ಕ್ಯಾಚ್​ ಕೈಬಿಟ್ಟ ಹರ್ಷಲ್​ ವಿರುದ್ಧ ಕಾವ್ಯ ಮಾರನ್ ಫುಲ್​ ಗರಂ​! ಎಸ್​ಆರ್​ಎಚ್​ ಒಡತಿ ಸಿಟ್ಟಾದ ದೃಶ್ಯ ವೈರಲ್​ | Kavya Maran

blank

Kavya Maran: ನಿನ್ನೆ (ಏ.25) ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಎಸ್​ಆರ್​ಎಚ್​ ಮತ್ತು ಸಿಎಸ್​ಕೆ ನಡುವಿನ ಪಂದ್ಯದಲ್ಲಿ ಪ್ಯಾಟ್​ ಕಮ್ಮಿನ್ಸ್​ ಪಡೆ 5 ವಿಕೆಟ್​ಗಳ ಸುಲಭ ಗೆಲುವನ್ನು ದಾಖಲಿಸಿತು. ಈ ಪಂದ್ಯದಲ್ಲಿ ಉತ್ತಮ ಆಲ್​ರೌಂಡ್ ಪ್ರದರ್ಶನ ನೀಡಿದ ಸನ್​ರೈಸರ್ಸ್​ ತಂಡ ಐಪಿಎಲ್​ ಪ್ಲೇಆಫ್​ಗೆ ಲಗ್ಗೆಯಿಡುವ ಭರವಸೆಯನ್ನು ಗಟ್ಟಿಯಾಗಿಸಿದೆ. ಒಂದೆಡೆ ಪಂದ್ಯ ಗೆದ್ದರೂ ತಮ್ಮ ತಂಡದ ಒಡತಿ ಕಾವ್ಯ ಮಾರನ್​ ಸಿಟ್ಟಿಗೆ ಆಟಗಾರರು ತುತ್ತಾದ ದೃಶ್ಯಗಳು ಕ್ಯಾಮರಾ ಕಣ್ಣಿನಲ್ಲಿ ಮಾತ್ರವಲ್ಲದೇ ಕ್ರಿಕೆಟ್​ ಪ್ರೇಮಿಗಳ ಕಣ್ಣಿನಲ್ಲಿಯೂ ಸೆರೆಯಾಯಿತು.

blank

ಇದನ್ನೂ ಓದಿ: ಮೂವರು ನಟಿಯರ ಪೈಕಿ ಮೃಣಾಲ್​ ಫಿಕ್ಸ್​! ಅಟ್ಲಿ-ಅಲ್ಲು ಅರ್ಜುನ್​ ಬಹುನಿರೀಕ್ಷಿತ ಚಿತ್ರಕ್ಕೆ ‘ಸೀತಾ ರಾಮಂ’ ಬೆಡಗಿ | Mrunal Thakur

ಸಿಎಸ್​ಕೆ ನೀಡಿದ ಸಾಧಾರಣ ಗುರಿಯನ್ನು ಚೇಸ್​ ಮಾಡುವಾಗ ಬ್ಯಾಟರ್​ ಕಮಿಂದು ಮೆಂಡಿಸ್​ಗೆ ನೂರ್​ ಅಹ್ಮದ್​ರ ಬೌಲಿಂಗ್​ನಲ್ಲಿ ಫ್ರೀ ಹಿಟ್ ಲಭಿಸಿತು. ಇದನ್ನು ಸದುಪಯೋಗ ಪಡಿಸಿಕೊಳ್ಳದ ಮೆಂಡಿಸ್​ಗೆ ಕುಳಿತಲ್ಲೇ ‘ಹೇಯ್​….’ ಎಂದು ಕಾವ್ಯ ಸನ್ನೆ ಮಾಡುತ ಬೇಸರ ಹೊರಹಾಕಿದರು. ಇದಕ್ಕೂ ಮೊದಲು ಸಿಎಸ್​ಕೆ ಬ್ಯಾಟಿಂಗ್​ನಲ್ಲಿದ್ದ ಸಮಯದಲ್ಲಿ ಜಡೇಜಾ ಕೊಟ್ಟ ಕ್ಯಾಚ್​ ನೇರವಾಗಿ ಹರ್ಷಲ್​ ಪಟೇಲ್​ ಕೈಗೆ ಬಂದಿತು. ಅತ್ಯಂತ ಸುಲಭ ಕ್ಯಾಚ್​ ಕೈಚೆಲ್ಲಿದ ಪಟೇಲ್ ವಿರುದ್ಧ ಎಸ್​ಆರ್​ಎಚ್​ ಒಡತಿ ತೀವ್ರ ಸಿಟ್ಟಾದರು.

 

ಜಿಶಾನ್ ಅನ್ಸಾರಿ ಬೌಲಿಂಗ್​ನಲ್ಲಿ ಬ್ಯಾಟ್ ಮಾಡುತ್ತಿದ್ದ ಜಡೇಜಾ, ನೇರವಾಗಿ ಹರ್ಷಲ್​ ಪಟೇಲ್​ ನಿಂತ ಜಾಗಕ್ಕೆ ಬಿರುಸಿನಿಂದ ಬಾರಿಸಿದರು. ತನ್ನ ಕಡೆಗೆ ಬಾಲ್​ ಬರುತ್ತಿದ್ದಂತೆ ಕ್ಯಾಚ್​ಗೆ ಸಿದ್ಧವಾದ ಹರ್ಷಲ್​, ಕೈಗೆ ಬಂದ ಕ್ಯಾಚ್​ನ ಗಟ್ಟಿಯಾಗಿ ಹಿಡಿಯದೆ ಹಾಗೆಯೇ ಬಿಟ್ಟರು. ಇದು ಸ್ಟ್ಯಾಂಡ್ಸ್​ನಲ್ಲಿ ಕುಳಿತಿದ್ದ ಕಾವ್ಯಾ ಮಾರನ್​ ಎದ್ದು ಚೀರಾಡುವಂತೆ ಮಾಡಿತು. ಅತ್ಯಂತ ಸುಲಭ ಕ್ಯಾಚ್​ ಬಿಟ್ಟ ಪಟೇಲ್ ವಿರುದ್ಧ ಕಾವ್ಯ ತೀವ್ರ ಸಿಟ್ಟಾದರು. ಈ ದೃಶ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ,(ಏಜೆನ್ಸೀಸ್).

ಆಡಿದರೆ ಮುಂದಿನ 20 ವರ್ಷ… ಯುವ ಬ್ಯಾಟರ್​ಗೆ ಎಚ್ಚರಿಕೆ ಕೊಟ್ಟ ವೀರೇಂದ್ರ ಸೆಹ್ವಾಗ್​ | Vaibhav Suryavanshi

Share This Article

ಬೆಳಿಗ್ಗೆ ಎದ್ದ ತಕ್ಷಣ ಹೀಗೆ ಮಾಡಿ..ನಿಮ್ಮ ದೇಹದ ಕೊಬ್ಬು ತಕ್ಷಣ ಕಡಿಮೆಯಾಗುತ್ತದೆ! weight loss

weight loss: ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಸುತ್ತ ಇರುವ ಮೊಂಡುತನದ ಕೊಬ್ಬನ್ನು ಕಡಿಮೆ ಮಾಡುವುದು (ತೂಕ…

ಎಸಿ, ಫ್ಯಾನ್​ ಇದ್ದರೂ ಬೆವರುತ್ತಿದ್ದೀರಾ?; ತಂಪಿನ ಪ್ರದೇಶದಲ್ಲಿಯೂ ಇಷ್ಟೊಂದು ಹಿಟ್​ ಇರಲು ಕಾರಣವೇನು?: ಇಲ್ಲಿದೆ ಮಾಹಿತಿ | Sweating

Sweating: ಸಾಮಾನ್ಯವಾಗಿ ಬಹುತೇಕರು ಶಕೆಯಲ್ಲಿ ಬೆವರುವುದನ್ನು ಕಾಣುತ್ತೇವೆ. ಆದರೆ, ಇನ್ನು ಕೆಲ ಜನರು ತಾಪಮಾನ 35ಕ್ಕೂ…

ಕಾರಿನೊಳಗೆ ಮಕ್ಕಳನ್ನು ಆಡಲು ಬಿಡುತ್ತೀರಾ; ಇದು ಅವರ ಕೊನೆಯ ಆಟವಾಗಬಹುದು; ಪೋಷಕರು ಇದನ್ನು ತಿಳಿದಿರಲೇಬೇಕು| Car

Car| ಇತ್ತೀಚಿನ ದಿನಗಳಲ್ಲಿ ಪೋಷಕರ ಅಜಾಗರೂಕತೆಯಿಂದಾಗಿ ಕಾರಿನೊಳಗೆ ಆಟವಾಡುವಾಗ ಮಕ್ಕಳು ಮೃತಪಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಪೋಷಕರು…