More

  ಬರೀ ಬೊಗಳುತ್ತಾರೆ, ಕಚ್ಚುವುದಿಲ್ಲ; ‘ಬಾಯ್ಕಾಟ್​ ಪಠಾಣ್​’ ಬಗ್ಗೆ ಪ್ರಕಾಶ್​ ರೈ

  ಮುಂಬೈ: ಶಾರುಖ್​ ಖಾನ್​ ಅಭಿನಯದ ‘ಪಠಾಣ್​’ ಚಿತ್ರವು ಬಿಡುಗಡೆಯಾಗಿ ಬಾಕ್ಸ್​ ಆಫೀಸ್ ಚಿಂದಿ ಉಡಾಯಿಸುತ್ತಿದೆ. ಈಗಾಗಲೇ ಚಿತ್ರವು ಜಾಗತಿಕ ಬಾಕ್ಸ್​ ಆಫೀಸ್​ನಲ್ಲಿ 700 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ‘ಪಠಾಣ್​’ ಬಿಡುಗಡೆಗೂ ಮುನ್ನ ಚಿತ್ರವನ್ನು ಬಾಯ್ಕಾಟ್​ ಮಾಡಬೇಕು ಅಂತಿದ್ದವರೆಲ್ಲ, ಈಗ ಚಿತ್ರದ ಯಶಸ್ಸನ್ನು ನೋಡಿ ದಂಗಾಗಿದ್ದಾರೆ.

  ಇದನ್ನೂ ಓದಿ: ಅರ್ಥಗರ್ಭಿತ ಚಿತ್ರ ತನುಜಾ: ಡಾ. ವಿಜಯ ಸಂಕೇಶ್ವರ ಅಭಿಮತ; ಜನರಿಗೆ ಸಹಾಯ ಮಾಡಲು ಲಕ್ಷ್ಮಣರೇಖೆ ದಾಟಿದರೂ ತಪ್ಪಲ್ಲ

  ‘ಬಾಯ್ಕಾಟ್​ ಪಠಾಣ್​’ ಅಭಿಯಾನ ಶುರು ಮಾಡಿದ್ದವರ ವಿರುದ್ಧ ಇದೀಗ ಬಹುಭಾಷಾ ನಟ ಪ್ರಕಾಶ್​ ಹರಿಹಾಯ್ದಿದ್ದಾರೆ. ಅವರೆಲ್ಲ ಬರೀ ಬೊಗಳುವವರು, ಕಚ್ಚುವವರಲ್ಲ ಎಂದು ಹೇಳಿದ್ದಾರೆ.

  ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ‘ಕೆಲವರು ‘ಪಠಾಣ್​’ ಚಿತ್ರವನ್ನು ಬಾಯ್ಕಾಟ್​ ಮಾಡಬೇಕು ಎಂದು ಹೊರಟಿದ್ದರು. ಆ ಚಿತ್ರ 700 ಕೋಟಿ ರೂ. ಕಲೆಕ್ಷನ್​ ಮಾಡಿದ್ದೆ. ಚಿತ್ರವನ್ನು ಬ್ಯಾನ್​ ಮಾಡಿಸಬೇಕು ಎಂದು ಹೊರಟಿದ್ದ ಮತಾಂಧರು, ಮೋದಿ ಅವರ ಚಿತ್ರವನ್ನು ನೋಡಲಿಲ್ಲ. ಆ ಚಿತ್ರ 30 ಕೋಟಿ ರೂ. ಕಲೆಕ್ಷನ್​ ಮಾಡಲಿಲ್ಲ. ಅವರೆಲ್ಲ ಬರೀ ಬೊಗಳುವುದಕ್ಕೆ ಸರಿ, ಕಚ್ಚುವುದಕ್ಕಲ್ಲ. ಇದೊಂದು ಶಬ್ದ ಮಾಲಿನ್ಯ’ ಎಂದು ಹೇಳಿದ್ದಾರೆ.

  ಇದಕ್ಕೂ ಮೊದಲು ‘ಪಠಾಣ್​’ ಚಿತ್ರದ ‘ಬೇಷರಮ್​ ರಂಗ್​’ ಹಾಡು ಬಿಡುಗಡೆಯಾಗಿ ವೈರಲ್​ ಆಗಿತ್ತು. ಈ ಹಾಡಿನಲ್ಲಿ ಕೇಸರಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಕ್ಕೆ ಸಾಕಷ್ಟು ಗಲಾಟೆಯಾಗಿತ್ತು. ಈ ಹಾಡು ಅಸಭ್ಯ ಮತ್ತು ಅಶ್ಲೀಲವಾಗಿದೆ ಎಂದು ಹಲವರು ಟೀಕೆ ಮಾಡಿದ್ದರು. ಅಷ್ಟೇ ಅಲ್ಲ, ಚಿತ್ರವನ್ನು ನಿಷೇಧಿಸಬೇಕು ಎನ್ನುವ ಕೂಗು ಶುರುವಾಗಿ, ಸೋಷಿಯಲ್​ ಮೀಡಿಯಾದಲ್ಲಿ ‘Boycott Pathaan’ ಎನ್ನುವ ಅಭಿಯಾನ ಪ್ರಾರಂಭವಾಗಿತ್ತು.

  ಇದನ್ನೂ ಓದಿ: ವಿಜಯ್​ ಹೊಸ ಚಿತ್ರ ಪ್ರಾರಂಭ; ಹೆಸರೂ ರಿವೀಲ್​ ಆಯ್ತು …

  ಈ ಕುರಿತು ಮಾತನಾಡಿದ್ದ ಅವರು, ‘ಕೇಸರಿ ಬಣ್ಣದವರು ರೇಪಿಸ್ಟ್​ಗಳಿಗೆ ಮಾಲೆ ಹಾಕುತ್ತಾರೆ. ದ್ವೇಷದ ಮಾತುಗಳನ್ನಾಡುತ್ತಾರೆ. ಕೇಸರಿ ಬಣ್ಣ ತೊಟ್ಟವರು ಮೈನರ್​ಗಳನ್ನು ರೇಪ್​ ಮಾಡುತ್ತಾರೆ. ಆದರೆ, ಚಿತ್ರದಲ್ಲಿ ಕೇಸರಿ ಬಟ್ಟೆ ತೊಟ್ಟರೆ ಸಹಿಸುವುದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದರು.

  ಈಗ ನೋಡಿದ್ದು ಮುಂದಿನ ಭಾಗವೇ; ಕಾಂತಾರ ಶತದಿನೋತ್ಸವ ಸಮಾರಂಭದಲ್ಲಿ ರಿಷಬ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts