More

    ಸಾವಿನ ಬಾಗಿಲವರೆಗೂ ಹೋಗಿ ಬಂದಿದ್ದೆ; ಕಷ್ಟದ ದಿನಗಳನ್ನು ನೆನೆದ ಮನೋಜ್​ ಬಾಜಪೇಯ್​

    ಸಿನಿಮಾ ಹಿನ್ನೆಲೆಯಿಲ್ಲದೆ, ಗಾಡ್​ಫಾದರ್ ನೆರಳಿಲ್ಲದೆ ಬಾಲಿವುಡ್​ನಲ್ಲಿ ಬದುಕುವುದು ಕಷ್ಟ. ಆದರೂ ಹಾಗೆ ನೆಲೆನಿಂತ ಎಷ್ಟೋ ಮಂದಿ ಇದೀಗ ದೊಡ್ಡ ದೊಡ್ಡ ಸ್ಟಾರ್​ಗಳ ಪಟ್ಟಿಯಲ್ಲಿ ಸ್ಥಾನ ಅಲಂಕರಿಸಿದ್ದಾರೆ. ಎಲ್ಲ ಇದ್ದೂ ಮೂಲೆಗುಂಪಾದವರೂ ಕಣ್ಣಿಗೆ ಕಾಣುತ್ತಾರೆ. ಇದೀಗ ದೂರದ ಬಿಹಾರದಿಂದ ಅನ್ನ ಅರಸಿಕೊಂಡು ಬಂದಿದ್ದ ವ್ಯಕ್ತಿಯೋರ್ವ ಬಾಲಿವುಡ್​ನಲ್ಲಿ ತಮ್ಮದೆ ವಿಶಿಷ್ಟ ಮ್ಯಾನರಿಸಂನಿಂದಲೇ ಗುರುತಿಸಿಕೊಂಡಿದ್ದಾರೆ. ಆ ನಟ ಸಾವಿನ ಬಾಗಿಲವರೆಗೂ ಹೋಗಿ ಬಂದಿದ್ದಾರೆ ಎಂದರೆ ನೀವು ನಂಬಲೇಬೇಕು! ಹೌದು ಅವರೇ ಮನೋಜ್​ ಬಾಜಪೇಯ್​..

    ಇದನ್ನೂ ಓದಿ: ಟಿಕ್​ಟಾಕ್​ ಬ್ಯಾನ್​ ಆದ್ರೇನಂತೆ HiPi ಇದೆಯಲ್ಲ!

    ಇತ್ತೀಚೆಗಷ್ಟೇ ಸೋನಿ ಲೈವ್​ ಇಂಡಿಯಾ ಹ್ಯೂಮನ್ಸ್ ಆಫ್​ ಬಾಂಬೆ ಅನ್ನೋ ಆನ್ಲೈನ್​ ಕಾರ್ಯಕ್ರಮ ಆಯೋಜಿಸಿತ್ತು. ಅದರಲ್ಲಿ ಮನೋಜ್​ ಬಾಜಪೇಯ್ ತಮ್ಮ ಜೀವನದ ಒಂದಷ್ಟು ಘಟನಾವಳಿಗಳನ್ನು ತೆರೆದಿಟ್ಟಿದ್ದರು. ಅದರ ಆಯ್ದ ಭಾಗ ಇಲ್ಲಿದೆ.
    ‘ನಾನು ಬಿಹಾರದವನು. ಕೃಷಿ ಕುಟುಂಬದಿಂದ ಬಂದವು. ಗುಡಿಸಲೇ ನಮ್ಮ ಶಾಲೆಯಾಗಿತ್ತು. ಯಾವಾಗಲಾದರೂ ಪಟ್ಟಣಕ್ಕೆ ಹೋದರೆ, ಆಗ ನನ್ನನ್ನು ಹೆಚ್ಚು ಆಕರ್ಷಿಸಿದ್ದು ಚಿತ್ರಮಂದಿರ. ಅದರಲ್ಲೂ ಅಮಿತಾಬ್​ ಬಚ್ಚನ್​ ಅವರ ದೊಡ್ಡ ಅಭಿಮಾನಿ. ಆಗಿನ್ನು ನನಗೆ ಕೇವಲ 9 ವರ್ಷ!.

    ಇದನ್ನೂ ಓದಿ: ನನ್ನ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವುದನ್ನು ಬಿಡಿ, ನನ್ನ ಆತ್ಮೀಯರಲ್ಲಿ ಹಾರ್ಟ್​ ಪೇಷೆಂಟ್ಸ್​ ಇದ್ದಾರೆ: ಎಸ್​.ಜಾನಕಿ

    17 ವರ್ಷದವನಾದಾಗ ಮನೆ ಬಿಟ್ಟು ರಂಗಭೂಮಿಯತ್ತ ಬಂದೆ. ಹಾಗೆ ಬಂದಿದ್ದು ನಮ್ಮ ಮನೆಯಲ್ಲಿ ಗೊತ್ತಿರಲಿಲ್ಲ. ಎಲ್ಲಿ ಬೈಯುತ್ತಾರೋ ಎಂದು ಮನೆಗೆ ಪತ್ರ ಬರೆದೆ, ಬಳಿಕ 200 ರೂ ಕಳುಹಿಸಿಕೊಟ್ಟರು. ದಿನಕಳೆದಂತೆ ಸಿನಿಮಾ ಕ್ಷೇತ್ರದತ್ತ ಒಲವು ಬೆಳೆಯಿತು. ಸಿನಿಮಾ ಗೊತ್ತಿರದ ನನಗೆ ಮೂರು ಸಿನಿಮಾ ಅವಕಾಶಗಳು ಮಿಸ್​ ಆದವು. ಮನಸ್ಸು ಭಾರವೆನಿಸಿ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದೆ. ಆದರೆ, ನನ್ನ ಪಕ್ಕ ಹಲವು ಜನ ಮಲಗುತ್ತಿದ್ದರಿಂದ, ನಾನು ಒಬ್ಬಂಟಿಯಾಗಿರಲಿಲ್ಲ. ಮಹೇಶ್​ ಭಟ್​ ಅವರ ಧಾರಾವಾಹಿಯಲ್ಲಿ ಅವಕಾಶ ಸಿಕ್ಕಿತು. ಪ್ರತಿ ಏಪಿಸೋಡ್​ಗೆ 1500 ನಿಗದಿಯಾಯಿತು. ಅದಾದ ಬಳಿಕ ಬದಲಾವಣೆಗಳಾದವು. ಸಿನಿಮಾ ಅವಕಾಶ ಸಿಕ್ಕಿತು. ನನ್ನ ನಟನೆ ನೋಡಿ ಸತ್ಯ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಕರಿಯರ್​ ಮತ್ತೊಂದು ಮಗ್ಗುಲಿಗೆ ಹೊರಳಿತು’ ಎಂದು ನಡೆದು ಬಮದ ಹಾದಿಯನ್ನು ತಿರುಗಿ ನೋಡುತ್ತಾರೆ ಮನೋಜ್​.
    ಸದ್ಯ ಬಾಲಿವುಡ್​ನಲ್ಲಿ ಮನೋಜ್​ ಬಾಜಪೇಯ್​ಗೆ ಬಹು ಬೇಡಿಕೆ ಇದೆ. ವೆಬ್​ಸರಣಿಗಳು, ಸಿನಿಮಾ ಸೇರಿ ಸಾಲು ಸಾಲು ಪ್ರಾಜೆಕ್ಟ್​ಗಳಲ್ಲಿ ಅವರು ಬಿಜಿಯಾಗಿದ್ದಾರೆ. (ಏಜೆನ್ಸೀಸ್​)

    ನೋಟ್​ ಬ್ಯಾನ್​ ಆದಾಗಿನ ಸ್ಥಿತಿ, ಇದೀಗ ಟಿಕ್​ಟಾಕರ್ಸ್​ಗೆ ಬಂದಿದೆ; ನಟಿ, ಸಂಸದೆ ನುಸ್ರತ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts