ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಪ್ರೇಯಸಿಯನ್ನು ಕೊಂದ ವ್ಯಕ್ತಿ ನೇಣಿಗೆ ಶರಣಾಗಿದ್ದೇಕೆ?

Murder
Published on

ದಾವಣಗೆರೆ: ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಜಗಳೂರು ತಾಲೂಕಿನ ಗಿಡ್ಡನಹಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಚಂದ್ರಪ್ಪ (23) ಹಾಗೂ ಲಕ್ಷ್ಮೀ(20) ಮೃತರು. ಒಂದು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಗಮನಾರ್ಹವೆಂದರೆ ಇಬ್ಬರದು ಪ್ರೇಮ ವಿವಾಹ. ಚಂದ್ರಪ್ಪ ಕುರಿ ಕಾಯುತ್ತಿದ್ದ, ಲಕ್ಷ್ಮೀ ಕೂಲಿ‌ ಕೆಲಸ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.

ಘಟನೆ ನಿಖರ ಕಾರಣವಿನ್ನೂ ತಿಳಿದುಬಂದಿಲ್ಲ. ಆದರೆ, ಇಬ್ಬರ ನಡುವಿನ ವೈಮನಸ್ಸು ಸಾವಿಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಘಟನಾ ಸ್ಥಳಕ್ಕೆ ಎಸ್ಪಿ ಹನುಮಂತರಾಯಪ್ಪ ಹಾಗೂ ಡಿವೈಎಸ್ಪಿ ನರಸಿಂಹಪ್ಪ ಭೇಟಿ ನೀಡಿ ಪರಿಶೀಲನೆ ನಡೆದ್ದು, ಪ್ರಕರಣ ದಾಖಲಾಗಿದೆ. ತನಿಖೆಯು ಆರಂಭವಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net