More

    ಕಾರ್ತಿಕಾ ಲೈಟ್​ ಬಿಲ್​ ಕೇಳಿ ನೀವು ಶಾಕ್​ ಆಗ್ತೀರಾ!

    ಮುಂಬೈನಲ್ಲಿರುವ ಸೆಲೆಬ್ರಿಟಿಗಳೆಲ್ಲಾ ಶಾಕ್ ಆಗಿಬಿಟ್ಟಿದ್ದಾರೆ. ಅದಕ್ಕೆ ಕಾರಣ, ಕರೆಂಟ್ ಬಿಲ್. ಮಹಾರಾಷ್ಟ್ರದಲ್ಲಿ ಜೂನ್ ತಿಂಗಳ ಕರೆಂಟ್ ಬಿಲ್ ಬಂದಿದೆ. ಅದನ್ನು ನೋಡಿ, ಜನ ಸಾಮಾನ್ಯರಷ್ಟೇ ಅಲ್ಲ, ದೊಡ್ಡ ದೊಡ್ಡ ಸೆಲೆಬ್ರಿಟಿಗಳೆಲ್ಲಾ ಸುಸ್ತಾಗಿದ್ದಾರೆ. ಅದಕ್ಕೆ ಕಾರಣ, ಬಿಲ್ ಮೊತ್ತಾ ವಿಪರೀತ ಏರಿರುವುದು.

    ಹೌದು, ನಟಿ ತಾಪ್ಸಿ ಪನ್ನು ಮನೆಗೆ ಏಪ್ರಿಲ್ ತಿಂಗಳಲ್ಲಿ 4390 ರೂಗಳ ಬಿಲ್ ಬಂದಿತ್ತಂತೆ. ಮೇ ತಿಂಗಳಲ್ಲಿ 3850 ಬಿಲ್ ಬಂದಿದೆ. ಇನ್ನು ಜೂನ್ ತಿಂಗಳಲ್ಲಿ ಅವರಿಗೆ ಬಂದಿರುವ ಬಿಲ್ ಎಷ್ಟು ಗೊತ್ತಾ? 36 ಸಾವಿರ ರೂಗಳದ್ದು. ಇದನ್ನು ನೋಡಿ, ತಾಪ್ಸಿ ಹೌಹಾರಿದ್ದಾರೆ. ಒಂದೇ ತಿಂಗಳಲ್ಲಿ ಇಷ್ಟೊಂದು ಮೊತ್ತ ಹೆಚ್ಚಾಗುವುದಕ್ಕೆ ಕಾರಣವೇನಿರಬಹುದು ಎಂದು ಪ್ರಶ್ನೆ ಮಾಡಿದ್ದಾರೆ.

    ಇದನ್ನೂ ಓದಿ: ವೆಬ್​ ಸಿರೀಸ್​ನಲ್ಲಿ ಪ್ರಕಾಶ್​ ರಾಜ್ ಮುಖ್ಯಭೂಮಿಕೆ

    ಈ ಕುರಿತು ಮಾತನಾಡಿರುವ ಅವರು, ‘ಮೂರು ತಿಂಗಳಲ್ಲಿ ನಾವು ಮನೆಯಲ್ಲಿದ್ದರೂ ಹೆಚ್ಚೇನು ವಿದ್ಯುತ್ ಬಳಸಿಲ್ಲ. ಆದರೂ ಇಷ್ಟೊಂದು ಏರಿಕೆ ಆಗುವುದಕ್ಕೆ ಹೇಗೆ ಸಾಧ್ಯ? ಇದಾದರೂ ಪರವಾಗಿಲ್ಲ. ನನ್ನ ಇನ್ನೊಂದು ಮನೆಯಲ್ಲಿ ಯಾರೂ ವಾಸವಿಲ್ಲ. ಆದರೂ ಆ ಮನೆಗೆ ದೊಡ್ಡ ಬಿಲ್ ಬಂದಿದೆ. ಅದನ್ನು ನೋಡಿದರೆ, ನಮಗೆ ಗೊತ್ತಿಲ್ಲದೆಯೇ ಅಲ್ಲಿ ಯಾರಾದರೂ ವಾಸವಿದ್ದಾರಾ ಎಂಬ ಅನುಮಾನ ಮೂಡಿಬರುತ್ತಿದೆ’ ಎಂದು ಅವರು ತಮಾಷೆ ಮಾಡಿದ್ದಾರೆ.

    ಇದು ಬರೀ ತಾಪ್ಸಿ ಒಬ್ಬರ ಕಥೆಯಲ್ಲ, ಹಲವು ಸೆಲೆಬ್ರಿಟಿಗಳಿಗೆ ಇದೇ ಅನುಭವ ಆಗಿದೆ. ಹ್ಯೂಮಾ ಖುರೇಷಿಗೆ ತಿಂಗಳಿಗೆ 50 ಸಾವಿರ ಬಿಲ್ ಬಂದಿದೆಯಂತೆ. ಸೋಹಾ ಅಲಿ ಖಾನ್‌ಗೆ ಪ್ರತಿ ತಿಂಗಳು ಬರುವುದಕ್ಕಿಂತ ಮೂರರಷ್ಟು ಹೆಚ್ಚಾಗಿ ಬಿಲ್ ಬಂದಿದೆಯಂತೆ. ಡೀನೋ ಮೊರಿಯಾ, ಅಲಿ ಫಜಲ್, ವೀರ್ ದಾಸ್ ಮುಂತಾದವರಿಗೂ ತಿಂಗಳಿಗೆ 30, 40 ಸಾವಿರದ ಬಿಲ್ ಬಂದಿದೆ.

    ಇದನ್ನೂ ಓದಿ: ಸಾವಿನ ಬಾಗಿಲವರೆಗೂ ಹೋಗಿ ಬಂದಿದ್ದೆ; ಕಷ್ಟದ ದಿನಗಳನ್ನು ನೆನೆದ ಮನೋಜ್​ ಬಾಜಪೇಯ್​

    ದರ್ಶನ್ ಅಭಿನಯದ ‘ಬೃಂದಾವನ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಕಾರ್ತಿಕಾ ನಾಯರ್, ಇವರೆಲ್ಲರಿಗಿಂತ ದೊಡ್ಡ ಸಂತ್ರಸ್ತರು ಎಂದರೆ ತಪ್ಪಿಲ್ಲ. ಏಕೆಂದರೆ, ಕಾರ್ತಿಕಾಗೆ ಸುಮಾರು ಒಂದು ಲಕ್ಷದ ಬಿಲ್ ಬಂದಿದ್ದು, ಅವರು ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ. ಇಲ್ಲಿ ಹೇಳೋರು, ಕೇಳೋರು ಯಾರೂ ಇಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ಕಾರ್ತಿಕಾ ಸೇರಿದಂತೆ ಎಲ್ಲಾ ಸೆಲೆಬ್ರಿಟಿಗಳು ಆಗುತ್ತಿರುವ ಅನಾಹುತದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಶಾಕ್ ಆಗಿರುವ ಸೆಲೆಬ್ರಿಟಿಗಳಿಗೆ ಯಾರು, ಹೇಗೆ ಪರಿಹಾರ ಕೊಡುತ್ತಾರೋ ಗೊತ್ತಿಲ್ಲ.

    ಮದುವೆಯಾದ ಆರಂಭದ ಆರು ತಿಂಗಳಲ್ಲಿ, ಅನುಷ್ಕಾ ಜತೆ ಕೊಹ್ಲಿ ಕಳೆದ ದಿನಗಳೆಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts