More

    ಖ್ಯಾತ ನಟನ ಜತೆ ರಹಸ್ಯವಾಗಿ ಮದ್ವೆಯಾದ್ರಾ ಕೀರ್ತಿ ಸುರೇಶ್​? ಎಲ್ಲೆಡೆ ಈ ಫೋಟೋ ಬಗ್ಗೆಯೇ ಚರ್ಚೆ

    ಚೆನ್ನೈ: ನಟಿ ಕೀರ್ತಿ ಸುರೇಶ್ ತಮಿಳು ಚಿತ್ರರಂಗದ ಸ್ಟಾರ್​ ನಟಿಯರಲ್ಲಿ ಒಬ್ಬರು. ತೆಲುಗಿನಲ್ಲೂ ನಟಿಸಿದ್ದಾರೆ. ನಟ ವಿಜಯ್​, ಸೂರ್ಯ, ವಿಕ್ರಮ್​, ಶಿವಕಾರ್ತಿಕೇಯನ್​,​ ನಾನಿ, ಮಹೇಶ್​ ಬಾಬು ಸೇರಿದಂತೆ ಸ್ಟಾರ್​ ನಟರ ಜತೆ ತೆರೆ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಒಂದೇ ಒಂದು ಸಿನಿಮಾದಲ್ಲಿ ನಟಿಸದಿದ್ದರೂ ಪ್ಯಾನ್​ ಇಂಡಿಯಾ ಪರಿಕಲ್ಪನೆ ಬಳಿಕ ಕೀರ್ತಿ ಸುರೇಶ್​ ನಟನೆಯ ಡಬ್ಬಿಂಗ್​ ಚಿತ್ರಗಳೂ ಕನ್ನಡದಲ್ಲೂ ಸದ್ದು ಮಾಡಿದ್ದು, ಆಕೆಯ ನಟನೆ ಮತ್ತು ಸೌಂದರ್ಯಕ್ಕೆ ಕನ್ನಡ ಪ್ರೇಕ್ಷಕರು ಸಹ ಫಿದಾ ಆಗಿದ್ದಾರೆ.

    ಸದ್ಯ ಬಾಲಿವುಡ್​ಗೂ ಕೀರ್ತಿ ಸುರೇಶ್​ ಕಾಲಿಟ್ಟಿದ್ದಾರೆ. ನಟ ವರುಣ್ ಧವನ್​ ನಟನೆಯ ಬಾಬಿ ಜಾನ್​ ಸಿನಿಮಾಗೆ ಕೀರ್ತಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ಖ್ಯಾತ ತಮಿಳು ನಿರ್ದೇಶಕ ಆಟ್ಲೀ ನಿರ್ದೇಶನ ಮಾಡುತ್ತಿದ್ದಾರೆ. ಇದು ಇಳಯದಳಪತಿ ವಿಜಯ್​ ನಟನೆಯ ಸೂಪರ್​ ಹಿಟ್​ ತಮಿಳು ಸಿನಿಮಾ ಥೇರಿ ರಿಮೇಕ್​.​

    ತಾಜಾ ಸಂಗತಿ ಏನೆಂದರೆ, ಕೀರ್ತಿ ಸುರೇಶ್​​ ರಹಸ್ಯವಾಗಿ ಮದುವೆಯಾಗಿದ್ದಾರೆ ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಖ್ಯಾತ ನಟ ಸತೀಶ್​ ಅವರನ್ನು ಕೀರ್ತಿ ಸುರೇಶ್​ ವರಿಸಿದ್ದಾರೆ ಎಂದು ಹೇಳಲಾಗಿದೆ. ಹಾರ ಬದಲಾಯಿಸಿಕೊಂಡಿರುವ ಫೋಟೋ ಇದಾಗಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಕೀರ್ತಿ ನಿಜಕ್ಕೂ ಮದುವೆಯಾಗಿದ್ದಾರಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

    Keerthi Suresh with Mother

    ಅಸಲಿ ಸಂಗತಿಯೇ ಬೇರೆ
    ವೈರಲ್​ ಫೋಟೋ ಹಿಂದಿನ ಅಸಲಿ ಸಂಗತಿ ಏನೆಂದರೆ, ಇದು ವಿಜಯ್​ ನಟನೆಯ ಭೈರವ ಸಿನಿಮಾ ಮುಹೂರ್ತದ ಸಮಯದಲ್ಲಿ ತೆಗೆದ ಚಿತ್ರವಾಗಿದೆ. ಕೀರ್ತಿ ಸುರೇಶ್​ ಮದುವೆಯಾಗಿಲ್ಲ. ಅವರಿನ್ನೂ ಬ್ಯಾಚುಲರ್​ ಆಗಿಯೇ ಉಳಿದಿದ್ದಾರೆ ಮತ್ತು ಸದ್ಯ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಮೂಹೂರ್ತದ ಸಮಯದಲ್ಲಿ ತೆಗೆದ ಫೋಟೋವನ್ನು ಇದೀಗ ವೈರಲ್​ ಮಾಡಿ, ಕೀರ್ತಿ ಸುರೇಶ್​ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಹರಿಬಿಡಲಾಗಿದೆ.

    ಈ ಫೋಟೋ ವೈರಲ್​ ಆದ ಬಳಿಕ ಸ್ವತಃ ಕೀರ್ತಿ ಸುರೇಶ್​ ಅವರ ತಾಯಿ ನಟ ಸತೀಶ್​ ಅವರಿಗೆ ಕರೆ ಮಾಡಿ ವರ ಸತೀಶ್​ ಎಂದು ಕರೆದಿದ್ದರಂತೆ. ಇದರಿಂದ ಸತೀಶ್​ ಕೂಡ ಶಾಕ್​ ಆಗಿದ್ದರಂತೆ. ಇತ್ತೀಚೆಗೆ ಈ ಸಂಗತಿಯನ್ನು ಸತೀಶ್​ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. (ಏಜೆನ್ಸೀಸ್​)

    ನಾಯಿ ರೀತಿ ಇರುತ್ತೇನೆಂದರು, ರೂಮಿಗೆ ಕರೆದರು… ಹಲವು ವರ್ಷಗಳ ಬಳಿಕ ನಟಿ ಲಕ್ಷ್ಮೀ ರಹಸ್ಯ ಬಯಲು

    ಈ ಫೋಟೋದಲ್ಲಿರುವ ಪುಟ್ಟ ಬಾಲಕಿ ಇಂದು ಸ್ಯಾಂಡಲ್​ವುಡ್​ನ ಸ್ಟಾರ್​ ನಟಿ! ಯಾರೆಂದು ಪತ್ತೆ ಹಚ್ಚುವಿರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts