ಬೆಂಗಳೂರು: ವಿಭಿನ್ನ ಪ್ರದರ್ಶನಗಳ ಮೂಲಕ ರಂಗವಿಮರ್ಶಕರ ಗಮನ ಸೆಳೆದಿರುವ ಆಜೀವಿಕ ತಂಡ ಪ್ರಸ್ತುತ ಪಡಿಸುತ್ತಿರುವ ನೂತನ ಪ್ರಯೋಗ ಅಲ್ಲಮನ ಬಯಲಾಟ ಮಾ.22ಕ್ಕೆ ಪ್ರದರ್ಶನಗೊಳ್ಳಲಿದೆ.

ಬೆಳಕಿನ ಕಾಯಕ್ಕೆಂಥ ನಿದ್ದೆ? ಬಯಲು ನಿದ್ರಿಸುವುದುಂಟೆ ಎಂಬ ಅಲ್ಲಮನ ಬೆಡಗಿನ ವಚನ ಶೈಲಿಯನ್ನೆ ಟ್ಯಾಗ್‌ಲೈನ್ ಆಗಿ ಬಳಸುವ ಮೂಲಕ ರಂಗಾಸಕ್ತರ ಗಮನ ಸೆಳೆದಿರುವ ಆಜೀವಿಕ ತನ್ನ ಪ್ರತಿ ಪ್ರಯೋಗದ ಬಗ್ಗೆ ಹೊಸತೊಂದು ಚರ್ಚೆ ಹುಟ್ಟು ಹಾಕಿದೆ. ಅಲ್ಲಮನ ಗಂಭೀರ ತಾತ್ವಿಕ ಚಿಂತನೆ, ತಾಕಲಾಟ, ವೈರುಧ್ಯ, ಬೆಡಗುಗಳ ಜಿಜ್ಞಾಸೆಗಳ ಪಲ್ಲಟ– ಮೇಲಾಟಗಳನ್ನು ಹೊರಣವಾಗಿಸಿಕೊಂಡಿರುವ ಅಲ್ಲಮನ ಬಯಲಾಟ ನಾಟಕವು ಹೊಸ ನಿರೀಕ್ಷೆಯೊಂದನ್ನು ಹುಟ್ಟುಹಾಕಿದೆ.
ಲಕ್ಷ್ಮೀಪತಿ ಕೋಲಾರ ರಚಿಸಿರುವ ನಾಟಕದ ವಿನ್ಯಾಸ ಮತ್ತು ನಿರ್ದೇಶನವನ್ನು ಡಾ.ಉದಯ್ ಸೋಸಲೆ ಮಾಡಿದ್ದಾರೆ. ಹನುಮಂತ ಮಂಡ್ಯ ಸಂಗೀತ, ಮಹದೇವಸ್ವಾಮಿ ಬೆಳಕು, ಮೋಹನಕುಮಾರ್ ಪ್ರಸಾಧನ ಮಾಡಿದ್ದಾರೆ. ಮಾ.22ರಂದು ಸಂಜೆ 6.30ಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ಕಾಣಲಿದೆ.
ಪುನೀತ್ ಕೇವಲ ನಟರಲ್ಲ, ಸ್ಪೂರ್ತಿಯ ಚಿಲುಮೆ; ಕೆಂಗೇರಿಯಲ್ಲಿ ಅಪ್ಪು ಜನ್ಮದಿನಾಚರಣೆ