

ಕೋಟ: ವಡ್ಡರ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವಡಿ ಸಂಪರ್ಕಿಸುವ ರಸ್ತೆ ಅವ್ಯವಸ್ಥೆ ಅಯೋಮಯವಾಗಿದೆ. ಮೂರಕೈ ಮೂಲಕ ವಡ್ಡರ್ಸೆಯಿಂದ ಕಾವಾಡಿ ತಲುಪಲು ಇದು ಹತ್ತಿರದ ಮಾರ್ಗವಾಗಿದ್ದು, ಕಿರಿದಾಗಿರುವ ಈ ರಸ್ತೆಯಲ್ಲಿ ಹೊಂಡ ಗುಂಡಿಗಳಿಂದ ತುಂಬಿಕೊಂಡಿದೆ. ಕಾವಾಡಿಗೆ ಇನ್ನೊಂದು ಮಾರ್ಗವಿದ್ದು, ಸಾಲಿಗ್ರಾಮದ ಕಾರ್ಕಡ ವಾರ್ಗದ ಮೂಲಕ ಇಲ್ಲಿಗೆ ಸುತ್ತು ಬಳಸಿ ತಲುಪಬೇಕಿದೆ. ಈ ರಸ್ತೆ ಕೆಲವು ಭಾಗಗಳು ಹೊಂಡ ಗುಂಡಿಗಳಿಂದ ಕೂಡಿದ್ದು, ಸ್ತೆಯ ಮೇಲೆ ನೀರು ನಿಂತು ಅವಡಗಳಿಗೆ ಕಾರಣವಾಗುತ್ತಿದೆ. ಸ್ಥಳೀಯಾಡಳಿತ ಅಥವಾ ಸಂಬಂಧಿಸಿದ ಜನಪ್ರತಿನಿಧಿಗಳು ನಿರಾಸಕ್ತಿ ತೋರಿಸುತ್ತಿದ್ದು, ರಸ್ತೆ ದುರಸ್ತಿಗೆ ಮುಂದಾಗಬೇಕಿದೆ. ಕಾವಡಿಯಿಂದ ತೆರಳಿದರೆ ಕಾವಡಿ ಶಿವರಾಯ ಗರಡಿ ಸಂಪರ್ಕಿಸುವುದರ ಜತೆಗೆ ಸಾಕಷ್ಟು ಮನೆಗಳನ್ನು ಸಂಪರ್ಕಿಸುವ ಈ ರಸ್ತೆ ಅಭಿವೃದ್ಧಿಯಿಂದ ವಂಚಿತಗೊಂಡಿದೆ. ಗ್ರಾಮೀಣ ಒಳ ಭಾಗಗಳ ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯಾಡಳಿತ ವಿಶೇಷ ಮುತುವರ್ಜಿ ವಹಿಸಿ ಅಭಿವೃದ್ಧಿಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾವಡಿ ಹಾಗೂ ವಡ್ಡರ್ಸೆ ಸಂಪರ್ಕಿಸುವ ಈ ರಸ್ತೆ ಹೊಂಡ ಗುಂಡಿಗಳಿಂದ ಹೊಳೆಯಾಕಾರದಲ್ಲಿ ರೂಪುಗೊಂಡು ಜನಸಾವಾನ್ಯರಿಗೆ ಸಂಚರಿಸಲು ಕ್ಲಿಷ್ಟಕರವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಬೇಕಿದೆ. ಅವಡ ಆಗುವುದಕ್ಕಿಂತ ಮುಂಚಿತಾಗಿ ಸ್ಥಳೀಯಾಡಳಿತ ಎಚ್ಚೆತ್ತುಕೊಂಡರೆ ಒಳಿತು. ವಿಜಯ ಕುವಾರ್ ಶೆಟ್ಟಿ ಕೊತ್ತಾಡಿ, ಸಾವಾಜಿಕ ಕಾರ್ಯಕರ್ತ