ಚೀನಾ ಮೊಬೈಲ್ ಕಂಪೆನಿ ಜತೆಗೆ ಕಾಂಟ್ರಾಕ್ಟ್ ರದ್ದುಪಡಿಸಿದ ಆರ್ಯನ್

blank

ಬಾಲಿವುಡ್ ಸೆಲೆಬ್ರಿಟಿಗಳು ಚಿತ್ರಗಳಿಗಿಂಥ ಜಾಹೀರಾತುಗಳಲ್ಲೇ ಹೆಚ್ಚು ದುಡ್ಡು ಮಾಡುವುದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಜಾಹೀರಾತುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದವರೆಂದರೆ ಅದು ಕಾರ್ತಿಕ್ ಆರ್ಯನ್. ಓಪ್ಪೋ ಜತೆಗೆ ಹಲವು ಕೋಟಿ ವೆಚ್ಚದ ಕಾಂಟ್ರಾಕ್ಟ್ ಮಾಡಿಕೊಂಡಿದ್ದ ಕಾರ್ತಿಕ್, ಇದೀಗ ಅದರಿಂದ ಹೊರಬಂದಿದ್ದಾರೆ.

blank

ಇದನ್ನೂ ಓದಿ: ಟ್ರೋಲ್‍ಗೆ ಆಹಾರವಾದ್ರು `ಕಾಮಿಡಿ ಕಿಲಾಡಿ’ ನಯನಾ

ಕೋಟಿಕೋಟಿ ಮೌಲ್ಯದ ಜಾಹೀರಾನ ಒಪ್ಪಂದಕ್ಕೆ ಸಹಿ ಹಾಕಿ, ಅದರಿಂದ ಹಿಂದಕ್ಕೆ ಸರಿದಿದ್ದು ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಕಾರಣ, ಗಲ್ವಾನ್‍ನಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಸಂಘರ್ಷ ಉಂಟಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೀನಾದ ಸರಕುಗಳಿಗೆ ಭಾರತದಲ್ಲಿ ನಿಷೇಧ ಹೆಚ್ಚಾಗುತ್ತಿದ್ದು, ಓಪ್ಪೋ ಸಹ ಚೀನಾ ಮೂಲದ್ದಾಗಿದೆ. ಅದೇ ಕಾರಣಕ್ಕೆ ಕಾರ್ತಿಕ್ ಈ ಒಪ್ಪಂದದಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಓಪ್ಪೋ ಜತೆಗೆ ಕಾಂಟ್ರಾಕ್ಟ್ ರದ್ದುಪಡಿಸಿದ ಕಾರ್ತಿಕ್ ಆರ್ಯನ್

ಬಾಲಿವುಡ್ ಸೆಲೆಬ್ರಿಟಿಗಳು ಚಿತ್ರಗಳಿಗಿಂಥ ಜಾಹೀರಾತುಗಳಲ್ಲೇ ಹೆಚ್ಚು ದುಡ್ಡು ಮಾಡುವುದು ಎಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ಜಾಹೀರಾತುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದವರೆಂದರೆ ಅದು ಕಾರ್ತಿಕ್ ಆರ್ಯನ್. ಓಪ್ಪೋ ಜತೆಗೆ ಹಲವು ಕೋಟಿ ವೆಚ್ಚದ ಕಾಂಟ್ರಾಕ್ಟ್ ಮಾಡಿಕೊಂಡಿದ್ದ ಕಾರ್ತಿಕ್, ಇದೀಗ ಅದರಿಂದ ಹೊರಬಂದಿದ್ದಾರೆ.

ಇದನ್ನೂ ಓದಿ: ಟ್ರೋಲ್‍ಗೆ ಆಹಾರವಾದ್ರು `ಕಾಮಿಡಿ ಕಿಲಾಡಿ’ ನಯನಾ

ಕೋಟಿಕೋಟಿ ಮೌಲ್ಯದ ಜಾಹೀರಾನ ಒಪ್ಪಂದಕ್ಕೆ ಸಹಿ ಹಾಕಿ, ಅದರಿಂದ ಹಿಂದಕ್ಕೆ ಸರಿದಿದ್ದು ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಕಾರಣ, ಗಲ್ವಾನ್‍ನಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಸಂಘರ್ಷ ಉಂಟಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಚೀನಾದ ಸರಕುಗಳಿಗೆ ಭಾರತದಲ್ಲಿ ನಿಷೇಧ ಹೆಚ್ಚಾಗುತ್ತಿದ್ದು, ಓಪ್ಪೋ ಸಹ ಚೀನಾ ಮೂಲದ್ದಾಗಿದೆ. ಅದೇ ಕಾರಣಕ್ಕೆ ಕಾರ್ತಿಕ್ ಈ ಒಪ್ಪಂದದಿಂದ ಹೊರಬಂದಿದ್ದಾರೆ ಎನ್ನಲಾಗಿದೆ.

ಭಾರತವು ಇತ್ತೀಚೆಗೆ ಚೀನಾದ 59 ಆ್ಯಪ್‍ಗಳಿಗೆ ನಿಷೇಧ ಹೇರಿದ ಹಿನ್ನಲೆಯಲ್ಲಿ, ಫೆಡರೇಶನ್ ಆಫ್ ವೆಸ್ಟ್ರನ್ ಇಂಡಿಯಾ ಸಿನಿ ಎಂಪ್ಲಾಯಿಂಸ್ ಸಂಸ್ಥೆಯು, ಬಾಲಿವುಡ್ ಕಲಾವಿದರಿಗೆ ಚೀನಾ ಉತ್ಪನ್ನಗಳಿಗೆ ಪ್ರಚಾರ ನೀಡಬಾರದು ಎಂದು ಮನವಿ ಸಲ್ಲಿಸಿತ್ತು. ಈಗಾಗಲೇ ದೀಪಿಕಾ ಪಡುಕೋಣೆ, ರಣಬೀರ್ ಕಪೂರ್, ಅಮೀರ್ ಖಾನ್, ಸಾರಾ ಅಲಿ ಖಾನ್, ವಿಕ್ಕಿ ಕೌಶಾಲ್, ಕತ್ರೀನಾ ಕೈಫ್ ಸೇರಿದಂತೆ ಹಲವರು ಚೀನಾದ ಕೆಲವು ಉತ್ಪನ್ನಗಳ ಪ್ರಚಾರದಲ್ಲಿ ನಿರತರಾಗಿದ್ದು, ಮುಂದೇನು ಮಾಡಬಹುದು ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು.

ಇದನ್ನೂ ಓದಿ: ಬಿಡುಗಡೆಯಾಯ್ತು `ಲಾ’ ಚಿತ್ರದ ಟ್ರೇಲರ್

ಹಾಗಿರುವಾಗಲೇ, ಓಪ್ಪೋದ ಜತೆಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಕಾರ್ತಿಕ್ ಆರ್ಯನ್ ರದ್ದು ಮಾಡಿದ್ದಾರೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಮಾಡಿಕೊಂಡಿದ್ದರೂ, ಎಲ್ಲಕ್ಕಿಂತ ಮೊದಲು ದೇಶ ಎಂದು ತೋರಿಸಿಕೊಟ್ಟಿದ್ದಾರೆ. ಈ ವಿಷಯದಲ್ಲಿ ಮಿಕ್ಕ ಸೆಲೆಬ್ರಿಟಿಗಳು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

ಕಂಗನಾ ಅವರನ್ನೇ ಹೋಲುತ್ತದೆ ಈ ಮುದ್ದು ಗೊಂಬೆ!

Share This Article
blank

ಕಾಲುಗಳಲ್ಲಿ ರಕ್ತನಾಳಗಳು ಗೋಚರಿಸಲು ಕಾರಣ ಏನು ಗೊತ್ತೆ?: ಅಪಾಯದ ಬಗ್ಗೆ ಅರಿವಿರಲಿ | Visible Veins

Visible Veins: ನಿಮ್ಮ ಕಾಲುಗಳಲ್ಲಿ ಅಥವಾ ನಮ್ಮ ಅಕ್ಕಪಕ್ಕದವರ ಮನೆಯಲ್ಲಿನ ಕೆಲವರಿಗೆ ಈ ರಕ್ತನಾಳಗಳು ಗೋಚರಿಸಿರುವುದು…

ಸಾಲ ಕೊಡಬೇಡಿ.. ನಿಮಗೆ ಸಮಸ್ಯೆಗಳು ಎದುರಾಗುತ್ತವೆ! money

money : ಸಂತೋಷ ಮತ್ತು ದುಃಖಗಳಿಂದ ತುಂಬಿರುವ ಜೀವನದಲ್ಲಿ ಹಣವು ಎಲ್ಲದಕ್ಕೂ ಮೂಲ ಮೂಲ ಎಂದು…

blank