ಟಿಕ್​ಟಾಕ್​ ಬ್ಯಾನ್​ ಆದ್ರೇನಂತೆ HiPi ಇದೆಯಲ್ಲ!

collagezee521-1593534993677
Published on

ಈಗಾಗಲೇ ಸಿನಿಮಾ ನಿರ್ಮಾಣ ಮತ್ತು ಕಿರುತೆರೆಯಲ್ಲಿ ಮುಂಚೂಣಿಯಲ್ಲಿರುವ ಜೀ ಕಂಪನಿ ಹೊಸದಾಗಿ HiPi ಆ್ಯಪ್​ವೊಂದನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಬಿಟ್ಟಿದೆ. ಟಿಕ್​ಟಾಕ್​ ರೀತಿಯಲ್ಲಿಯೇ ಇದರಲ್ಲಿಯೂ ಶಾರ್ಟ್​ ವಿಡಿಯೋ ತುಣುಕುಗಳನ್ನು ಸಿದ್ಧಪಡಿಸಿ ಅಪ್​ಲೋಡ್​ ಮಾಡಬಹುದು.

ಚೀನಾದ 59 ಆ್ಯಪ್​ಗಳ ನಿಷೇಧದ ಬಳಿಕ ಭಾರತದಲ್ಲಿಯೇ ಅಭಿವೃದ್ಧಿಪಡಿಸಲಾದ ಒಂದಷ್ಟು ಆ್ಯಪ್​ಗಳು ಭಾರೀ ಸದ್ದು ಮಾಡುತ್ತಿವೆ. ಈಗಾಗಲೇ ಚಿಂಗಾರಿ ಆ್ಯಪ್​ ಭಾರೀ ಪ್ರಮಾಣದಲ್ಲಿ ಡೌನ್​ಲೋಡ್​ ಆಗುತ್ತಿದೆ. ಅದೇ ರೀತಿ ಜೀ 5 ಕಡೆಯಿಂದಲೂ ಇದೀಗ ಟಿಕ್​ಟಾಕ್​ ಅನ್ನೇ ಹೋಲುವ HiPi ಆ್ಯಪ್​ ಅಭಿವೃದ್ಧಿಪಡಿಸಲಾಗಿದೆ.

ಯೂಸರ್​ ಫ್ರೆಂಡ್ಲಿ ಮುಖ್ಯ ಉದ್ದೇಶವಾಗಿಟ್ಟುಕೊಂಡು ಹೊಸ ಹೊಸ ಆಪ್ಶನ್​ಗಳ ಮೂಲಕ ಈ ಆ್ಯಪ್​ ಲಾಂಚ್​ ಆಗಿದೆ. ಟಿಕ್​ಟಾಕ್​ನಲ್ಲಿ 15 ಸೆಕೆಂಡ್​ನ ಆಡಿಯೋಗೆ ಲಿಪ್​ಸಿಂಕ್​ ಮಾಡುವ ಆಪ್ಶನ್​ ಇತ್ತು. HiPiನಲ್ಲಿ ಒಂದು ನಿಮಿಷದ ವರೆಗೂ ಆಡಿಯೋ ಲಭ್ಯವಾಗಲಿದೆ.

ಅಂದಹಾಗೆ, ಜೀ5 ಭಾರತದ ಪ್ರಮುಖ ಓಟಿಟಿ ವೇದಿಕೆಯಲ್ಲೊಂದಾಗಿದೆ. ಬರೋಬ್ಬರಿ 100 ಮಿಲಿಯನ್​ ಬಾರಿ ಡೌನ್​ಲೋಡ್​ ಆಗಿದೆ. ಇದೀಗ ಅದರ ಬೆನ್ನಲ್ಲೇ ಹಾಯ್​ಫಾಯ್​ ಆ್ಯಪ್ ಬಿಡುಗಡೆ ಮಾಡಿದ್ದಾರೆ.

ಈಗಾಗಲೇ ಭಾರತದ್ದೇ ಆ್ಯಪ್​ಗಳಾದ ಬೊಲೋ ಇಂಡ್ಯಾ, ಚಿಂಗಾರಿ, ಮಿತ್ರೋಂ ಆ್ಯಂಡ್​ ರೊಪೊಸೋ ಬಳಕೆಯಲ್ಲಿವೆ. ರೊಪೋಸೋ 50 ಮಿಲಿಯನ್​, ಮಿತ್ರೋ 10 ಮಿಲಿಯನ್​ ಚಿಂಗಾರಿ 3.5 ಮಿಲಿಯನ್​ ಡೌನ್​ಲೋಡ್ ಆಗಿವೆ. ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net