ಕಾಸರಗೋಡು: ಶಾಲಾ ವಿದ್ಯಾರ್ಥಿನಿಗೆ ವಿವಾಹ ಭರವಸೆಯೊಡ್ಡಿ ಗರ್ಭಿಣಿಯಾಗಿಸಿ ನಂತರ ವಿದೇಶಕ್ಕೆ ಪರಾರಿಯಾಗಿದ್ದ ಕಾಞಂಗಾಡು ಪುಲ್ಲೂರು ನಿವಾಸಿ ಮಹಮ್ಮದ್ ಆಸಿಫ್(26) ಎಂಬಾತನನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ಪೊಲೀಸರು ಬಂಧಿಸಿದ್ದಾರೆ. ವಿವಾಹ ಭರವಸೆಯೊಡ್ಡಿ 2022ರಲ್ಲಿ ವಿದ್ಯಾರ್ಥಿನಿಯನ್ನು ಗರ್ಭಿಣಿಯನ್ನಾಗಿಸಿದ್ದಲ್ಲದೆ, ಆಕೆಯ ಐದು ಪವನು ಚಿನ್ನಾಭರಣವನ್ನೂ ದೋಚಿರುವ ಬಗ್ಗೆ ದೂರು ನೀಡಲಾಗಿತ್ತು. ವಿದೇಶಕ್ಕೆ ಪರಾರಿಯಾಗಿದ್ದ ಈತನ ಪತ್ತೆಗಾಗಿ ಕಸಬ ಠಾಣೆ ಪೊಲೀಸರು ಲುಕೌಟ್ ನೋಟೀಸ್ ಜಾರಿಗೊಳಿಸಿದ್ದರು. ವಿದೇಶದಿಂದ ಆಗಮಿಸಿದ ಈತ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಇಮಿಗ್ರೇಶನ್ ಅಧಿಕಾರಿಗಳು ಕಸಬ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೋಕ್ಸೋ ಅನ್ವಯ ಈತನನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಶ್ರೀನಿವಾಸ ಕಲ್ಯಾಣೋತ್ಸವ ಆಮಂತ್ರಣ ಬಿಡುಗಡೆ : ಕಡಬ ತಾಲೂಕು ಸಮಿತಿ ರಚನೆ