದಕ ಪಡೆದು, ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿ ಪಡೆದ್ದಾರೆ. ಐವರು ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಫಲಿತಾಂಶ: 58 ಕೆಜಿ ವಿಭಾಗದಲ್ಲಿ- ಸ್ಫೂರ್ತಿ(ದ್ವಿತೀಯ), 77 ಕೆಜಿ ವಿಭಾಗದಲ್ಲಿ-ಪಾವನಿ ಜೆ.ಆರ್.(ಪ್ರಥಮ) 56 ಕೆಜಿ ವಿಭಾಗದಲ್ಲಿ-ಪೃಥ್ವಿಕ್(ಪ್ರಥಮ), 60 ಕೆಜಿ ವಿಭಾಗದಲ್ಲಿ-ಸುರೇಶ್ ವೈ ಎಂ.(ಪ್ರಥಮ), 65 ಕೆಜಿ ವಿಭಾಗದಲ್ಲಿ-ಹಜರೇಸಾಬ್-(ಪ್ರಥಮ), 71 ಕೆಜಿ ವಿಭಾಗದಲ್ಲಿ-ಪ್ರಫುಲ್ ರಾಜೇಶ್(ಪ್ರಥಮ) ಸ್ಥಾನ ಪಡೆದರು. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.