More

    RCB vs PBKS, IPL 2024: ಚಿನ್ನಸ್ವಾಮಿಯಲ್ಲಿ ಡಿಕೆ ಆರ್ಭಟ! ರೋಚಕ ಗೆಲುವು ದಾಖಲಿಸಿದ ಆರ್​ಸಿಬಿ

    ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದ್ದೇ ತಡ ಮೊದಲ ಪಂದ್ಯದಿಂದಲೇ ಕ್ರಿಕೆಟ್​ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಕೆರಳಿದೆ. ನಿನ್ನೆ (ಮಾ.25) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್​ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವಿನ ಪಂದ್ಯದಲ್ಲಿ ದಿನೇಶ್ ಕಾರ್ತಿಕ್​ ಆರ್ಭಟದಿಂದ ಆರ್​ಸಿಬಿ ರೋಚಕವಾಗಿ ಗೆದ್ದು ಬೀಗಿತು.

    ಇದನ್ನೂ ಓದಿ: ಚೀನಾ ಮತ್ತೆ ಅರುಣಾಚಲ ಕ್ಯಾತೆ: ಭಾರತ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದ ವಿದೇಶಾಂಗ ವಕ್ತಾರ

    ಐಪಿಎಲ್​ 2024ರ ಆವೃತ್ತಿಯಲ್ಲಿ ತನ್ನ ಮೊದಲು ಗೆಲುವು ದಾಖಲಿಸಿದ ಆರ್​ಸಿಬಿ, ತವರಿನಲ್ಲೇ ಗೆದ್ದಿದ್ದು ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿತು. ಟಾಸ್​ ಗೆದ್ದ ಆರ್​​ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಪಂಜಾಬ್ ಕ್ಯಾಪ್ಟನ್ ಶಿಖರ್​ ಧವನ್, ಜಿತೇಶ್​ ಶರ್ಮಾ ನೆರವಿನಿಂದ ಕಿಂಗ್ಸ್​ 20 ಓವರ್​ಗಳಲ್ಲಿ 176 ರನ್​ ಕಲೆಹಾಕುವಲ್ಲಿ ಯಶಸ್ವಿಯಾಯಿತು.

    ಇನ್ನು ಈ ಗುರಿಯನ್ನು ಬೆನ್ನಟ್ಟಿದ ಆರ್​​ಸಿಬಿ ತಂಡಕ್ಕೆ ಆರಂಭಿಕ, ಕ್ಯಾಪ್ಟನ್ ಫಾಫ್ ವಿಕೆಟ್​ ಬೇಗ ಕಳೆದುಕೊಂಡಿದ್ದು, ದೊಡ್ಡ ಆಘಾತ ತಂದೊಡ್ಡಿತು. ಆದ್ರೆ, ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತ ಕಿಂಗ್ ಕೊಹ್ಲಿ, 49 ಎಸೆತಗಳಲ್ಲಿ 77 ರನ್ ಗಳಿಸಿ ಪೆವಿಲಿಯನ್ ಸೇರಿದರು. ತದನಂತರ ಬ್ಯಾಕ್ ಟು ಬ್ಯಾಕ್ ವಿಕೆಟ್ ಪತನವಾದ ಬೆನ್ನಲ್ಲೇ ಯಾರು ಆಡಲಿದ್ದಾರೆ ಎಂಬ ಗೊಂದಲ ಕಾಡುತ್ತಿದ್ದಂತೆ ಆರ್​ಸಿಬಿಯನ್ನು ಗೆಲುವಿನ ದಡ ಸೇರಿಸಿದ್ದು, ದಿನೇಶ್ ಕಾರ್ತಿಕ್! ಕೇವಲ 10 ಎಸೆತಗಳಲ್ಲಿ ಅಜೇಯ 28 ರನ್ ಗಳಿಸುವ ಮೂಲಕ ಬೆಂಗಳೂರಿಗೆ ಭರ್ಜರಿ ಗೆಲುವು ತಂದುಕೊಟ್ಟರು.

    ಇದನ್ನೂ ಓದಿ: 3030 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು

    ಆರ್​ಸಿಬಿಗೆ ನಾಲ್ಕು ವಿಕೆಟ್‌ಗಳ ಜಯ:
    ವಿರಾಟ್ ಕೊಹ್ಲಿ: 49 ಎಸೆತಗಳಲ್ಲಿ 77 ರನ್
    ದಿನೇಶ್ ಕಾರ್ತಿಕ್ 10 ಎಸೆತಗಳಲ್ಲಿ ಅಜೇಯ 28 ರನ್
    ಮಹಿಪಾಲ್ ಲೊಮ್ರೋರ್ ಕೂಡ 8 ಎಸೆತಗಳಲ್ಲಿ ಅಜೇಯ 17 ರನ್

    ನನಗೆ ಸಾಕಾಗಿದೆ, 1 ಗಂಟೆಗೆ 5 ಲಕ್ಷ ರೂ. ಕೊಡಿ, ಬನ್ನಿ… ವೈರಲ್ ಆಗ್ತಿದೆ ಈ ನಿರ್ದೇಶಕನ ಹೇಳಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts