ಅಭಿಮಾನಿ ನೀಡಿದ ಗಿಫ್ಟ್​​ ಬಾಕ್ಸ್​ ತೆರೆದ ನಟಿ ಕೀರ್ತಿ ಸುರೇಶ್​ಗೆ ಶಾಕ್​ ಆಗಿತ್ತಂತೆ!​

Keerthi suresh vvani
Published on

ಚೆನ್ನೈ: ಬಹುಬೇಡಿಕೆ ನಟಿಯರ ಸಾಲಿನಲ್ಲಿ ರಾಷ್ಟ್ರಪ್ರಶಸ್ತಿ ವಿಜೇತೆ ಕೀರ್ತಿ ಸುರೇಶ್​ ಟಾಪ್​ ಲೀಸ್ಟ್​ನಲ್ಲಿ ಇದ್ದಾರೆ. ಪ್ರತಿ ಚಿತ್ರದಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಕೀರ್ತಿ ಕೆಲವೇ ಈಗಾಗಲೇ ಸ್ಟಾರ್​ ನಟರ ಜತೆ ಮಿಂಚಿದ್ದಾರೆ. ಅಲ್ಲದೆ, ಮಹಿಳಾ ಪ್ರಧಾನಿ ಚಿತ್ರಗಳಲ್ಲೂ ಛಾಪು ಮೂಡಿಸಿದ್ದಾರೆ.

ಸಾಕಷ್ಟು ಸಿನಿಮಾಗಳನ್ನು ಕೀರ್ತಿ ಮಾಡಿದ್ದರೂ ಈವರೆಗೂ ಯಾವುದೇ ವಿವಾದಕ್ಕೆ ಕೀರ್ತಿ ಸಿಲುಕ್ಕಿಲ್ಲ. ಅಲ್ಲದೆ, ಯಾವುದೇ ನಟರ ಜತೆ ಅವರ ಹೆಸರು ತಳುಕು ಹಾಕಿಕೊಂಡಿಲ್ಲ. ಹೀಗಿರುವಾಗ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕೀರ್ತಿ ಆಸಕ್ತಿಕರ ವಿಚಾರವೊಂದನ್ನು ಮಾಧ್ಯಮ ಮುಂದೆ ತೆರೆದಿಟ್ಟಿದ್ದಾರೆ.

ಒಮ್ಮೆ ಕೀರ್ತಿ ಅವರ ಅಪ್ಪಟ್ಟ ಅಭಿಮಾನಿಯೊಬ್ಬ ಸಾರ್ವಜನಿಕ ಕಾರ್ಯಕ್ರಮದಲ್ಲಿ ಉಡುಗೊರೆಯೊಂದನ್ನು ನೀಡಿದ್ದರಂತೆ. ಅಭಿಮಾನಿ ನೀಡಿದ ಗಿಫ್ಟ್​ ತೆರೆದು ನೋಡಿದ ಕೀರ್ತಿ ಅಕ್ಷರಶಃ ಶಾಕ್​ಗೆ ಒಳಗಾದರಂತೆ. ಗಿಫ್ಟ್​ ಬಾಕ್ಸ್​ನಲ್ಲಿ ಅಂಥದ್ದೇನಿತ್ತು ಎಂದರೆ, ಕೀರ್ತಿ ಅವರ ಫೋಟೋಗ್ರಾಫ್​ ಜತೆಗೆ ಸಾಕಷ್ಟು ಲವ್​ ಲೆಟರ್​ಗಳು ತುಂಬಿದ್ದವು ಎನ್ನುತ್ತಾರೆ ಕೀರ್ತಿ.

ಇಷ್ಟೇ ಅಲ್ಲ, ತನ್ನನ್ನು ಮದುವೆಯಾಗುವಂತೆ ಅಭಿಮಾನಿ ಕೇಳಿಕೊಂಡಿದ್ದರಂತೆ. ಅಭಿಮಾನಿ ನೀಡಿದ ಲವ್​ ಲೆಟರ್​ ಅನ್ನು ನಿಧಿಗೆ ಹೋಲಿಸಿರುವ ಕೀರ್ತಿ, ಅವು ತುಂಬಾ ಮುಖ್ಯವಾದವು, ಕಾಲೇಜು ದಿನಗಳಲ್ಲಿ ನಾನೆಂದಿಗೂ ಲವ್​ ಲೆಟರ್​ ಸ್ವೀಕರಿಸಿರಲಿಲ್ಲ ಎಂದು ಹೇಳಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಕೀರ್ತಿ ಸದ್ಯ ಮಹಿಳಾ ಪ್ರಧಾನ ಮಿಸ್​ ಇಂಡಿಯಾ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅಲ್ಲದೆ, ರಂಗ್​ ದೇ ಚಿತ್ರದಲ್ಲಿ ನಟ ನಿತಿನ್​ರೊಂದಿಗೂ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net