More

  ಹೌದು ನಾನು ಸಲಿಂಗಕಾಮಿಯೇ! ಧನುಷ್​ ಜತೆಗಿನ ಸಂಬಂಧ ಒಪ್ಪಿಕೊಂಡ್ರಾ ಸುಚಿ ಮಾಜಿ ಪತಿ ಕಾರ್ತಿಕ್​?

  ಚೆನ್ನೈ: ತಾನೊಬ್ಬ ಸಲಿಂಗಕಾಮಿ ಎಂದು ಹೇಳಿಕೊಳ್ಳಲು ನನ್ನ ಗಂಡನಿಗೆ ಎದೆಗಾರಿಕೆ ಇಲ್ಲ ಎಂಬ ಮಾಜಿ ಪತ್ನಿ ಸುಚಿತ್ರಾ ಹೇಳಿಕೆಗೆ ನಟ ಕಾರ್ತಿಕ್​ ಖಡಕ್ ಉತ್ತರ ನೀಡಿದ್ದಾರೆ. ಹೌದು, ನಾನೊಬ್ಬ ಸಲಿಂಗಕಾಮಿ​! ಈ ರೀತಿ ಹೇಳಿಕೊಳ್ಳಲು ನನಗೆ ಯಾವುದೇ ನಾಚಿಕೆ ಇಲ್ಲ ಎಂದಿದ್ದಾರೆ.

  ಇನ್​​ಸ್ಟಾಗ್ರಾಂನಲ್ಲಿ ವಿಡಿಯೋ ಪೋಸ್ಟ್​ ಮಾಡಿರುವ ಕಾರ್ತಿಕ್​, ನಾನು ಸಲಿಂಗಕಾಮಿ ಆಗಿದ್ದರೆ, ನಾನು ಸಲಿಂಗಕಾಮಿ ಎಂದು ಹೇಳಿಕೊಳ್ಳಲು ನಾಚಿಕೆಪಡುವುದಿಲ್ಲ. ಅಸ್ತಿತ್ವದಲ್ಲಿರುವ ಯಾವುದೇ ರೀತಿಯ ಲೈಂಗಿಕತೆಯ ಬಗ್ಗೆ ನಾನು ತುಂಬಾ ಹೆಮ್ಮೆಪಡುತ್ತೇನೆ. ಯಾವುದೇ ಕಾರಣಕ್ಕೂ ನಾನು ನಾಚಿಕೆ ಪಡುವುದಿಲ್ಲ. ಲೈಂಗಿಕತೆಗೆ ಸಂಬಂಧಿಸಿದ ಯಾವುದೇ ರೀತಿಯ ರ್ಯಾಲಿ ನಡೆದರೆ ನಾನು ಹೆಮ್ಮೆಯಿಂದ ಭಾಗವಹಿಸುತ್ತೇನೆ. ಇಲ್ಲಿ ಅವಮಾನ ಅಂತಾ ಏನೂ ಇಲ್ಲ. ಕೇವಲ ಹೆಮ್ಮೆ ಇದೆ ಅಷ್ಟೇ ಎಂದು ಹೇಳುವ ಮೂಲಕ ತನ್ನ ಮಾಜಿ ಪತ್ನಿ ಸುಚಿತ್ರಾಗೆ ಕಾರ್ತಿಕ್​ ತಿರುಗೇಟು ನೀಡಿದ್ದಾರೆ.

  ಸುಚಿತ್ರಾ ಹೇಳಿದ್ದೇನು?
  ನನ್ನ ಗಂಡ (ಕಾರ್ತಿಕ್​) ಓರ್ವ ಸಲಿಂಗಕಾಮಿ. ಇದನ್ನು ಹೇಳಿಕೊಳ್ಳಲು ಆತನಿಗೆ ಧೈರ್ಯವಿಲ್ಲ. ನನ್ನ ಮದುವೆಯಾದ ಎರಡು ವರ್ಷಗಳ ಬಳಿಕ ನಾನದನ್ನು ತಿಳಿದುಕೊಂಡೆ. ನನ್ನ ಗಂಡನಿಗೂ ಮತ್ತು ಧನುಷ್​ಗೂ ಸಂಬಂಧವಿದೆ. ದಿನವಿಡಿ ಕುಡಿದು ಇಬ್ಬರು ಒಂದೇ ರೂಮಿಗೆ ಹೋಗುತ್ತಾರೆ. ಆ ರೂಮಿನಲ್ಲಿ ಏನು ಮಾಡುತ್ತಾರೆ ಅಂತ ನನಗೆ ಮಾತ್ರ ತಿಳಿದಿದೆ. ಕಾರ್ತಿಕ್​ ಮತ್ತು ನನ್ನದು, ನನ್ನ ತಂದೆ-ತಾಯಿ ನಿಶ್ಚಯಿಸಿದ ಮದುವೆ. ಹೀಗಾಗಿ ನಾನು ಅವನಿಂದ ಪ್ರೀತಿಯನ್ನು ನಿರೀಕ್ಷಿಸಿರಲಿಲ್ಲ. ಮೊದಲು ವಿಚ್ಛೇದನ ಕೇಳಿದ್ದು ನಾನೇ. ಇಬ್ಬರು ಡಿವೋರ್ಸ್​ ಆಗಿದ್ದೇವೆ. ಸುಚಿ ಲೀಕ್ಸ್​ ಪ್ರಕರಣದ ರುವಾರಿಯೇ ಅವರು ಎಂದು ಸುಚಿತ್ರಾ ಗಂಭೀರ ಆರೋಪ ಮಾಡಿದ್ದರು.

  ಮತ್ತೆ ಬಂದಳು ಸುಚಿ!
  ಅಷ್ಟಕ್ಕೂ ಈ ಸುಚಿ ಯಾರು ಗೊತ್ತಾ? ಒಂದು ಕಾಲದಲ್ಲಿ ಸೆಲೆಬ್ರಿಟಿಗಳ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಾಲಿವುಡ್​ ಅಂಗಳದಲ್ಲಿ ತಲ್ಲಣ ಸೃಷ್ಟಿಸಿದ್ದ ತಮಿಳುನಾಡಿನ ರೇಡಿಯೋ ಜಾಕಿ ಹಾಗೂ ಗಾಯಕಿಯೇ ಈ ಸುಚಿತ್ರಾ. ಕಾರ್ತಿಕ್ ಈಕೆಯ ಮಾಜಿ ಗಂಡ.

  2017ರಲ್ಲಿ ಸುಚಿತ್ರಾ ಅವರ ಟ್ವಿಟರ್ ಪೇಜ್​ನಿಂದ ಕಾಲಿವುಡ್​ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ಹೊರಬಿದ್ದ ಬಳಿಕ ಭಾರೀ ವಿವಾದವೇ ಸೃಷ್ಟಿಯಾಗಿತ್ತು. ಇದನ್ನು ಸುಚಿ ಲೀಕ್ಸ್ ಪ್ರಕರಣ ಎಂದೇ ಕರೆಯಲಾಗಿದೆ. ಈ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದಂತೆ ನನ್ನ ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು ಎಂದು ಸುಚಿತ್ರಾ ಸ್ಪಷ್ಟನೆ ನೀಡಿದ್ದರು. ಆದರೆ, ಅದು ಉದ್ದೇಶಪೂರ್ವಕವಾಗಿಯೇ ಲೀಕ್​ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಕಾಲಿವುಡ್​ ಸೂಪರ್​ ಸ್ಟಾರ್​ ಧನುಷ್​ ಅವರ ಸಹಾಯಕರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಸುಚಿತ್ರಾ ಆರೋಪಿದ್ದರು. ಅಲ್ಲದೆ, ಧನುಷ್​ ಅವರು ನನಗೆ ಡ್ರಗ್ಸ್​ ನೀಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಕಾಲಿವುಡ್​ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್​ ಕೌಚ್​ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದರು.

  ತಮ್ಮ ಟ್ವಿಟರ್​ ಖಾತೆಯಲ್ಲಿ ಧನುಷ್, ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ಮತ್ತು ನಟಿಯರಾದ ಆಂಡ್ರಿಯಾ ಜೆರೆಮಿಯಾ, ತ್ರಿಷಾ, ಅಮಲಾ ಪೌಲ್​ ಹಾಗೂ ಸಂಚಿತಾ ಶೆಟ್ಟಿ ಅವರ ಕೆಲ ಫೋಟೋಗಳು ಮತ್ತು ವಿಡಿಯೋಗಳು ಜಾಗತಿಕ ಗಮನವನ್ನು ಸೆಳೆದವು. ಈ ಪ್ರಕರಣ ಕಾಲಿವುಡ್​ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿ, ಕೊನೆಗೆ ತಣ್ಣಗಾಯಿತು.

  ಇದೀಗ ಸುಚಿತ್ರಾ ಮರಳಿ ಬಂದಿದ್ದು, ತಮಿಳು ಯೂಟ್ಯೂಬ್​ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸುಚಿತ್ರಾ ಅವರು ಆಡಿರುವ ಮಾತುಗಳು ಮತ್ತೆ ವಿವಾದದ ಸ್ವರೂಪ ಪಡೆದುಕೊಂಡಿದೆ. ಮಾಜಿ ತಾರಾ ದಂಪತಿ ಧನುಷ್​ ಮತ್ತು ಐಶ್ವರ್ಯಾ ರಜಿನಿಕಾಂತ್​ ಒಬ್ಬರಿಗೊಬ್ಬರು ವಂಚನೆ ಮಾಡುತ್ತಿದ್ದರು. ಮನೆಯಿಂದ ಹೊರಗಡೆ ಇಬ್ಬರು ಬೇರೆಯವರೊಂದಿಗೆ ಸರಸವಾಡುತ್ತಿದ್ದರು ಎಂದು ಸುಚಿತ್ರಾ ಆರೋಪಿಸಿದ್ದಾರೆ. ಅಲ್ಲದೆ, ನಟ ಧನುಷ್​ ಓರ್ವ ಸಲಿಂಗಕಾಮಿ ಮತ್ತು ಮಾದಕ ವ್ಯಸನಿ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ. ಅಲ್ಲದೆ, ನನ್ನ ಮಾಜಿ ಗಂಡನು ಕೂಡ ಸಲಿಂಗಕಾಮಿ ಎಂದಿರುವ ಸುಚಿ, ಧನುಷ್​ ಮತ್ತು ಕಾರ್ತಿಕ್​ ಇಬ್ಬರು ಒಂದೇ ರೂಮಿನಲ್ಲಿದ್ದರು ಎಂದು ಆರೋಪ ಮಾಡಿದ್ದಾಳೆ.

  ಮಾನಸಿಕ ಅಸ್ವಸ್ಥೆ
  ಧನುಷ್​ ಅವರ ಬಗ್ಗೆ ಮನಸ್ಸಿಗೆ ಬಂದಂತೆ ಮಾತನಾಡಿರುವ ಸುಚಿತ್ರಾ ಅವರ ವಿರುದ್ಧ ಧನುಷ್​ ಅಭಿಮಾನಿಗಳು ಕಿಡಿಕಾರಿದ್ದಾರೆ. ಆಕೆ ಮಾನಸಿಕ ಅಸ್ವಸ್ಥೆ ಎಂದು ಜರಿಯುತ್ತಿದ್ದಾರೆ. ಸುಚಿತ್ರಾ ಮಾಜಿ ಪತಿ ಕಾರ್ತಿಕ್​ ಕೂಡ ಇದನ್ನೇ ಹೇಳಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆಕೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಆಕೆಯ ಮಾತುಗಳನ್ನು ಯಾರೂ ಕೂಡ ಗಂಭೀರವಾಗಿ ತೆಗೆದುಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ. (ಏಜೆನ್ಸೀಸ್​)

  ಒಂದೇ ರೂಮಲ್ಲಿ ನನ್ನ ಗಂಡನ ಜತೆ ಧನುಷ್ ಏನ್​ ಮಾಡ್ತಿದ್ದ ಅನ್ನೋದು ನಂಗೆ ಮಾತ್ರ ಗೊತ್ತು ಎಂದ ಸುಚಿ!

  ನಿನ್ನೆ ಪಂದ್ಯದಲ್ಲಿ ನೀವಿದನ್ನು ಗಮನಿಸಿದ್ರಾ? ಇದೆಲ್ಲಾ ಬರೀ ನಾಟಕ ಕಿಂಚಿತ್ತು ಬದಲಾಗಿಲ್ಲ ಸಂಜೀವ್​ ಗೋಯೆಂಕಾ! ​

  ರೋಹಿತ್​, ಕೊಹ್ಲಿಯಲ್ಲ ಡೇವಿಡ್​ ಮಿಲ್ಲರ್​ಗೆ ಟೀಮ್​ ಇಂಡಿಯಾದ ಈ ಆಟಗಾರನನ್ನು ಕಂಡರೆ ತುಂಬಾ ಭಯವಂತೆ!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts