More

    ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯ ಮೈಲಿಗಲ್ಲು

    ಆರೋಗ್ಯ ಕ್ಷೇತ್ರದ ಆಮೂಲಾಗ್ರ ಸುಧಾರಣೆಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಹತ್ತುಹಲವು ಉಪಕ್ರಮಗಳು, ಮಹತ್ವದ ಯೋಜನೆಗಳು ಜನರಿಗೆ ನೆರವಾಗಿವೆ. ಮುಖ್ಯವಾಗಿ, ಆರೋಗ್ಯ ಮೂಲಸೌಕರ್ಯ ಕ್ಷೇತ್ರದಲ್ಲಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿಯಾಗಿದ್ದು, ಗುಣಮಟ್ಟದ ಆರೋಗ್ಯ ಸೇವೆ ಜನಸಾಮಾನ್ಯರ ಕೈಗೆಟುಕುತ್ತಿರುವುದು ಮಹತ್ವದ ಬದಲಾವಣೆಯೇ ಹೌದು.

    ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯ ಮೈಲಿಗಲ್ಲುನರೇಂದ್ರ ಮೋದಿಯವರು 2014ರಲ್ಲಿ ಪ್ರಧಾನಮಂತ್ರಿಯಾಗಿ ಆಯ್ಕೆಯಾದ ಬಳಿಕ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಕಳೆದ 10 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ‘ಸರ್ವರಿಗೂ ಆರೋಗ್ಯ’ ಎಂಬ ಧ್ಯೇಯದೊಂದಿಗೆ ಬಡ ಹಾಗೂ ಸಾಮಾನ್ಯ ಜನತೆಗೆ ಪರಿಣಾಮಕಾರಿ ಆರೋಗ್ಯ ಸೌಲಭ್ಯ ಒದಗಿಸುವಲ್ಲಿ ವ್ಯಾಪಕ ಬದಲಾವಣೆಗಳನ್ನ ಕಾರ್ಯರೂಪಕ್ಕೆ ತಂದಿದ್ದಾರೆ. ಕೋವಿಡ್-19 ಮಾಹಾಮಾರಿ ಆರ್ಭಟಕ್ಕೆ ವಿಶ್ವದ ಆರೋಗ್ಯ ಕ್ಷೇತ್ರವೇ ತಲ್ಲಣಗೊಂಡಿದ್ದ ವೇಳೆ, ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೋವಿಡ್​ನ್ನು ಯಶಸ್ವಿಯಾಗಿ ಎದುರಿಸಿತು. ಅನಿರೀಕ್ಷಿತ ಲಾಕ್​ಡೌನ್ ಸಮಯದಲ್ಲಿ ಇಡೀ ದೇಶದಲ್ಲಿ ಉಂಟಾಗಿದ್ದ ಹಾಹಾಕಾರ ನಿಮಗೆಲ್ಲ ತಿಳಿದಿದೆ. ಇವೆಲ್ಲವನ್ನೂ ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ ಎದುರಿಸಿದ ಪರಿ ನಿಜಕ್ಕೂ ಸೋಜಿಗ ಎನ್ನಬಹುದು.

