More

    ಆಕಳಿಕೆ, ಸೀನನ್ನು ನಿಯಂತ್ರಿಸಲು ಅದಿತಿ ಮುದ್ರೆ!

    ಆಕಳಿಕೆ, ಸೀನನ್ನು ನಿಯಂತ್ರಿಸಲು ಅದಿತಿ ಮುದ್ರೆ!ವೇದದಲ್ಲಿ ಅದಿತಿ ಎಂದರೆ ಭೂಮಿ ಎಂದರ್ಥ. ಈ ಹೆಸರಿನ ಮುದ್ರೆ ಇದಾಗಿದೆ. ಅದಿತಿ ಮುದ್ರೆ ಉಂಗುರ ಹಾಗೂ ಹೆಬ್ಬೆರಳಿಗೆ ಸಂಬಂಧಿಸಿದ್ದಾಗಿದೆ. ಉಂಗುರ ಬೆರಳು ಭೂಮಿ ತತ್ವ, ಹೆಬ್ಬೆರಳು ಅಗ್ನಿ ತತ್ವವನ್ನು ಪ್ರತಿನಿಧಿಸುತ್ತವೆ. ಧ್ಯಾನ ಮಾಡುವ ಸಂದರ್ಭದಲ್ಲಿ ಆಕಳಿಕೆ ಬರುತ್ತಿದ್ದರೆ ಈ ಮುದ್ರೆಯನ್ನು ಅಭ್ಯಾಸ ಮಾಡಿದರೆ ಆಕಳಿಕೆ ನಿಲ್ಲುತ್ತದೆ.

    ಮುದ್ರೆ ಮಾಡುವುದು ಹೇಗೆ?: ಮೊದಲನೆಯದಾಗಿ ಅಭ್ಯಾಸಕ್ಕೆ ಸೂಕ್ತವಾದ ಸ್ಥಳವನ್ನು ಕಂಡುಕೊಳ್ಳಿ. ಆ ಸ್ಥಳದಲ್ಲಿ ಯಾವುದೇ ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಿ. ಪದ್ಮಾಸನ (ಕಮಲ ಭಂಗಿ), ಸುಖಾಸನ (ಸುಲಭ ಭಂಗಿ) ಆಗಬಹುದು. ಹೆಬ್ಬೆರಳಿನ ಅಗ್ರಭಾಗವನ್ನು ಉಂಗುರ ಬೆರಳಿನ ಕೆಳಗಡೆ ಮೃದುವಾಗಿ ಒತ್ತಿಡಿ. (ಚಿತ್ರದಲ್ಲಿರುವಂತೆ) ಈಗ ನಿಮ್ಮ ಹೆಬ್ಬೆರಳಿನಿಂದ ಉಂಗುರದ ಬೆರಳಿನ ಮೂಲವನ್ನು ಒತ್ತಿರಿ. ಉಳಿದ ಬೆರಳುಗಳನ್ನು ವಿಸ್ತರಿಸಿರಿ. ಈ ಮುದ್ರೆಯಲ್ಲಿ ಹೆಬ್ಬೆರಳನ್ನು (ಅಗ್ನಿ ತತ್ವ), ಉಂಗುರ ಬೆರಳಿನ (ಪೃಥ್ವಿ ತತ್ವ) ಬುಡಕ್ಕೆ ರ್ಸ³ಸಿದಾಗ ಅಗ್ನಿ ತತ್ವ ಮತ್ತು ಪೃಥ್ವಿ ತತ್ವ ಹೆಚ್ಚಾಗುತ್ತದೆ. ಇದರಿಂದಾಗಿ ದೇಹದಲ್ಲಿ ಶಕ್ತಿ ಸಂಚಯನ ಹೆಚ್ಚಾಗುತ್ತದೆ. ಈ ಮುದ್ರೆಯನ್ನು ಸುಮಾರು 15 ನಿಮಿಷದಿಂದ 30 ನಿಮಿಷದವರೆಗೆ ಅಭ್ಯಾಸ ಮಾಡಬೇಕಾಗುತ್ತದೆ. ನಂತರ ಪ್ರಾಣ ಮುದ್ರೆಯನ್ನು 10 ನಿಮಿಷ ಅಭ್ಯಾಸ ಮಾಡಿ.

    ಪ್ರಯೋಜನಗಳೇನು?: ಮುಂಜಾನೆ ಎದ್ದಾಗ ಕೆಲವರಿಗೆ ಕೆಲವೊಮ್ಮೆ ಸೀನು ಬರುವುದುಂಟು. ಹಾಗೆ ಬರುವ ಸೀನನ್ನು ಈ ಮುದ್ರೆಯಿಂದ ತಡೆಗಟ್ಟಬಹುದು. ಧ್ಯಾನ, ಪ್ರಾಣಾಯಾಮ, ಜಪದ ಸಂದರ್ಭದಲ್ಲಿ ಬರುವ ಆಕಳಿಕೆ, ಸೀನನ್ನು ನಿಯಂತ್ರಿಸುವಲ್ಲಿ ಕೂಡ ಅದಿತಿ ಮುದ್ರೆ ಸಹಕಾರಿಯಾಗುತ್ತದೆ. ಸಾಧನೆ ಮಾಡುವ ಮುಂಚೆ ಸುಮಾರು 5-10 ನಿಮಿಷ ಅಭ್ಯಾಸ ಮಾಡಿದರೆ ಸಾಕು. ಈ ಮುದ್ರೆಯನ್ನು ಮಾಡಿದಾಗ ದೇಹದಲ್ಲಿನ ವಿಷಕಾರಕ ವಸ್ತುಗಳು ನಾಶವಾಗುತ್ತವೆೆ. ಈ ಮುದ್ರೆಯಿಂದ ದೇಹದ ಶಕ್ತಿಯನ್ನು ಹೆಚ್ಚಿಸಬಹುದು. ಆದ್ದರಿಂದ ತ್ರಾಣದಲ್ಲಿ ಸುಧಾರಣೆಯೊಂದಿಗೆ ಮತ್ತೆ ತೂಕ ಬರುತ್ತದೆ. ಇದರಿಂದ ದೇಹದ ತೂಕವನ್ನು ಹೆಚ್ಚಿಸಬಹುದು. ಮುಂಜಾನೆ ನಿರಂತರವಾಗಿ ಧ್ಯಾನದ ಸಮಯದಲ್ಲಿ ಆಕಳಿಕೆ ಮತ್ತು ಸೀನುವಿಕೆ ಬರುವವರಂತೂ ಈ ಮುದ್ರೆಯ ಅಭ್ಯಾಸದಿಂದ ಅದನ್ನು ತಡೆಯಬಹುದು.

    ಅದಿತಿ ಮುದ್ರೆಯು ಭೂಮಿಯ ಜೊತೆಗೆ ಬೆಂಕಿಯ ಅಂಶವನ್ನು ಸುಧಾರಿಸುತ್ತದೆ. ಇದು ದೇಹದಲ್ಲಿ ಜೀರ್ಣಕಾರಿ ಬೆಂಕಿಯನ್ನು ಹೆಚ್ಚಿಸುತ್ತದೆ. ಅಂತಿಮವಾಗಿ ಅದು ಸರಿಹೊಂದುವಂತೆ ಮಾಡುತ್ತದೆ. ಧ್ಯಾನದ ಜೊತೆಗೆ ಈ ಮುದ್ರೆಯನ್ನು ಅಭ್ಯಾಸ ಮಾಡುವಾಗ ಪ್ರಾಣದ ಹರಿವನ್ನು ಕೂಡ ನಿಯಂತ್ರಿಸುತ್ತದೆ. ಇದು ದೇಹದಲ್ಲಿ ಚಕ್ರ ಜೋಡಣೆಯನ್ನು ಮತ್ತಷ್ಟು ಸಮತೋಲನಗೊಳಿಸುತ್ತದೆ. ಆದಾಗ್ಯೂ, ಇದು ದೈಹಿಕ ತ್ರಾಣದ ಸುಧಾರಣೆಗೆ ಸಂಬಂಧಿಸಿದೆ.

    ಈ ಮುದ್ರೆ ಆಧ್ಯಾತ್ಮಿಕ ಜೋಡಣೆಯ ವಿಷಯದಲ್ಲಿ ಒಬ್ಬರನ್ನು ಮೇಲಕ್ಕೆತ್ತಲು ಸಹಾಯ ಮಾಡುತ್ತದೆ. ಈ ಮುದ್ರೆಯನ್ನು ನಿಗದಿತ ಅವಧಿಯವರೆಗೆ ಅಭ್ಯಾಸ ಮಾಡುವುದರಿಂದ ಉನ್ನತ ಮನಸ್ಥಿತಿಯನ್ನು ಅನುಭವಿಸಬಹುದು ಎಂದು ನಂಬಲಾಗಿದೆ.

    ಮುದ್ರಾ ಎಂಬ ಪದಕ್ಕೆ ಸಂಜ್ಞೆ ಎಂದು ಹೇಳುತ್ತಾರೆ. ಮುದ್ರೆಗಳನ್ನು ಮಾನಸಿಕ, ಭಾವನಾತ್ಮಕ ಭಕ್ತಿಯ ಹಾಗೂ ಕಲಾತ್ಮಕ ಸಂಜ್ಞೆ ಎಂದು ಹೇಳಬಹುದು. ಯೋಗಿಗಳು ಮುದ್ರೆಗಳನ್ನು ಶಕ್ತಿ ಪ್ರವಹಿಸುವಿಕೆಯ ಮನೋಭಾವಗಳೆಂದು ಹೇಳುತ್ತಾರೆ.

    ಮುದ್ರೆಗಳನ್ನು ಆಸನ, ಪ್ರಾಣಾಯಾಮ ಬಂಧ ಇತ್ಯಾದಿಗಳಲ್ಲಿ ಬಳಸುತ್ತಾರೆ. ಮುದ್ರೆಗಳನ್ನು ಯಾರು ಬೇಕಾದರೂ ಯಾವಾಗ ಬೇಕಾದರೂ ಅಭ್ಯಾಸ ಮಾಡಬಹುದು. ಕುಳಿತುಕೊಂಡು ಇರುವಾಗಲಾದರೂ, ನಿಂತಾಗ, ಪ್ರಯಾಣಿಸುವಾಗ, ಹಾಗೆಯೇ ಹಾಸಿಗೆಯಲ್ಲಿ ಮಲಗಿರುವಾಗಲೂ ಅಲ್ಲದೆ ಟಿ.ವಿ ವೀಕ್ಷಣೆ ಮಾಡುತ್ತಿರುವಾಗಲೂ ಮುದ್ರೆಗಳನ್ನು ಮಾಡಬಹುದು. ಮುದ್ರೆಯನ್ನು ಎರಡೂ ಕೈಗಳಿಂದ ಮಾಡಿದರೆ ಉತ್ತಮ ಲಾಭವನ್ನು ಪಡೆಯಬಹುದಾಗಿದೆ. ಮುದ್ರೆಗಳನ್ನು ಯಾವುದೇ ಸ್ಥಿತಿಯಲ್ಲೂ ಮಾಡಬಹುದಾದರೂ ವಿಶೇಷವಾಗಿ ಪದ್ಮಾಸನ, ಸ್ವಸ್ತಿಕಾಸನ, ಸುಖಾಸನ ಅಥವಾ ವಜ್ರಾಸನ ಹಾಕಿ ಧ್ಯಾನಾವಸ್ಥೆಯಲ್ಲಿ ಕುಳಿತು ಮಾಡುವುದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ ಹಾಗೂ ಮನಸ್ಸಿಗೆ ನೆಮ್ಮದಿ ದೊರಕುತ್ತದೆ.

    ಶಸ್ತ್ರಚಿಕಿತ್ಸೆಯಿಂದ ಚೇತರಿಕೆ: ವಿಡಿಯೋ ಹಂಚಿಕೊಂಡ ಜಗ್ಗಿ ವಾಸುದೇವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts