ಶ್ರೀನಿವಾಸ ಕಲ್ಯಾಣೋತ್ಸವ ಆಮಂತ್ರಣ ಬಿಡುಗಡೆ : ಕಡಬ ತಾಲೂಕು ಸಮಿತಿ ರಚನೆ

New Project (6)
Published on

ಕಡಬ: ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿ ಎರಡನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಡಿ.28, 29ರಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಕಡಬ ಶ್ರೀ ದುರ್ಗಂಬಿಕಾ ದೇವಸ್ಥಾನದ ಸಭಾಭವನದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಕಡಬ ತಾಲೂಕು ಟಕದ ಶ್ರೀನಿವಾಸ ಕಲ್ಯಾಣೋತ್ಸವ ಪದಾಧಿಕಾರಿಗಳ ಆಯ್ಕೆ ವಾಡಲಾಯಿತು.

ಕಾರ್ಯಾಧ್ಯಕ್ಷರಾಗಿ ವೆಂಕಟ್ರಮಣ ಕಡಬ, ಅಧ್ಯಕ್ಷರಾಗಿ ಜನಾರ್ದನ ರಾವ್ ಕಡಬ, ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ದಾಸ್ ಪೂಂಜ ಕೂನ್ತೂರು ಹಾಗೂ ಕಾರ್ಯದರ್ಶಿಯಾಗಿ ಗಿರೀಶ್ ಕಡಬ ಅವರನ್ನು ಆಯ್ಕೆ ವಾಡಲಾಯಿತು.

ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುವಾರ್ ಪುತ್ತಿಲ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು, ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಾಧ್ಯಕ್ಷ ಉಮೇಶ್ ಕೊಡಿಬೈಲು ಹಾಗೂ ಪ್ರಧಾನ ಕಾರ್ಯದರ್ಶಿ ರವಿಕುವಾರ್ ರೈ ಕೆದಂಬಾಡಿ ಮಠ, ಕಡಬ ಶ್ರೀ ಕಂಠ ಶ್ರೀ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸತೀಶ್ ಭೂಮಿಕಾ, ಕಡಬ ಭಾಗದ ಪ್ರಮುಖರಾದ ಸಂತೋಷ್ ಸುವರ್ಣ, ಸುರೇಶ್ ದುರ್ಗ ಗಣೇಶ್, ಸುಭಾಷ್, ಕಿಶನ್ ಕುವಾರ್ ರೈ ಪೆರಿಯಡ್ಕ, ರಾಜೇಶ್ ಪೂಂಜ, ರುರಾಮ್ ಕುಕ್ಕೆರೆ ಬೆಟ್ಟು, ನಾಗೇಶ್, ಹರೀಶ್ ರಚನ್ ಅರ್ಪಾಜೆ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net