    ಆಯುಷ್ಮಾನ್ ಭಾರತ್ ಕಾರ್ಡ್​ಗಳ ಅನುಷ್ಠಾನ: ಕೇಂದ್ರ ಸರ್ಕಾರದಿಂದ ಬಡ ಹಾಗೂ ಆರ್ಥಿಕ ಹಿಂದುಳಿದ ಕುಟುಂಬಕ್ಕೆ ವೈದ್ಯಕೀಯ ಚಿಕಿತ್ಸೆಗೆ ವಾರ್ಷಿಕ 5 ಲಕ್ಷ ರೂಪಾಯಿ ಸಹಾಯಧನ ನೀಡುವ ಆಯುಷ್ಮಾನ್ ಭಾರತ್ ಯೋಜನೆಯಿಂದ 60 ಕೋಟಿಗೂ ಅಧಿಕ ಜನರು ಆರೋಗ್ಯ ವಿಮೆ ಹೊಂದಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನೇಕ ನೋಂದಣಿ ಶಿಬಿರಗಳನ್ನು ಯಶಸ್ವಿಯಾಗಿ ಆಯೋಜನೆಗೊಳಿಸಿ 1.8 ಲಕ್ಷ ಆಯುಷ್ಮಾನ್ ಭಾರತ್ ಕಾರ್ಡ್​ಗಳನ್ನು ವಿತರಣೆ ಮಾಡಲಾಗಿದ್ದು, ಇದುವರೆಗೆ ಕ್ಷೇತ್ರದ ವ್ಯಾಪ್ತಿಯಲ್ಲಿ, 1.5 ಲಕ್ಷ ಜನರು ಉಚಿತ ಚಿಕಿತ್ಸೆ ಪಡೆದಿದ್ದಾರೆ.

    ಜನೌಷಧಿ ಕೇಂದ್ರಗಳು: ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದ ಜನೌಷಧಿ ಕೇಂದ್ರಗಳಲ್ಲಿ ಶೇಕಡ 70-90ರಷ್ಟು ರಿಯಾಯಿತಿ ದರಗಳಲ್ಲಿ ಔಷಧಿಗಳು ದೊರಕುವ ವ್ಯವಸ್ಥೆ ಮಾಡಿದ್ದು, ಇಡೀ ದೇಶದಲ್ಲಿ 11 ಸಾವಿರ ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಜನೌಷಧಿ ಕೇಂದ್ರಗಳಿಂದ 25 ಸಾವಿರ ಕೋಟಿ ರೂ.ಗಳ ಉಳಿತಾಯವಾಗುತ್ತಿದ್ದು, ನನ್ನ ಕ್ಷೇತ್ರದಲ್ಲಿ ವಾರ್ಷಿಕ ಸುಮಾರು 2 ಲಕ್ಷ ಜನರು ಈ ಸೇವೆ ಪಡೆಯುತ್ತಿದ್ದಾರೆ.

    2019ರಲ್ಲಿ ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ ಕೇವಲ 14ರಷ್ಟಿದ್ದ ಜನೌಷಧಿ ಕೇಂದ್ರಗಳು, ಪ್ರಸ್ತುತ 115ರಷ್ಟಿವೆ. ದೇಶದಲ್ಲಿಯೇ ಅತೀ ಹೆಚ್ಚು ಜನೌಷಧಿ ಕೇಂದ್ರಗಳನ್ನು ಹೊಂದಿದ ಖ್ಯಾತಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ್ದು. ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳು ದೊರೆಯುತ್ತಿರುವುದರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ವಾರ್ಷಿಕ 25 ಕೋಟಿ ರೂಪಾಯಿಗಳ ಉಳಿತಾಯ ಕಾಣಬಹುದಾಗಿದೆ. ಬೆಂಗಳೂರು ದಕ್ಷಿಣದ ಸಂಸದನಾಗಿ ಆಯ್ಕೆಯಾದ ಮೊದಲ ವರ್ಷದಲ್ಲಿಯೇ ಕೋವಿಡ್-19 ಸವಾಲನ್ನು ಸಮರ್ಥವಾಗಿ ಎದುರಿಸಿದೆವು.

