ಮೂಲ್ಕಿ: ಹೆಚ್ಚುತ್ತಿರುವ ಮೊಬೈಲ್ ಬಳಕೆ ಸಹಿತ ನೈತಿಕ ಮೌಲ್ಯಗಳು ಮರೆಯಾಗುತ್ತಿರುವ ಸನ್ನಿವೇಶದಲ್ಲಿ ಹೆತ್ತವರು, ಶಿಕ್ಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡಬೇಕು ಎಂದು ಸಿಎಸ್‌ಐ ಕೆಎಸ್‌ಡಿ ಮಂಗಳೂರು ಬಿಷಪ್ ರೈಟ್ ರೆ.ಹೇಮಚಂದ್ರ ಕುಮಾರ್ ಹೇಳಿದರು.
ಕಾರ್ನಾಡ್ ಸಿಎಸ್‌ಐ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.
ಮೂಲ್ಕಿ ಯುನಿಟಿ ಚರ್ಚ್ ಸಭಾಪಾಲಕ ರೆ.ಸ್ಟೀವನ್ ಸರ್ವೋತ್ತಮ ಮಾತನಾಡಿದರು. ಸಿಎಸ್‌ಐ ಶಿಕ್ಷಣ ಸಂಸ್ಥೆಯಲ್ಲಿ ಸೇವೆಗೈದ ದೈಹಿಕ ಶಿಕ್ಷಣ ಶಿಕ್ಷಕ ಹರಿಶ್ಚಂದ್ರ ಎಂ., ಮೂಲ್ಕಿ ನಗರ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಹರ್ಷರಾಜ್ ಶೆಟ್ಟಿ ಜಿ.ಎಂ. ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದ 15 ವಿದ್ಯಾರ್ಥಿಗಳನ್ನು, ಪಠ್ಯೇತರ ವಿಷಯದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್, ಮೂಲ್ಕಿ ಶಾಂಭವಿ ಜೆಸಿ ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ಹಬ್ಬಿಬುಲ್ಲ, ಎಂಆರ್‌ಪಿಎಲ್ ಉದ್ಯೋಗಿ ಸಂಧ್ಯಾ ದಿವಾಕರ್ ಸಾಲ್ಯಾನ್, ಸಭಾಪಾಲನಾ ಸಮಿತಿ ಅಧ್ಯಕ್ಷ ರೆ.ಸ್ಟೀವನ್ ಸರ್ವೋತ್ತಮ, ಶಾಲಾ ಸಂಚಾಲಕ ರಂಜನ್ ಜತ್ತನ್ನ, ಮಾಜಿ ಸಂಚಾಲಕ ಪ್ರೊ.ಸ್ಯಾಮ್ ಮಾಬೆನ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹರ್ಷರಾಜ್ ಶೆಟ್ಟಿ ಜಿ.ಎಂ., ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕವಿತಾ, ಶಾಲಾ ನಾಯಕ ಕ್ಯಾಲ್ವಿನ್ ಗಿಡಿಯೋನ್ ಸೋನ್ಸ್, ದೈಹಿಕ ಶಿಕ್ಷಣ ಶಿಕ್ಷಕ ಹರಿಶ್ಚಂದ್ರ ಎಂ., ಶಾಲಾ ಮುಖ್ಯಶಿಕ್ಷಕಿ ಝೀಟ ಮೆಂಡೋನ್ಸ ಉಪಸ್ಥಿತರಿದ್ದರು.
ಸಂಚಾಲಕ ರಂಜನ್ ಜತ್ತನ್ನ ಸ್ವಾಗತಿಸಿದರು. ಎಲಿಜಬೆತ್ ಪುಷ್ಪಲತ ವಂದಿಸಿದರು. ಶಿಕ್ಷಕಿಯರಾದ ಪ್ರತೀಕ್ಷ, ರೇಶ್ಮಾ ಕಾರ್ಯಕ್ರಮ ನಿರೂಪಿಸಿದರು.
ಆಶೀರ್ವಾದ ಪಡೆಯಲು ಪ್ರಾರ್ಥನೆ ಮುಖ್ಯ :ಧರ್ಮಗುರು ಸಿಲ್ವೆಸ್ಟರ್ ಡಿಕೋಸ್ತ ಹೇಳಿಕೆ
ಸಾವಯವ ಪದ್ಧತಿಯಿಂದ ಮಣ್ಣಿನ ಫಲವತ್ತತೆ ವೃದ್ಧಿ : ಕಿಶೋರ್ ಕುವಾರ್ ಬೊಟ್ಯಾಡಿ ಮಾಹಿತಿ