

ಬೆಂಗಳೂರು: ಟಿಕ್ ಟಾಕ್ ಆ್ಯಪ್ ನಿಷೇಧಕ್ಕೆ ಒಳಗಾದ ಕೂಡಲೇ ಪರ್ಯಾಯ ಆ್ಯಪ್ ಯಾವುದೆಂದು ಹುಡುಕಿದ್ರು ಭಾರತೀಯರು. ಇನ್ನೊಂದೆಡೆ ಟಿಕ್ಟಾಕ್ ಬ್ಯಾನ್ ಆದ ಕಾರಣ, ಜನ ಮೆಚ್ಚುಗೆಗಾಗಿ ಇನ್ನಿಲ್ಲದಂತೆ ಪ್ರಯತ್ನಿಸುತ್ತಿದ್ದ ಯುವತಿಯೊಬ್ಬಳು ಕಣ್ಣೀರು ಹಾಕಿದ ವಿಡಿಯೋ ವೈರಲ್ ಆಗಿತ್ತು. ಇವೆಲ್ಲದರ ನಡುವೆ ಗಮನ ಸೆಳೆಯಿತು ಬೆಂಗಳೂರಿನ ಚಿಂಗಾರಿ.
ಬೆಂಗಳೂರಿನ ಕೋರಮಂಗಲದಲ್ಲಿ ಕಚೇರಿ ಹೊಂದಿರುವ ಚಿಂಗಾರಿ ಆ್ಯಪ್ - ಶಾರ್ಟ್ ವಿಡಿಯೋ ಆ್ಯಪ್ ಆಗಿ ಗಮನಸೆಳೆದಿದೆ. ಬೆಂಗಳೂರಿನ ಚಿಂಗಾರಿ ಆ್ಯಪ್ ನಲ್ಲಿ ಟಿಕ್ಟಾಕ್ನಲ್ಲಿರುವಂಥದ್ದೇ ಫೀಚರ್ ಇದ್ದ ಕಾರಣ ಬಹುಬೇಗನೆ ಎಲ್ಲರ ಮೆಚ್ಚುಗೆ ಪಾತ್ರವಾಯಿತದು. ಗೂಗಲ್ ಪ್ಲೇಸ್ಟೋರ್ನಲ್ಲಿ 25 ಲಕ್ಷಕ್ಕೂ ಅಧಿಕ ಡೌನ್ಲೋಡ್ ಆಗಿದೆ. ಜೂನ್ 27ರಂದು ಅಪ್ಡೇಟ್ ಆಗಿರುವ ಆ್ಯಪ್, ಜೂನ್ 29ರಂದು ಚೀನಾ ಮೂಲದ 59 ಆ್ಯಪ್ಗಳು ಬ್ಯಾನ್ ಆಗುತ್ತಿದ್ದಂತೆ ಟಿಕ್ಟಾಕ್ಗೆ ಪರ್ಯಾಯವೆಂಬಂತೆ ಬೇಡಿಕೆ ಪಡೆದುಕೊಂಡಿದೆ.
ಇದನ್ನೂ ನೋಡಿ: ಟಿಕ್ಟಾಕ್ಗಾಗಿ ಕಣ್ಣೀರಿಟ್ಟ ಮಹಿಳೆ
ಈ ಆ್ಯಪನ್ನು ವಿಶ್ವಾತ್ಮ ನಾಯಕ್ ಮತ್ತು ಸಿದ್ಧಾರ್ಥ ಗೌತಮ್ ಎಂಬ ಇಬ್ಬರು ಪ್ರೋಗ್ರಾಮರ್ಗಳು ಇದನ್ನು ಅಭಿವೃದ್ಧಿಪಡಿಸಿದ್ದು, ಒಂದೇ ತಿಂಗಳಲ್ಲಿ 1 ಲಕ್ಷ ಡೌನ್ಲೋಡ್ ದಾಟಿತ್ತು. ಇದು ಇಂಗ್ಲಿಷ್, ಹಿಂದಿ, ಬಾಂಗ್ಲಾ, ಗುಜರಾತಿ, ಮರಾಠಿ , ಕನ್ನಡ, ಪಂಜಾಬಿ, ಮಲಯಾಳಂ, ತಮಿಳು ಮತ್ತು ತೆಲುಗುಭಾಷೆಯಲ್ಲಿ ಲಭ್ಯವಿದೆ. ಚಿಂಗಾರಿಯ ಸಹಸಂಸ್ಥಾಪಕ ಸುಮಿತ್ ಘೋಷ್ ಅವರು ಆಂಗ್ಲ ಭಾಷಾ ಟಿವಿ ಚಾನೆಲ್ ಜತೆಗೆ ಮಾತನಾಡುತ್ತ, ಚಿಂಗಾರಿ ಆ್ಯಪ್ ಗಂಟೆಗೆ 3-4 ಲಕ್ಷ ಡೌನ್ಲೋಡ್ ಆಗತೊಡಗಿದೆ ಈಗ ಎಂದು ಹೇಳಿದ್ದಾರೆ. (ಏಜೆನ್ಸೀಸ್)