    ಬೆಡ್ ಹಂಚಿಕೆ ಸಮಸ್ಯೆ ಬಗೆಹರಿಸುವಿಕೆ: ಕೋವಿಡ್ ಸಮಯದಲ್ಲಿ ಸೋಂಕಿತರು, ರೋಗಿಗಳು ಆಸ್ಪತ್ರೆಯಲ್ಲಿ ಬೆಡ್ ಪಡೆಯಲು ಹರಸಾಹಸ ಪಡುವ ಸಂದರ್ಭ ಎದುರಾಗಿತ್ತು. ಇಂತಹ ಸಮಯದಲ್ಲಿ ನಮ್ಮ ಕಚೇರಿಗೆ ಪ್ರತಿನಿತ್ಯ ಬರುತ್ತಿದ್ದ ಕೋರಿಕೆ, ಕರುಣಾಜನಕ ವಿನಂತಿಗಳು ನಮ್ಮನ್ನು ಸುಮ್ಮನೇ ಇರಲು ಬಿಡಲಿಲ್ಲ. ಈ ಸಮಸ್ಯೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಬೆಡ್ ಬುಕಿಂಗ್ ದಂಧೆಯಲ್ಲಿ ಹಲವಾರು ಜನ ಶಾಮೀಲಾಗಿರುವ ಶಂಕೆ ಉಂಟಾಯಿತು, ಈ ಹಗರಣವನ್ನು ಸಾಕ್ಷಿಸಮೇತ ಹೊರತಂದು, ಈ ಪದ್ಧತಿಯಲ್ಲಿದ್ದ ಸಮಸ್ಯೆಗಳಿಗೆ ಪರಿಹಾರ ಒದಗಿಸಲೇಬೇಕೆಂದು ಪಣತೊಟ್ಟು ಕಾರ್ಯಪ್ರವೃತ್ತರಾಗಿದ್ದು ಗಮನಾರ್ಹ. ಆ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ, ನಮ್ಮ ಈ ಎಲ್ಲ ಕಾರ್ಯಗಳಿಗೆ ಸಹಕಾರ ನೀಡಿದ್ದನ್ನು ಇಲ್ಲಿ ಸ್ಮರಿಸಲೇಬೇಕು.

    ನೂತನವಾಗಿ ಅಭಿವೃದ್ಧಿಪಡಿಸಿದ ಸಾಫ್ಟ್​ವೇರ್​ನಲ್ಲಿ, 1) ಬೆಡ್​ಹಂಚಿಕೆಗೆ ಕ್ಯೂ ಪದ್ಧತಿ ಜಾರಿ 2) ಎಸ್​ಎಂಎಸ್ ಮೂಲಕ ರೋಗಿಗಳಿಗೆ ಬೆಡ್​ಹಂಚಿಕೆಯ ಮಾಹಿತಿ ರವಾನೆ 3) ಮ್ಯಾನುವಲ್ ಅನ್​ಬ್ಲಾಕಿಂಗ್ ಪದ್ಧತಿ ರದ್ದು 4) ಬೆಡ್ ಹಂಚಿಕೆಗೆ ಇದ್ದ ಕಾಯುವಿಕೆಯ ಸಮಯ ಮಿತಿ ಕಡಿತ 5) ಡ್ಯಾಶ್​ಬೋರ್ಡ್ ಮೂಲಕ ರಿಯಲ್​ಟೈಮ್ ಬೆಡ್ ಲಭ್ಯತೆಯ ಮಾಹಿತಿ 6) ಡ್ಯಾಡ್​ಬೋರ್ಡ್ ಮೂಲಕ ಆಕ್ಸಿಜನ್ ರೆಮ್ಡಿಸಿವಿಯರ್ ಲಭ್ಯತೆ ಕುರಿತು ಮಾಹಿತಿ 7) ರೋಗಿಗಳ ನೋಂದಣಿ ಕುರಿತು ಬಯೋಮೆಟ್ರಿಕ್ ಅಥವಾ ಓಟಿಪಿ ಮೂಲಕ ದೃಢೀಕರಣ 8) ಏಕೀಕೃತ ಸಾಫ್ಟ್​ವೇರ್ ಅಭಿವೃದ್ಧಿಗೆ ಕ್ರಮ.

