ಕಡಬ: ಕೃಷಿಕರು ಒಂದೇ ಬೆಳೆ ವಾಡುವ ಬದಲು ಮಿಶ್ರಬೆಳೆಗೆ ಆದ್ಯತೆ ನೀಡಬೇಕು. ಸಾವಯವ ಗೊಬ್ಬರ ಬಳಸುವ ಮೂಲಕ ಭೂಮಿಯ ಫಲವತ್ತತೆ ವೃದ್ಧಿಯಾಗುವುದರ ಜತೆಗೆ ರಾಸಾಯನಿಕಮುಕ್ತ ಬೆಳೆ ಪಡೆಯುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುವಾರ್ ಬೊಟ್ಯಾಡಿ ಹೇಳಿದರು.
ಕಾಣಿಯೂರಿನಲ್ಲಿ ಇತ್ತೀಚೆಗೆ ನಡೆದ ಚಾರ್ವಾಕ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಘ ಶತವಾನೋತ್ಸವದ ಪ್ರಯುಕ್ತ ಸಂದ ಕಾರ್ಯವ್ಯಾಪ್ತಿಯ ಸದಸ್ಯರಿಗೆ ವಿವಿಧ ಕ್ರೀಡಾಕೂಟ ಉದ್ಘಾಟಿಸಿ ವಾತನಾಡಿದರು.
ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಗಣೇಶ್ ಉದನಡ್ಕ ಅಧ್ಯಕ್ಷತೆ ವಹಿಸಿದ್ದರು. ಕಿಶೋರ್ ಕುವಾರ್, ಕರ್ನಾಟಕ ಸಹಕಾರ ಗ್ರಾಹಕರ ಮಹಾಮಂಡಲ ಬೆಂಗಳೂರು ನಿರ್ದೇಶಕ ಉದಯ ರೈ ವಾದೋಡಿ ಅವರನ್ನು ಸನ್ಮಾನಿಸಲಾಯಿತು.
ಕಾಣಿಯೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಕೊಪ್ಪ, ಸದಸ್ಯರಾದ ರಾಮಣ್ಣ ಗೌಡ ಮುಗರಂಜ, ಲಲಿತಾ ದರ್ಖಾಸು, ಅಂಬಾಕ್ಷಿ ಕೂರೇಲು, ಸುಲೋಚನಾ ಮಿಯೋಲ್ಪೆ, ಕೀರ್ತಿ ಕುವಾರಿ ಅಂಬುಲ, ತೇಜಕುವಾರಿ ಉದ್ಲಡ್ಡ, ಮೀರಾ ಕಳೆಂಜೋಡಿ, ಕಾಣಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ಸುರೇಶ್ ಓಡಬಾಯಿ, ಚಾರ್ವಾಕ ಹಾ.ಉ.ಸ.ಸಂಘ ಅಧ್ಯಕ್ಷ ಸತ್ಯನಾರಾಯಣ ಕಲ್ಲೂರಾಯ, ದೋಳ್ಪಾಡಿ ಹಾ.ಉ.ಸ. ಸಂಘ ಅಧ್ಯಕ್ಷ ಶಿವರಾಮ ಗೌಡ ದೋಳ್ಪಾಡಿ, ಕಾಣಿಯೂರು ಸ.ಹಿ.ಪ್ರಾ. ಶಾಲಾ ಪ್ರಭಾರ ಮುಖ್ಯಶಿಕ್ಷಕ ಬಾಲಕೃಷ್ಣ ಕೆ., ಅಕ್ರಮ ಸಕ್ರಮ ಸಮಿತಿ ಮಾಜಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಮೆದು, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಲ ಬೆಂಗಳೂರು ನಿರ್ದೇಶಕ ಉದಯ ರೈ ಮಾದೋಡಿ, ಸಂಘ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ, ಸಂಘ ನಿರ್ದೇಶಕ ಅನಂತ ಕುವಾರ್ ಬೈಲಂಗಡಿ, ಪರಮೇಶ್ವರ ಅನಿಲ, ಸುಂದರ ದೇವಸ್ಯ, ದಿವಾಕರ ಮರಕಡ, ರಮೇಶ್ ಉಪ್ಪಡ್ಕ, ಲೋಕೇಶ್ ಅತಾಜೆ, ವಿಶ್ವನಾಥ ದೇವಿನಗರ, ವೀಣಾ ಅಂಬುಲ, ಶೀಲಾವತಿ ಮುಗರಂಜ, ರತ್ನಾವತಿ ಮುದುವ, ನಿವೃತ ಸಹಾಯಕ ಸಿಇಒ ಶೇಸಪ್ಪ ಗೌಡ ಇಡ್ಯಡ್ಕ, ಸಿಬ್ಬಂದಿ ವಾಣಿ ಅಭಿಕಾರ, ವೇಣುಗೋಪಾಲ್ ಉಪ್ಪಡ್ಕ, ಪುನೀತ್ ಬಂಡಾಜೆ, ವಿನಯ ಎಳುವೆ, ವಸಂತಿ, ಕೀರ್ತಿ ಎಳುವೆ ಮೊದಲಾದವರಿದ್ದರು.
ಗಣೇಶ್ ಉದನಡ್ಕ ಸ್ವಾಗತಿಸಿದರು. ವಕೀಲ ಕೌಶಿಕ್ ಆಲಂಕಾರು ನಿರೂಪಿಸಿದರು. ಸಿಇಒ ಅಶೋಕ್ ಗೌಡ ವಂದಿಸಿದರು.