ಪತ್ನಿ, ಮಗಳಿಗೆ ವಿಷ ನೀಡಿ ನೇಣಿಗೆ ಶರಣಾದ ವ್ಯಕ್ತಿ: ಡೆತ್​ನೋಟ್​ನಲ್ಲಿತ್ತು ನೋವಿನ ಮಾತು

Suicide
Published on

ಧಾರವಾಡ: ಪತ್ನಿ ಹಾಗೂ ಮಗಳಿಗೆ ವಿಷ ನೀಡಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಶರಣಾಗಿರುವ ಘಟನೆ ಧಾರವಾಡ ಮಹಬೂಬ ನಗರ ಕವಳಿಕಾಯಿ‌ ಚಾಳದಲ್ಲಿ ಶನಿವಾರ ನಡೆದಿದೆ.

ಪತ್ನಿ ಅರ್ಪಿತಾ(28) ಹಾಗೂ ಮಗಳು ಸುಕೃತಾ (4)ಗೆ ವಿಷ ನೀಡಿದ ಮೌನೇಶ ಪತ್ತಾರ(36) ಬಳಿಕ ತಾನೂ ನೇಣಿಗೆ ಕೊರಳೊಡ್ಡಿದ್ದಾರೆ. ಮೌನೇಶ್​ ಧಾರವಾಡ ತಾಲೂಕಿನ ಗರಗ್ ರಸ್ತೆಯಲ್ಲಿರೋ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡತಿದ್ದರು. ಇವರು ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿ ಗ್ರಾಮದವರು. ಉದ್ಯೋಗ ನಿಮಿತ್ತ ಧಾರವಾಡದಲ್ಲಿ ಕುಟುಂಬ ಸಮೇತ ನೆಲೆಸಿದ್ದರು.

ಆತ್ಮಹತ್ಯೆಗೆ ಕಾರಣವೇನು?

ಮೃತರ ಮನೆಯಲ್ಲಿ ಡೆತ್​ನೋಟ್​ ಪತ್ತೆಯಾಗಿದ್ದು, ಆತ್ಮಹತ್ಯೆಗೆ ಕರೊನಾ ಭಯವೇ ಕಾರಣ ಎಂದು ಉಲ್ಲೇಖಿಸಿದ್ದಾರೆ. ಮನೆಯಲ್ಲಿ ಪತ್ನಿ ಹಾಗೂ ಮಗಳಿಗೆ ಕರೊನಾ ಲಕ್ಷಣವಿರುವ ಶಂಕೆ ವ್ಯಕ್ತವಾಗಿತ್ತು. ಸ್ಥಳೀಯ ವೈದ್ಯರೊಬ್ಬರ ಬಳಿ ಪರೀಕ್ಷಿಸಿದ್ದರು. ಪತ್ನಿಗೆ ಲೋ ಬಿಪಿ ಮತ್ತು ಮಗಳಿಗೆ ಜ್ವರದ ಲಕ್ಷಣ‌ ಕಂಡು ಬಂದಿತ್ತು. ಇದರ ನಡುವೆ ಮಗಳ ಜ್ವರ ಕಡಿಮೆಯಾಗದಿದ್ದಾಗ ಆತಂಕ ಶುರುವಾಗಿತ್ತು. ಇದೇ ಭಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

ಪೊಲೀಸರು ಡೆತ್​ನೋಟ್ ವಶಕ್ಕೆ ಪಡೆದಿದ್ದು, ಧಾರವಾಡದ ಉಪನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net