    ಇವೆಲ್ಲ ಸುಧಾರಣೆಗಳನ್ನು ಕೇವಲ 100 ಗಂಟೆಗಳ ಸಮಯಮಿತಿಯಲ್ಲಿ ಜಾರಿಗೆ ತಂದ ಪರಿಣಾಮ, 4,500ಕ್ಕೂ ಅಧಿಕ ಬೆಡ್​ಗಳು ಲಭ್ಯವಾದವು. ಇದೇ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ತಮ್ಮ ಬಿಬಿಎಂಪಿ ಕೋಟಾ ಪ್ರಕಾರ ಒದಗಿಸ ಬೇಕಾಗಿದ್ದ ಶೇಕಡ 50ರಷ್ಟು ಬೆಡ್ ಒದಗಿಸದ್ದರಿಂದ ಹಲವಾರು ಬಡರೋಗಿಗಳಿಗೆ ತೊಂದರೆಯಾಗುತ್ತಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಒನ್-ಟು-ಒನ್ ಸಭೆ, ವಿಡಿಯೋ ಕಾನ್ಪರೆನ್ಸ್ ಮೂಲಕ ಸಭೆ ನಡೆಸಲಾಯಿತು. ಕೆಲ ಆಸ್ಪತ್ರೆಗಳಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ನಂತರ ಬಡ ರೋಗಿಗಳು ಬಿಬಿಎಂಪಿ ಕೋಟಾ ಅಡಿಯಲ್ಲಿ ಆರೋಗ್ಯ ಸೇವೆ ಪಡೆಯಲು ಸಹಕಾರಿಯಾಗಿದ್ದು ಗಮನಾರ್ಹ.

    ನಿಷ್ಕ್ರಿಯ ಆಸ್ಪತ್ರೆಗಳ ನವೀಕರಣ: ನಿಷ್ಕ್ರಿಯ ಸ್ಥಿತಿಯಲ್ಲಿದ್ದ 4 ಆಸ್ಪತ್ರೆಗಳನ್ನು ಕೋವಿಡ್ ವೇಳೆ ಕೇವಲ 30 ದಿನಗಳಲ್ಲಿ ಸಂಸದರ ನಿಧಿ ಸಹಾಯದೊಂದಿಗೆ ನವೀಕರಣಗೊಳಿಸಿ, ಸುಸಜ್ಜಿತ ಸೌಲಭ್ಯಗಳಿಂದ ನಾಗರಿಕರ ಸೇವೆಗೆ ಮುಕ್ತಗೊಳಿಸಲಾಯಿತು. ಇದರಿಂದ 300ಕ್ಕಿಂತಲೂ ಅಧಿಕ ಬೆಡ್​ಗಳು ಲಭ್ಯವಾಗಿದ್ದು, 200ಕ್ಕೂ ಅಧಿಕ ನಾಗರಿಕರ ಜೀವ ಉಳಿದಿರುವುದನ್ನು ಸ್ಮರಿಸಬಹುದು. ನವೀಕರಣಗೊಂಡ ಆಸ್ಪತ್ರೆಗಳು:

    1) ಮಹಾಬೋಧಿ ಆಸ್ಪತ್ರೆ, ಸಿದ್ದಾಪುರ
    2) ಗಾರ್ಡನ್ ಸಿಟಿ ಆಸ್ಪತ್ರೆ, ಜಯನಗರ
    3) ಕೆಎಸ್​ಆರ್​ಟಿಸಿ ಆಸ್ಪತ್ರೆ, ಜಯನಗರ
    4) ಜಯನಗರ ಜನರಲ್ ಆಸ್ಪತ್ರೆ.

    ಎಂಪಿ ಆಕ್ಸಿ ಬ್ಯಾಂಕ್: ಕೋವಿಡ್ ಸಮಯದಲ್ಲಿ ಆಸ್ಪತ್ರೆಗಳಲ್ಲಿ ಸೋಂಕಿತರ ನಿರ್ವಹಣೆ ಕೂಡ ಕಷ್ಟಕರವಾಗಿದ್ದ ಸಂದರ್ಭದಲ್ಲಿ ಆರೋಗ್ಯ ಸೇವೆಯ ಭಾರವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ, ದೇಶದ ಅತೀ ದೊಡ್ಡ ಆಕ್ಸಿಜನ್ ಕಾನ್ಸ್​ನೆ ್ಟ್ರಟರ್ ಬ್ಯಾಂಕ್ ಸ್ಥಾಪಿಸಿ, ಆಕ್ಸಿ ಬ್ಯಾಂಕ್ ಸೇವೆ ಮುಖಾಂತರ ಉಚಿತ ಸೇವೆ ಒದಗಿಸಿದ್ದು ನನ್ನ ಕಚೇರಿಯ ಹೆಗ್ಗಳಿಕೆ. 10 ಸಾವಿರಕ್ಕೂ ಅಧಿಕ ಸಾಮಾನ್ಯ ಚಿಕಿತ್ಸೆ ಹಾಗೂ 3000 ತುರ್ತು ಅಗತ್ಯ ಸಂದರ್ಭದಲ್ಲಿ ಸಹಕಾರಿಯಾಗಿದ್ದನ್ನು ಸ್ಮರಿಸಬಹುದು. ಫೋನ್ ಕರೆ ಮಾಡಿದ ಕೆಲವೇ ಗಂಟೆಗಳಲ್ಲಿ ಸೋಂಕಿತರ ಮನೆಗೆ ನೇರವಾಗಿ ಕಾನ್ಸ್ ನ್ಟ್ರೇಟರ್ ತಲುಪಿಸುವ ಕಾರ್ಯ ಮಾಡಿ ಅನೇಕ ರೋಗಿಗಳ ಜೀವ ಉಳಿಸುವಿಕೆಗೆ ಸಹಕಾರಿಯಾದ ಆಟೋ ಚಾಲಕ ಸ್ನೇಹಿತರಿಗೆ ಧನ್ಯವಾದ ಅರ್ಪಿಸುತ್ತೇನೆ.

    ಎಂಪಿ ಕೋವಿಡ್ ಟಾಸ್ಕ್​ಫೋರ್ಸ್: ಲಾಕ್​ಡೌನ್ ಸಮಯದಲ್ಲಿ ನನ್ನ ಕಚೇರಿಯು 24/7 ಸೇವೆ ನೀಡಲು, ಸ್ವಯಂಸೇವಕರ ದೊಡ್ಡ ತಂಡವನ್ನು (ಎಂಪಿ ಕೋವಿಡ್ ಟಾಸ್ಕ್​ಫೋರ್ಸ್) ರಚಿಸಿತ್ತು. 4 ಸಾವಿರಕ್ಕೂ ಅಧಿಕ ಸ್ವಯಂಸೇವಕರು, 2,600ಕ್ಕೂ ಅಧಿಕ ಓಲಾ ರೈಡರ್​ಗಳು ಕಾರ್ಯನಿರ್ವಹಿಸಿದ್ದಾರೆ. 5 ಸಾವಿರಕ್ಕೂ ಅಧಿಕ ವೈಯಕ್ತಿಕ ಕೋರಿಕೆಗಳು, 35 ಸಾವಿರಕ್ಕೂ ಅಧಿಕ ಆಹಾರ ಕಿಟ್ (ದಿನಸಿ) ಪೂರೈಕೆಯನ್ನು ಈ ಟಾಸ್ಕ್​ಫೋರ್ಸ್ ಅಡಿಯಲ್ಲಿ ಕೈಗೆತ್ತಿಕೊಂಡಿದ್ದು ವಿಶೇಷ.

    ವಿಶಿಷ್ಟ ಹೋಮ್ಲೈನ್ ವಾಟ್ಸ್​ಆಪ್ ಸೇವೆ: ಬೆಂಗಳೂರಿನ 30+ ನವೋದ್ಯಮಗಳ ತಾಂತ್ರಿಕ ಸಹಾಯದೊಂದಿಗೆ, ಕಾಲ್​ಸೆಂಟರ್​ನ 150 ಉದ್ಯೋಗಿಗಳು ಮತ್ತು 10 ಸಾವಿರಕ್ಕೂ ಅಧಿಕ ಫುಡ್​ಡೆಲಿವರಿ ಉದ್ಯೋಗಿಗಳ ಸಹಾಯದೊಂದಿಗೆ ದೇಶದ ಪ್ರಪ್ರಥಮ ವಾಟ್ಸ್​ಆಪ್ ಇ-ಕಾಮರ್ಸ್ ವೇದಿಕೆ ‘ಹೋಮ್ಲೈನ್’ ಆರಂಭಿಸಲಾಯಿತು. ವಾಟ್ಸ್​ಆಪ್​ನ ಸರಳ, ನಾಗರಿಕಸ್ನೇಹಿ ಸೌಲಭ್ಯದಿಂದ 19 ಸಾವಿರಕ್ಕೂ ಅಧಿಕ ಕೋರಿಕೆಗಳ ಮೂಲಕ 30 ಸಾವಿರ ನಾಗರಿಕರಿಗೆ ಸೇವೆ ನೀಡಲಾಗಿದೆ. 5 ಸಾವಿರಕ್ಕೂ ಅಧಿಕ ಡೆಲಿವರಿ ಎಕ್ಸಿಕ್ಯೂಟಿವ್​ಗಳ ಸಹಕಾರದೊಂದಿಗೆ, ಕರೊನಾ ವಾರಿಯರ್ಸ್​ಗೆ ಸಹಕಾರ ನೀಡಲಾಗಿದ್ದು, 6,200 ಉಚಿತ ಪಿಪಿಇ ಕಿಟ್​ಗಳ ವಿತರಣೆ, ರೋಗಿಗಳಿಗೆ ಹೊಸ ತಲೆದಿಂಬು, ಬೆಡ್​ಶೀಟ್ ಪೂರೈಕೆ, 35 ಸಾವಿರ ರೇಶನ್ ಕಿಟ್, ದಿನಗೂಲಿ ಕಾರ್ವಿುಕರಿಗೆ 4.50 ಲಕ್ಷ ಊಟಗಳ ಪೂರೈಕೆ, ನೀರಿನ 10 ಸಾವಿರ ಬಾಟಲ್​ಗಳನ್ನು ನೀಡಲಾಗಿದೆ.

    ಕೋವಿಡ್ ರಕ್ಷಾ: ಲಾಕ್​ಡೌನ್ ಸಂದರ್ಭದಲ್ಲಿ ಕೋವಿಡ್ ಗುಣಲಕ್ಷಣಗಳ ವರದಿ, ಟೆಸ್ಟಿಂಗ್ ಮಾಹಿತಿಗಾಗಿ ‘ಕೋವಿಡ್ ರಕ್ಷಾ’ ಎಂಬ ಡಿಜಿಟಲ್ ವೇದಿಕೆ ನಿರ್ವಿುಸಿ 1,698 ಟ್ರಯಾಜಿಂಗ್, 580ಕ್ಕೂ ಅಧಿಕ ಆಸ್ಪತ್ರೆ ರವಾನೆ, 200ಕ್ಕೂ ಅಧಿಕ ತುರ್ತು ಕೇಸ್​ಗಳ ನಿರ್ವಹಣೆ, 10,700 ಕರೆಗಳ ಸ್ಪಂದನೆ, 3,465 ವಾಟ್ಸ್​ಆಪ್ ಮೂಲಕ ಸೇವಾ ನಿರ್ವಹಣೆಯನ್ನು ಈ ಅಭಿಯಾನದ ಅಡಿಯಲ್ಲಿ ಕೈಗೊಳ್ಳಲಾಯಿತು. ಕೇಂದ್ರ ಸರ್ಕಾರದ ಹಲವು ಸಚಿವಾಲಯಗಳನ್ನು ಸಂರ್ಪಸಿ, ರಾಜ್ಯಕ್ಕೆ 3 ಲಕ್ಷ ಹೆಚ್ಚುವರಿ ರೆಮ್ಡಿಸಿವಿಯರ್​ಗಳನ್ನು ಒದಗಿಸಲು ಕ್ರಮ ಕೈಗೊಂಡಿದ್ದು ಗಮನಾರ್ಹ.

    ಬೃಹತ್ ಕೋವಿಡ್ ಲಸಿಕಾ ಅಭಿಯಾನ: ಸೀರಂ ಇನ್ಸ್​ಟಿಟ್ಯೂಟ್, ಭಾರತ್ ಬಯೋ ಟೆಕ್ ಕಂಪನಿಗಳ ಪ್ರಮುಖ ರೊಂದಿಗೆ ಮಾತನಾಡಿ, 30 ಸಾವಿರ ಹೆಚ್ಚುವರಿ ವ್ಯಾಕ್ಸಿನ್ ಅನ್ನು ಬಿಡುಗಡೆಯಾದ ಪ್ರಥಮ ವಾರದಲ್ಲಿಯೇ ಬೆಂಗಳೂರು ದಕ್ಷಿಣಕ್ಕೆ ವಿಶೇಷವಾಗಿ ಪಡೆದು ಸಂಪೂರ್ಣ ಲಸಿಕಾಕರಣಕ್ಕೆ ಪ್ರಯತ್ನಪಟ್ಟಿದ್ದೇನೆ. ಕ್ಷೇತ್ರದಲ್ಲಿ ಒಟ್ಟು 27,68,829 ಕೋವಿಡ್ ಲಸಿಕೆ ಹಾಕಲಾಗಿದ್ದು, 2 ಸಾವಿರಕ್ಕೂ ಅಧಿಕ ಅಪಾರ್ಟ್​ವೆುಂಟ್​ಗಳಲ್ಲಿ ಲಸಿಕಾ ಅಭಿಯಾನಗಳ ಮೂಲಕ ವ್ಯಾಕ್ಸಿನೇಷನ್ ನಡೆಸಿದೆವು. ಜಯನಗರದ ಶಾಲಿನಿ ಮೈದಾನದಲ್ಲಿ ಆಟೋ ಚಾಲಕರಿಗೆ ವಿಶೇಷ ಲಸಿಕಾ ಅಭಿಯಾನ ನಡೆಸಿ, ಅವರ ಕುಟುಂಬಗಳಿಗೆ ರೇಶನ್ ಕಿಟ್ ಕೂಡ ನೀಡಲಾಯಿತು. ಆರೋಗ್ಯ ಸೇವೆಯಲ್ಲಿನ ಹಲವು ಸುಧಾರಣೆಗಳಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಸಾಕ್ಷಿಯಾಗಿದೆ.

    ನಮೋ ಡಯಾಲಿಸಿಸ್ ಡೇಕೇರ್ ಯೂನಿಟ್: ಕಡಿಮೆ ದರದ ಡಯಾಲಿಸಿಸ್ ಸೇವೆ ಹೆಚ್ಚಿನ ಪ್ರಮಾಣದಲ್ಲಿ ಸಿಗುವುದು ಅಪರೂಪ. ಈ ಸಮಸ್ಯೆಗೆ ಸ್ಪಂದಿಸಲು ಸಂಸದರ ನಿಧಿ ಅಡಿಯಲ್ಲಿ, ಜಯನಗರದ ಕೆಎಸ್​ಆರ್​ಟಿಸಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಕೇಂದ್ರ ಆರಂಭಿಸಿದ್ದು, 12 ಅತ್ಯಾಧುನಿಕ ಡಯಾಲಿಸಿಸ್ ಮಶೀನ್​ಗಳಿಂದ ಪ್ರತಿ ತಿಂಗಳು 500 ಡಯಾಲಿಸಿಸ್ ಸೇವೆಯನ್ನು ಒದಗಿಸಲಾಗುತ್ತಿದೆ. ಇದೇ ರೀತಿ ಸಂಸದರ ನಿಧಿಯಿಂದ ಜಯನಗರ ಜನರಲ್ ಆಸ್ಪತ್ರೆ, ಎನ್​ಆರ್ ಕಾಲನಿ ಮೆಟರ್ನಿಟಿಗಳಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಒದಗಿಸಿ ಅಭಿವೃದ್ಧಿ ಪಡಿಸಲಾಗಿದೆ.

    ಮೊಬೈಲ್ ಹೆಲ್ತ್ಕೇರ್ ಯೂನಿಟ್: ಸಂಸದರ ನಿಧಿ ಅಡಿಯಲ್ಲಿ, ಬಡ ರೋಗಿಗಳ ಅನುಕೂಲಕ್ಕೆ 2 ಸಂಚಾರಿ ಆರೋಗ್ಯ ವಾಹನಗಳನ್ನು ವಿಕ್ಟೋರಿಯಾ ವಾಣಿ ವಿಲಾಸ ಆಸ್ಪತ್ರೆಗೆ ನೀಡಿದ್ದೇನೆ. ಈ ಸಂಚಾರಿ ಆಸ್ಪತ್ರೆಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಿಂದುಳಿದ ಪ್ರದೇಶಳಿಗೆ ತೆರಳಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ, ಸಾರ್ವಜನಿಕರ ಸೇವೆಯಲ್ಲಿ ನಿರತವಾಗಿವೆ.

    ನಮೋ ಆರೋಗ್ಯ ನಿಧಿ: ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ, ವೃದ್ಧ ನಾಗರಿಕರಿಗೆ ಸಂಸದರ ಕಚೇರಿಯು ‘ನಮೋ ಆರೋಗ್ಯ ನಿಧಿ’ ಯೋಜನೆ ಮೂಲಕ ಉಚಿತ ಔಷಧಗಳನ್ನು ನೀಡುತ್ತಿದೆ. ಮಾಸಿಕ 1 ಸಾವಿರಕ್ಕೂ ಅಧಿಕ ಜನರಿಗೆ ಉಚಿತ ಔಷಧ ಪೂರೈಕೆ ನಮ್ಮ ಕಚೇರಿಯಿಂದ ನಡೆಯುತ್ತಿರುವುದು ವಿಶೇಷ.

    ಪ್ರಧಾನಮಂತ್ರಿ ರಾಷ್ಟ್ರೀಯ ಆರೋಗ್ಯ ಪರಿಹಾರ ನಿಧಿ: ಈ ಯೋಜನೆ ಅಡಿಯಲ್ಲಿ ಇದುವರೆಗೆ 1.10 ಕೋಟಿ ರೂ. ಅನುದಾನದಲ್ಲಿ 106 ಜನರಿಗೆ ಸರ್ಜರಿ, ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುದಾನ ಒದಗಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಈ ಸೇವೆಯ ಫಲಾನುಭವಿಗಳಾಗಿದ್ದಾರೆ.

    ಕಳೆದ 5 ವರ್ಷಗಳಲ್ಲಿ ಕೋವಿಡ್​ನಂತಹ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸುವ ಜೊತೆಗೆ ಜನಾನಕೂಲವಾಗುವ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗಿದ್ದು, ಇನ್ನೂ ಹಲವಾರು ಫಲಾನುಭವಿಗಳನ್ನು ಮುಟ್ಟುವ ಗುರಿಯೊಂದಿಗೆ ನನ್ನ 2ನೇ ಅವಧಿಯಲ್ಲಿ ಕಾರ್ಯನಿರ್ವಹಿಸಲಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಬೆಂಗಳೂರು ದಕ್ಷಿಣದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಇಡೀ ಭಾರತದಲ್ಲಿಯೇ ಮಾದರಿಯನ್ನಾಗಿಸುವ ಮೂಲಕ ಆರೋಗ್ಯ ಸೇವೆಯ ಗುಣಮಟ್ಟವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಲಿದ್ದೇನೆ.

    (ಲೇಖಕರು ಬೆಂಗಳೂರು ದಕ್ಷಿಣ ಸಂಸದರು)

    ಶಸ್ತ್ರಚಿಕಿತ್ಸೆಯಿಂದ ಚೇತರಿಕೆ: ವಿಡಿಯೋ ಹಂಚಿಕೊಂಡ ಜಗ್ಗಿ ವಾಸುದೇವ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts