More

    ಬರಿ ಬ್ರಾ ತೊಟ್ಟ ಫೋಟೋವನ್ನು ಫ್ಯಾಮಿಲಿ ಗ್ರೂಪ್​ನಲ್ಲಿ ಹಂಚಿಕೊಂಡ ಯುವತಿ! ಕಾರಣವೇನು ಗೊತ್ತಾ?

    ಬೆಂಗಳೂರು: ಕೆಲವೊಮ್ಮೆ ವಾಟ್ಸ್​ಆ್ಯಪ್​ನಲ್ಲಿ ಯಾರಿಗೋ ಕಳುಹಿಸಬೇಕಾದ ಮೆಸೇಜ್​, ಫೋಟೋಗಳನ್ನು ಮಿಸ್​ ಆಗಿ ಇನ್ಯಾರಿಗೋ ಕಳಿಸಿರುವ ಅನುಭವ ನಿಮಗೂ ಇರುತ್ತದೆ. ಆದರೆ ಇಲ್ಲೊಬ್ಬ ಯುವತಿ ಮಾಡಿದ ತಪ್ಪಿನಿಂದಾಗಿ ಆಕೆ ಪೂರ್ತಿ ಕುಟುಂಬದ ಎದುರು ತಲೆ ತಗ್ಗಿಸುವಂತಾಗಿಬಿಟ್ಟಿದೆ.

    ಟಿಕ್​ಟಾಕನಲ್ಲಿ ಸಕ್ರಿಯವಿರುವ ಬೆಥಾನಿ ಮಾರ್ಗ್ರೆಟ್​ ಈ ರೀತಿ ಪೇಚಿಗೆ ಸಿಕ್ಕ ಯುವತಿ. ಇತ್ತೀಚೆಗೆ ಒಂದು ದಿನ ಆಕೆ ತನ್ನ ಬಾಯ್​ಫ್ರೆಂಡ್​ನೊಂದಿಗೆ ಶಾಪಿಂಗ್​ಗೆ ತೆರಳಿದ್ದಳಂತೆ. ಅಲ್ಲಿ ಒಂದು ಬ್ರಾ ನೋಡಿ ಇಷ್ಟವಾಗಿ ಅದನ್ನು ತೆಗೆದುಕೊಂಡಿದ್ದಾಳೆ. ಮನೆಗೆ ಹೋದವಳೇ ಅದನ್ನು ಹಾಕಿಕೊಂಡು ನೋಡಬೇಕೆಂದು ನಿರ್ಧರಿಸಿದ್ದಾಳೆ. ಬಾಯ್​ಫ್ರೆಂಡ್​ಗೂ ತನ್ನೊಂದಿಗೆ ಮನೆಗೆ ಬರಲು ಕೇಳಿದ್ದಾಳೆ. ಆದರೆ ಆತನಿಗೆ ಬೇರೆ ಕೆಲಸವಿದ್ದಿದ್ದರಿಂದಾಗಿ ಫೋಟೋ ಕಳುಹಿಸು, ನೋಡುತ್ತೇನೆ ಎಂದು ಆಕೆಗೆ ತಿಳಿಸಿದ್ದಾನೆ.

    ಅದರಂತೆ ಮನೆಗೆ ಬಂದು ಬ್ರಾ ತೊಟ್ಟು ಫಿಟಿಂಗ್​ ಸರಿಯಾಗಿದೆ ಎಂದು ಖುಷಿ ಪಟ್ಟ ಬೆಥಾನಿ ತಕ್ಷಣ ಫೋಟೋ ತೆಗೆದುಕೊಂಡಿದ್ದಾಳೆ. ಅದನ್ನು ಬಾಯ್​ಫ್ರೆಂಡ್​ಗೆ ಕಳುಹಿಸಿ, ಬಟ್ಟೆ ಹಾಕಿಕೊಳ್ಳಲು ಮುಂದಾಗಿದ್ದಾಳೆ. ಅಷ್ಟರಲ್ಲಿ ಆಕೆಯ ಅಣ್ಣ ಕರೆ ಮಾಡಿ ಒಂದು ಶಾಕಿಂಗ್​ ಪ್ರಶ್ನೆ ಕೇಳಿದ್ದಾನೆ. ನೀನೇಕೆ ಫ್ಯಾಮಿಲಿ ಗ್ರೂಪಿನಲ್ಲಿ ಬರಿ ಬ್ರಾ ತೊಟ್ಟ ಫೋಟೋ ಕಳುಹಿಸಿದ್ದೀಯ. ಮೊದಲು ಅದನ್ನು ಡಿಲೀಟ್​ ಮಾಡು ಎಂದು ಹೇಳಿದ್ದಾನೆ. ಅದನ್ನು ಕೇಳಿದ ತಕ್ಷಣ ಫೋನ್​ ಕಟ್ ಮಾಡಿ ವಾಟ್ಸ್​ಆ್ಯಪ್​ ಪರಿಶೀಲಿಸಿದಾಗ ಯುವತಿಗೆ ತಾನು ಮಾಡಿದ ತಪ್ಪು ಅರಿವಾಗಿದೆ. ಬಾಯ್​ಫ್ರೆಂಡ್​ ಬದಲಾಗಿ ಫ್ಯಾಮಿಲಿ ಗ್ರೂಪ್​ಗೆ ಫೋಟೋ ಹಾಕಿದ್ದು ತಿಳಿದು ಆ ಫೋಟೋವನ್ನು ಡಿಲೀಟ್​ ಮಾಡಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಕುಟುಂಬದ ಕೆಲವರು ಆ ಫೋಟೋವನ್ನು ನೋಡಿದ್ದಾಗಿದೆ. ಅದಾದ ನಂತರ ಕೆಲವರಲ್ಲಿ ಸಮಜಾಯಿಷಿ ಕೊಡಬೇಕಾಯಿತು ಎಂದು ಆಕೆ ತನ್ನ ಟಿಕ್​ಟಾಕ್​ ಖಾತೆಯಲ್ಲಿ ನಡೆದ ಘಟನೆಯನ್ನು ವಿವರಿಸಿಕೊಂಡಿದ್ದಾಳೆ. (ಏಜೆನ್ಸೀಸ್​)

    ಧೋನಿ ತಂದೆ-ತಾಯಿಗೆ ಕರೊನಾ ಸೋಂಕು! ಆಸ್ಪತ್ರೆಗೆ ದೌಡಾಯಿಸಿದ ದಂಪತಿ

    ಏನಿದು ರಶ್ಮಿಕಾರ ಹೊಸ ಅವತಾರ!? ತಮಿಳುನಾಡಿನಲ್ಲಿ ರಾರಾಜಿಸಿದ ಚಸ್ಮಾ ಸುಂದರಿಯ ಹೇರ್​ಲೆಸ್​ ಫೋಟೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts