ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ಅನಿರ್ಧಿಷ್ಟಾವದಿ ಪ್ರತಿಭಟನೆ

escom
Published on

ಬೆಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘವು ವಿವಿಧ ಬೇಡಿಕೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್ ಮುಂಭಾಗ ಮಂಗಳವಾರ ಅನಿರ್ಧಿಷ್ಟಾವದಿ ಪ್ರತಿಭಟನೆ ಆರಂಭಿಸಿದೆ.

ಶತಮಾನದ ಹಿನ್ನೆಲೆಹೊಂದಿರುವ ಸಂಘದಲ್ಲಿ 15 ಸಾವಿರ ಸದ್ಯಸ್ಯರಿದ್ದು, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಸಾವಿರಾರು ಗುತ್ತಿಗೆದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಸ್ಮಾರ್ಟ್ ಎನರ್ಜಿ ಮೀಟರ್ ದರ ಏರಿಕೆಯಾದ ನಂತರ ಹಿಂದಿನ ಮಾಪಕಗಳನ್ನು ನೀಡಲು 3 ತಿಂಗಳ ಕಾಲಾವಕಾಶ ನೀಡುವುದು. ಸ್ವಾಧೀನಾನುಭವ ಪತ್ರವನ್ನು ವಿದ್ಯುತ್ ಸಂಪರ್ಕ ಪಡೆಯುವಾಗ ಕಡ್ಡಾಯಮಾಡಿರುವ ಬಗ್ಗೆ. ಬೆಸ್ಕಾಂ ನಗರ ವ್ಯಾಪ್ತಿಯ ಕಛೇರಿಗಳಲ್ಲಿ ನೆಟವರ್ಕ್ ಸಮಸ್ಯೆ ಮತ್ತು ಗ್ರಾಮಾಂತರ ವ್ಯಾಪ್ತಿಯ ಐಡಿಯಾ ಇನ್ಫಿನಿಟಿ ನೆಟ್ವರ್ಕ್ ಇಲ್ಲದಿರುವ ಬಗ್ಗೆ, ವಿದ್ಯುತ್ ಪರಿವೀಕ್ಷಣಾಲಯದ ಸೇವೆಗಳಲ್ಲಿ ಶುಲ್ಕಗಳನ್ನು ಹೆಚ್ಚಿಸಿರುವುದು, ವಿದ್ಯುತ್ ಪರಿವೀಕ್ಷಣಾಲಯದ ಸೇವೆಗಳಲ್ಲಿ ಶುಲ್ಕ ಹೆಚ್ಚಳ, ಅನುಭವದ ಆಧಾರದ ಮೇಲೆ ದ್ವಿತೀಯ ದರ್ಜೆ ಗುತ್ತಿಗೆದಾರರಿಗೆ ಪ್ರಥಮ ದರ್ಜೆ ಪರವಾನಗಿ ನೀಡುವುದು, ಅಕ್ರಮವಾಗಿ ಪಡೆದಿರುವ ಕೃಷಿ ವಿದ್ಯುತ್ ಸಂಪರ್ಕವನ್ನು ಸಕ್ರಮಗೊಳಿಸುವುದು. ಅಪಘಾತ, ಮರಣ ಹೊಂದಿದ ವಿದ್ಯುತ್ ಕಾರ್ಮಿಕರಿಗೆ ಎಸ್ಕಾಂಗಳಿಂದ ಪರಿಹಾರ ನೀಡುವುದು, ಆರ್ಥಿಕವಾಗಿ ಹಿಂದುಳಿದ ವಿದ್ಯುತ್ ಗುತ್ತಿಗೆದಾರರ ಕ್ಷೇಮಾಭಿವೃದ್ಧಿ ನಿಗಮ ಸ್ಥಾಪನೆ ಸೇರಿದಂತೆ ಒಟ್ಟು 10 ಬೇಡಿಕೆಗಳನ್ನು ಸರ್ಕಾರದ ಮುಂದಿರಿಸಿದ ಸಂಘವು ಪ್ರತಿಭಟನೆಗೆ ಮುಂದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net