

ಬೆಂಗಳೂರು: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ರಾತ್ರಿ ಮಲಗಿದ್ದ ಸ್ಪಂದನಾ ಹಾಸಿಗೆಯಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯ ಬ್ಯಾಂಕಾಕ್ ನಲ್ಲೇ ಸ್ಪಂದನ ಪಾರ್ಥೀವ ಶರೀರವಿದ್ದು, ನಾಳೆ ಸಂಜೆ ವೇಳೆಗೆ ಮೃತದೇಹ ಬೆಂಗಳೂರಿಗೆ ಬರುವ ಸಾಧ್ಯತೆಗಳಿವೆ.
ಮೂಲಗಳ ಪ್ರಕಾರ ಸ್ಪಂದನಾ ದೇಹದ ತೂಕ ಇಳಿಸಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ. ಸಖತ್ ಫ್ಯಾಟ್ ಆಗಿದ್ದ ಸ್ಪಂದನಾ ಸ್ಲಿಮ್ ಆಗಲು ಬಯಸಿದ್ದರು. ತೆಳ್ಳಗಾಗಲು ಸ್ಪಂದನಾ ಪರ್ಯಾಯ ಚಿಕಿತ್ಸೆ ಮೊರೆ ಹೋಗಿದ್ದರಾ ಎಂಬ ಪ್ರಶ್ನೆಯೂ ಸಹ ಸಹಜವಾಗಿ ಮೂಡಲಾರಂಭಿಸಿದೆ. ಸ್ಪಂದನಾ 10 ಕೆಜಿ ಸಣ್ಣಗಾಗಿದ್ದರು ಎಂಬ ಮಾಹಿತಿಯೂ ಲಭಿಸಿದೆ.
ಸ್ಪಂದನಾ ಮತ್ತು ವಿಜಯ್ ಹಲವು ವರ್ಷಗಳಿಂದ ಪ್ರೀತಿಸಿ, 2007ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು. ಇವರಿಗೆ ಶೌರ್ಯ ಎಂಬ ಒಬ್ಬ ಮಗನಿದ್ದಾನೆ.
ಸ್ಪಂದನಾ 2016 ರಲ್ಲಿ ತೆರೆಕಂಡ ರವಿಚಂದ್ರನ್ ಅವರ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದರು, ಇದರ ಜೊತೆಗೆ ಸ್ಪಂದನಾ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದರು.