ಮೂಲ್ಕಿ: ಪ್ರಾರ್ಥನೆ ದೇವರ ಆಶೀರ್ವಾದ ಪಡೆಯಲು ಸುಲಭ ದಾರಿಯಾಗಿದ್ದು, ಸಂಘಟಿತವಾಗಿ ಮಾಡುವ ಪ್ರಾರ್ಥನೆ ಜೀವನಕ್ಕೆ ಅಭಿವೃದ್ಧಿ ತರಲಿದೆ ಎಂದು ಧರ್ಮಗುರುಸಿಲ್ವೆಸ್ಟರ್ ಡಿಕೋಸ್ತ ಹೇಳಿದರು.
ಮೂಲ್ಕಿ ಇಮ್ಯಾಕ್ಯುಲೇಟ್ ಕಂಸೆಪ್ಶನ್ ಚರ್ಚ್ ವಾರ್ಷಿಕ ಹಬ್ಬ ಪ್ರಯುಕ್ತ ನಡೆದ ವಿಶೇಷ ಪ್ರಾರ್ಥನಾ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಮದರ್ ಥೆರೇಸಾ ವಾರ್ಡು ವಿಗಾರ್‌ವಾರ್ ಧರ್ಮಗುರು ಆಸ್ಟಿನ್ ಪೆರಿಸ್, ಮೂಲ್ಕಿ ಚರ್ಚ್ ಧರ್ಮಗುರುಗಳಾದ ಆಂಟನಿ ಶೆರಾ, ಮೂಲ್ಕಿ ಡಿವೈನ್ ಕಾಲ್ ಸೆಂಟರ್ ನಿರ್ದೇಶಕ ಆಬ್ರಹಾಂ ಡಿಸೋಜ, ಅನಿಲ್ ಫರ್ನಾಂಡಿಸ್, ರೊನಾಲ್ಡ್ ಡಿಸಿಲ್ವ, ಮಾರ್ಕ್ ಮಥಾಯಸ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಓಸ್ವಾಲ್ಡ್ ಕೊರೆಯಾ, ಕಾರ್ಯದರ್ಶಿ ಎಡ್ವಿನ್ ಡಿಸೋಜ, ವಾರ್ಡು ಗುರಿಕಾರರು, ಧರ್ಮಸಭಾ ಸದಸ್ಯರು ಹಾಜರಿದ್ದರು.
ಕಲಾವಿದರಿಗೆ ಗೃಹಭಾಗ್ಯ : ಪಟ್ಲ ಫೌಂಡೇಷನ್‌ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಹೇಳಿಕೆ