ಮದುವೆಯಾದ ಆರಂಭದ ಆರು ತಿಂಗಳಲ್ಲಿ, ಅನುಷ್ಕಾ ಜತೆ ಕೊಹ್ಲಿ ಕಳೆದ ದಿನಗಳೆಷ್ಟು?

anushka-sharma-virat-kohli-759
Published on

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮದುವೆಯಾಗಿ ಮುಂಬರುವ ಡಿಸೆಂಬರ್​ಗೆ 3 ವರ್ಷಗಳಾಗಲಿವೆ. ಆದರೆ, ಮದುವೆಯಾದ ಆರಂಭದ 6 ತಿಂಗಳಲ್ಲಿ ಕೇವಲ 21 ದಿನ ಮಾತ್ರ ಈ ಜೋಡಿ ಒಟ್ಟಾಗಿದ್ದರಂತೆ. ಈ ಗೌಪ್ಯ ವಿಚಾರವನ್ನು ಸ್ವತಃ ಅನುಷ್ಕಾ ಶರ್ಮಾ ಹೇಳಿಕೊಂಡಿದ್ದಾರೆ.

ಹೌದು, ಟೀಮ್​ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ಮದುವೆಯಾದ ಸಂದರ್ಭದಲ್ಲಿ ಸಾಲು ಸಾಲು ವಿದೇಶಿ ಸರಣಿಗಳಲ್ಲಿ ಭಾಗವಹಿಸಿದ್ದರು. ಟೆಸ್ಟ್​, ಏಕದಿನ ಮತ್ತು ಟಿ 20 ಸರಣಿಗಳಲ್ಲಿ ಭಾಗವಹಿಸಿದ್ದರು. ಆ ವೇಳೆ ಬಿಡುವು ಮಾಡಿಕೊಂಡು ಅನುಷ್ಕಾ ಮತ್ತು ಕೊಹ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದರು. ‘ವಿರಾಟ್​ ನನ್ನನ್ನು ಭೇಟಿಯಾಗಲು ಅಥವಾ ನಾನು ವಿರಾಟ್​ನನ್ನು ಭೇಟಿಯಾಗಲು ಬಂದಾಗೆಲ್ಲ ಜನ ಹಾಲಿಡೇ ಎಂದುಕೊಳ್ಳುತ್ತಿದ್ದರು. ಆದರೆ, ವಿರಾಟ್​ ಆನ್​ ಡ್ಯೂಟಿ ಅಂತ ಯಾರಿಗೂ ಗೊತ್ತಿರುತ್ತಿರಲಿಲ್ಲ’ ಎನ್ನುತ್ತಾರೆ ಅನುಷ್ಕಾ.

‘ಮದುವೆಯಾದ ಆರಂಭದ 6 ತಿಂಗಳು ನಾವು ಒಟ್ಟಿಗೆ ಕಳೆದ ದಿನಗಳು ಕೇವಲ 21 ದಿನ ಮಾತ್ರ. ನಾನು ಅದನ್ನು ಲೆಕ್ಕಹಾಕಿದ್ದೇನೆ. ವಿದೇಶದಲ್ಲಿದ್ದಾಗ ಭೇಟಿಯಾದಾಗ, ಒಟ್ಟಿಗೆ ಕುಳಿತು ಒಂದೇ ಊಟಮಾಡುವಷ್ಟು ಸಮಯ ಸಿಗುತ್ತಿತ್ತು. ಆ ಸಮಯವೇ ನನಗೆ ಬಹುಮುಖ್ಯವಾಗಿತ್ತು’ ಎಂಬುದು ಅನುಷ್ಕಾ ಮಾತು.

ಇದೀಗ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಸುದೀರ್ಘ ಸಮಯವನ್ನು ಒಟ್ಟಿಗೆ ಕಳೆಯುತ್ತಿದ್ದೇವೆ ಎಂದೂ ಹೇಳಿಕೊಳ್ಳುತ್ತಾರೆ ಅನುಷ್ಕಾ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net