ಕತ್ರಿನಾ ಕೈಫ್ ಜತೆ ವಿಜಯ್ ದೇವರಕೊಂಡ ರೊಮ್ಯಾನ್ಸ್

Ullasa Lead
Published on

ಟಾಲಿವುಡ್ ನಟ ವಿಜಯ್ ದೇವರಕೊಂಡ ‘ಅರ್ಜುನ್ ರೆಡ್ಡಿ’ ಹಿಟ್ ಆದ ಬಳಿಕ ಅವರ ಚಹರೆಯೇ ಬದಲಾಗಿದೆ. ಸಿನಿಮಾ ಆಯ್ದುಕೊಳ್ಳುವ ರೀತಿಯಲ್ಲಿಯೂ ಹೊಸ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಅದರಂತೆ ಸದ್ಯ ಅವರ ಬತ್ತಳಿಕೆಯಲ್ಲಿ ಬಹುಭಾಷಾ ಸಿನಿಮಾಗಳೇ ಇವೆ ಎಂಬುದು ಮತ್ತೊಂದು ವಿಶೇಷತೆ. ಇದೀಗ ಅಂಥದ್ದೇ ಮತ್ತೊಂದು ಸಿನಿಮಾಕ್ಕೆ ವಿಜಯ್ ಆಯ್ಕೆಯಾಗಿದ್ದು, ಆ ಚಿತ್ರದಲ್ಲಿ ಅವರಿಗೆ ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ನಾಯಕಿಯಂತೆ! ಸದ್ಯ ಪುರಿ ಜಗನ್ನಾಥ್ ನಿರ್ದೇಶನದ ‘ಲೈಗರ್’ ಸಿನಿಮಾ ತೆಲುಗು, ತಮಿಳು, ಕನ್ನಡ ಮತ್ತು ಹಿಂದಿಯಲ್ಲಿಯೂ ಸಿದ್ಧವಾಗುತ್ತಿದೆ. ಅದರಂತೆ ಶಿವ ನಿರ್ವಾಣ ಮತ್ತು ಕೊರಟಾಲ ಶಿವ ನಿರ್ದೇಶನದ ಸಿನಿಮಾಗಳಿಗೂ ವಿಜಯ್ ಸಹಿ ಮಾಡಿದ್ದಾರೆ.

ಈ ಎರಡು ಪ್ರಾಜೆಕ್ಟ್ ಗಳ ಪೈಕಿ ಒಂದು ಚಿತ್ರದಲ್ಲಿ ಕತ್ರಿನಾ ಜತೆ ವಿಜಯ್ ನಟಿಸಿಲಿದ್ದಾರಂತೆ. ಸದ್ಯದ ಮಟ್ಟಿಗೆ ಹೀಗೊಂದು ಸುದ್ದಿ ಬಾಲಿವುಡ್​ನಲ್ಲಿ ಹರಿದಾಡುತ್ತಿದ್ದು, ಇನ್ನಷ್ಟೇ ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.ಇನ್ನು ಕತ್ರಿನಾ ಬಗ್ಗೆ ಹೇಳುವುದಾದರೆ, ಶ್ರೀರಾಮ್ ರಾಘವನ್ ನಿರ್ದೇಶನದ ‘ಮೆರ್ರಿ ಕ್ರಿಸ್ಮಸ್’ ಚಿತ್ರದಲ್ಲಿ ಅವರು ವಿಜಯ್ ಸೇತುಪತಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಜತೆಗೆ ಟೈಗರ್ ಫ್ರಾಂಚೈಸಿಯ ಮೂರನೆಯ ಚಿತ್ರವಾದ ಟೈಗರ್ 3 ಚಿತ್ರದಲ್ಲೂ ಕತ್ರಿನಾ ಅಭಿನಯಿಸು ತ್ತಿದ್ದಾರೆ. ಈ ಮಧ್ಯೆ, ‘ಫೋನ್ ಬೂತ್’ ಎಂಬ ಇನ್ನೊಂದು ಚಿತ್ರ ಬಿಡುಗಡೆಗೆ ಸಿದ್ಧವಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net