ಸಿನಿಮಾ

ಬಿಜೆಪಿಯ ‘ಪ್ರಜಾ ಪ್ರಣಾಳಿಕೆ’ ಬಿಡುಗಡೆ; ಕಾಂಗ್ರೆಸ್‌ ‘ಗ್ಯಾರಂಟಿ’ಗಳಿಗೆ ಸೆಡ್ಡು!

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಮೇ 10ರಂದು ಮತದಾನ ನಡೆಯಲಿದ್ದು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಹೀಗಾಗಿ ಇಂದು ಬಿಜೆಪಿ ಪಕ್ಷ ಪ್ರಜಾ ಪ್ರಣಾಳಿಕೆ ಹೆಸರಿನಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಮೂಲಕ ಕಾಂಗ್ರೆಸ್‌ ‘ಗ್ಯಾರಂಟಿ’ಗಳಿಗೆ ಸೆಡ್ಡು ಹೊಡೆದಿದೆ.

ಖಾಸಗಿ ಹೋಟೆಲ್​​ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಪ್ರಣಾಳಿಕೆ ಬಿಡುಗಡೆಯಾಗಿದೆ. ಸಚಿವ‌ ಸುಧಾಕರ್ ಮಾತನಾಡಿ, ಪ್ರಣಾಳಿಕೆ‌ರಚನೆ‌ ವೇಳೆ 6 ಲಕ್ಷ‌ ಸಲಹೆಗಳು ಬಂದಿವೆ. ಪರಿಣಿತರ ಜೊತೆ ಚರ್ಚಿಸಿ‌ 900 ಸಲಹೆ‌ ಪಡೆಯಲಾಗಿದೆ. ರೈತರಿಗೆ, ಕೂಲಿ ಕಾರ್ಮಿಕರಿಗೆ, ಪ್ರತಿಯೊಂದ ಕ್ಷೇತ್ರದಲ್ಲೂ‌ ಬದಲಾವಣೆ ತರುವ‌ ನಿಟ್ಟಿನಲ್ಲಿ ಪ್ರಣಾಳಿಕೆ ತಯಾರಿಕೆ ಮಾಡಲಾಗಿದೆ. ಸುಳ್ಳು ಭರವಸೆಗಳನ್ನ ಕೊಡದೇ ಈ‌ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಬೇರೆಯವರ ರೀತಿ ನಾವು ಸುಳ್ಳು ಭರವಸೆ ನೀಡೋದಿಲ್ಲ. ನಮ್ಮ ಭರವಸೆ ಮೇಲೆ ಜನರಿಗೆ ನಂಬಿಕೆ ಇದೆ. ಕಾಂಗ್ರೆಸ್ 13 ರಾಜ್ಯಗಳಲ್ಲಿ ಇದೇ ರೀತಿ ಭರವಸೆ ನೀಡಿದ್ರು ಅವರ ಭರವಸೆ ಜನ ನಂಬೋದಿಲ್ಲ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಕೆಲ ದಿನ ಮಹಾರಾಷ್ಟ್ರ ಇಲ್ಲಿ ಯಾವುದೇ ಭರವಸೆ ಈಡೇರಿಸಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ನಕಲಿ ಆಡಿಯೋ ವೈರಲ್; ಕೆಜಿಎಫ್​ ಹಾಲಿ ಶಾಸಕಿಯ ಪತಿಯಿಂದ ದೂರು ದಾಖಲು

ಪಕ್ಷದ ಸಂಸದೀಯ ಮಂಡಳಿ ಸದಸ್ಯ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಚುನಾವಣಾ ಪ್ರಣಾಳಿಕೆ ಸಲಹಾ ಸಮಿತಿ ಸಂಚಾಲಕ, ಸಚಿವ ಡಾ.ಕೆ.ಸುಧಾಕರ್ ಬಿಜೆಪಿ ರಾಜ್ಯಾಧ್ಯಕ್ಷ ಹಾಜರಿದ್ದರು‌.

ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಗುಡುಗು ಸಹಿತ ಮಳೆ ಸಾಧ್ಯತೆ

Latest Posts

ಲೈಫ್‌ಸ್ಟೈಲ್