More

    ಶಸ್ತ್ರಚಿಕಿತ್ಸೆಯಿಂದ ಚೇತರಿಕೆ: ವಿಡಿಯೋ ಹಂಚಿಕೊಂಡ ಜಗ್ಗಿ ವಾಸುದೇವ್

    ನವದೆಹಲಿ: ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ 66 ವರ್ಷದ ಆಧ್ಯಾತ್ಮ ಗುರು ಜಗ್ಗಿ ವಾಸುದೇವ್ ಅವರು ಚೇತರಿಸಿಕೊಳ್ಳುತ್ತಿದ್ದು. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಬೆಂಬಲಿಗರಿಗೆ ತಮ್ಮ ಆರೋಗ್ಯದಲ್ಲಿನ ಚೇತರಿಕೆಯ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

    ಇದನ್ನೂ ಓದಿ: ನಟಿ ಸಾಯಿ ಪಲ್ಲವಿ ನಟನೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಟಾಲಿವುಡ್​ ನಟ​!

    View this post on Instagram

    A post shared by Sadhguru (@sadhguru)

    ಸದ್ಗುರು ಈಗ ಆಸ್ಪತ್ರೆಯ ಕೊಠಡಿಯಲ್ಲಿರುವ ವಿಡಿಯೊವನ್ನು ಜಾಲತಾಣ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸದ್ಗುರು ಚೇತರಿಸಿಕೊಳ್ಳುವ ಹಾದಿಯಲಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ. ವಾಸುದೇವ್​ ಅವರು ಆಸ್ಪತ್ರೆಯ ಹಾಸಿಗೆಯ ಮೇಲೆ ಕುಳಿತು ದಿನಪತ್ರಿಕೆ ಓದುತ್ತಿರುವ ದೃಶ್ಯದ ಜೊತೆಗೆ ತಲೆಗೆ ಬ್ಯಾಂಡೇಜ್ ಹಾಕಿರುವುದನ್ನು ಕಾಣಬಹುದು.

    ಈ ವಿಡಿಯೋ ಬರೋಬ್ಬರಿ 1.7 ಮಿಲಿಯನ್ ವೀವ್ಸ್ ಪಡೆದಿದೆ. ಅನೇಕ ನೆಟ್ಟಿಗರರು ಇವರ ಪೋಸ್ಟ್‌ಗೆ ಕಾಮೆಂಟ್ ಕೂಡ ಮಾಡಿದ್ದು, ಅಧ್ಯಾತ್ಮಿಕ ನಾಯಕ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ. ಬೇಗನೆ ಗುಣಮುಖರಾಗಿ ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ.

    ಮಾ.15ರಂದು ಸದ್ಗುರು ಅವರು ಎಂಆರ್‌ಐ ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು ಮತ್ತು ಇದರಲ್ಲಿ ಮೆದುಳಿನ ತೀವ್ರ ರಕ್ತಸ್ರಾವ ಕಂಡುಬಂದಿತ್ತು. ಆದರೆ ಅವರು ತಾನು ಒಪ್ಪಿಕೊಂಡಿದ್ದ ಕಾರ್ಯಕ್ರಮಗಳನ್ನು ರದ್ದು ಮಾಡಲು ನಿರಾಕರಿಸಿದರು. ನೋವು ನಿವಾರಕ ಔಷಧಿ ಮತ್ತು ಮಾತ್ರೆಗಳನ್ನು ತೆಗೆದುಕೊಂಡು ಅವರು ಇಂಡಿಯಾ ಟುಡೇ ಕಾನ್ಕ್ಲೇವ್ ನಲ್ಲಿ ಭಾಗವಹಿಸಿದ್ದರು. ಬಳಿಕ ಮಾರ್ಚ್​ 20 ರಂದು ಬುಧವಾರ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

    ಲೋಕಸಮರ: ಕಾಂಗ್ರೆಸ್​ನಿಂದ ಅಭ್ಯರ್ಥಿಗಳ 6ನೇ ಪಟ್ಟಿ ಬಿಡುಗಡೆ! 5 ಅಭ್ಯರ್ಥಿಗಳ ಹೆಸರು ಪ್ರಕಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts