ಖಂಬದಕೋಣೆ ಶಾಖೆಗೆ ಅಧ್ಯಯನ ತಂಡ ಭೇಟಿ

byn
Published on

ಬೈಂದೂರು: ಒಡಿಶಾ ರಾಜ್ಯದ ಅಂಗುಲ್ ಜಿಲ್ಲೆಯ ವಿವಿಧ ಸಹಕಾರಿ ಸಂಗಳ 22 ಮಂದಿಯನ್ನೊಳಗೊಂಡ ಸಿಇಒ ಹಾಗೂ ಅಧ್ಯಕ್ಷ, ನಿರ್ದೇಶಕರ ಅಧ್ಯಯನ ತಂಡ ಖಂಬದಕೋಣೆ ರೈತರ ಸೇವಾ ಸಹಕಾರಿ ಸಂದ ಪ್ರಧಾನ ಕಚೇರಿ ಹಾಗೂ ಖಂಬದಕೋಣೆ ಶಾಖೆಗೆ ಭೇಟಿ ನೀಡಿತು.

ಸಂದ ವ್ಯವಹಾರ ಚಟುವಟಿಕೆ, ಕ್ರೆಡಿಟ್ ವಾನಿಟರಿಂಗ್, ಕೃಷಿ ಸಾಲ, ಬಡ್ಡಿದರ, ವಹಿವಾಟು, ಸದಸ್ಯರ ಒಳಗೊಳ್ಳುವಿಕೆ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಸೊಸೈಟಿಯ ಕಾರ್ಯವೈಖರಿ ಶ್ಲಾಸಿ ಮುಂದಿನ ಯೋಜನೆಗಳ ವಾಹಿತಿ ಪಡೆದುಕೊಂಡರು.

ಸಂದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ವಾತನಾಡಿ, 1 ಸಾವಿರ ಕೋಟಿ ವಹಿವಾಟು ಇರುವ ನಮ್ಮ ಸಂವು ನಾಲ್ಕು ಗ್ರಾಮಗಳ ಸದಸ್ಯರಿಗೆ ಉತ್ತಮ ಸೇವೆ ಒದಗಿಸುತ್ತಾ ಬಂದಿದೆ. ಆರ್ಥಿಕ ವಹಿವಾಟಿನ ಜತೆಗೆ ರೈತರಿಗೆ ಬಲ ತುಂಬುವ ನಿಟ್ಟಿನಲ್ಲಿ ವಾಹಿತಿ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಕೃಷಿ ಪೂರಕ ಉತ್ಪನ್ನ ಹಾಗೂ ಸಲಕರಣೆಗಳ ಒದಗಿಸಲು ಆದ್ಯತೆ ನೀಡಲಾಗುತ್ತಿದೆ ಎಂದರು.

ಅಂಗುಲ್ ಜಿಲ್ಲೆಯ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುವಾರ್ ಪ್ರಧಾನ್ ಹಾಗೂ ಬ್ಯಾಂಕರ್ಸ್ ಇನ್‌ಸ್ಟಿಟ್ಯೂಟ್ ಆಫ್ ರೂರಲ್ ಡೆವಲಪ್‌ಮೆಂಟ್‌ನ ಸಹಾಯಕ ಜನರಲ್ ವ್ಯಾನೇಜರ್ ಶಕ್ತಿ ಪಿ.ಮೊಹಪಾತ್ರ ಅವರನ್ನು ಸಂದ ವತಿಯಿಂದ ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಮಂಜು ದೇವಾಡಿಗ, ನಿರ್ದೇಶಕರಾದ ಮೋಹನ್ ಪೂಜಾರಿ, ಹೂವ ನಾಯ್ಕ, ರಾಜೇಶ್ ದೇವಾಡಿಗ, ಲಲಿತಾ ಪೂಜಾರಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಆರ್.ಪೈ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net