More

    VIDEO| ಬೆಂಗಳೂರು ಕಂಬಳ; ಕಾಂತಾರ ಚಿತ್ರದಲ್ಲಿದ್ದ ಕೋಣಗಳಿಗೆ ಮೆಡಲ್

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮೊಟ್ಟಮೊದಲ ಬಾರಿಗೆ ನಡೆಯುತ್ತಿರುವ ಕಂಬಳ ಸ್ಪರ್ಧಗೆ ಅಭೂತಪೂರ್ವ ಬೆಂಬಲ ದೊರೆತ್ತಿದ್ದು, 200ಕ್ಕೂ ಅಧಿಕ ಕೋಣಗಳು ಈ ಉತ್ಸವದಲ್ಲಿ ಭಾಗಿಯಾಗಿರುವುದು ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಸಾರ್ವಜನಿಕರು ಕೋಣದ ಓಟ, ಕರಾವಳಿ ಶೈಲಿಯ ತಿಂಡಿ-ತಿನಿಸುಗಳನ್ನು ಸವಿದು ಸಂಭ್ರಮಿಸಿದ್ದಾರೆ. 

    ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸಿರುವ ಕೆಲವು ಕೋಣಗಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ತಲುಪಿದ್ದು, ಅದರಲ್ಲಿ ಕಾಂತಾರ ಸಿನಿಮಾದಲ್ಲಿ ನಟ ರಿಷಭ್ ಶೆಟ್ಟಿ ಓಡಿಸಿದ್ದ ಅಪ್ಪು-ಕಿಟ್ಟು ಎಂಬ ಕೋಣಗಳು ಕನೆಹಲಗೆ ವಿಭಾಗದಲ್ಲಿ ಪದಕ ಗೆದ್ದುಕೊಂಡಿರುವುದು ಮತ್ತಷ್ಟು ವಿಶೇಷವೆನ್ನಿಸಿದೆ.

    ಉಡುಪಿ ಜಿಲ್ಲೆಯ ಬೈಂದೂರು ನಿವಾಸಿಯಾದ ಪರಮೇಶ್ವರ್​ ಭಟ್ ಅವರು ಅಪ್ಪು-ಕಿಟ್ಟು ಕೋಣಗಳ ಮಾಲೀಕರಾಗಿದ್ದು, ಕಾಂತಾರ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಈ ಕೋಣಗಳನ್ನು ನೋಡಿ ನಗರವಾಸಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

    ಇದನ್ನೂ ಓದಿ: ಪಾರ್ಲಿಮೆಂಟ್ ಚುನಾವಣೆಗೂ ಮುನ್ನವೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿದ್ದು ಹೋಗುತ್ತೆ: ಮುರುಗೇಶ್ ನಿರಾಣಿ

    ಸಂತಸ ವ್ಯಕ್ತಪಡಿಸಿದ ಮಾಲೀಕರು

    ಈ ಕುರಿತು ಮಾತನಾಡಿರುವ ಕೋಣಗಳ ಮಾಲೀಕ ಪರಮೇಶ್ವರ್ ಭಟ್​, ಅಪ್ಪು-ಕಿಟ್ಟು ಕೋಣಗಳಿಂದ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ನಾವು ಪದಕ ಗೆದ್ದಿರುವ ಬಗ್ಗೆ ಖುಷಿ ಇದೆ. ಆರೂವರೆ ಅಡಿ ನೀರು ಚಿಮ್ಮಿಸಿದೆ. ಈ ಕಾರಣಕ್ಕೆ ನಮ್ಮ ಕೋಣಗಳು ಪದಕ ಗೆದ್ದಿದ್ದೇವೆ. ಮತ್ತೊಮ್ಮೆ ಸಂಪ್ರಾದಾಯಕವಾಗಿ ಓಡಿಸಲಿದ್ದಾರೆ ಎಂದು ಹೇಳಿದ್ದಾರೆ.

    ಕ್ರೀಡಾಪಟು ರಾಘವೇಂದ್ರ ಪೂಜಾರಿ ಮಾತನಾಡಿ, ನಮ್ಮ ಕಿಟ್ಟು – ಅಪ್ಪು ಎದುರಾಳಿ ಕೋಣಗಳಿಗೆ ಓಡುವುದರಲ್ಲಿ ಫೈಟ್ ಕೊಡುತ್ತವೆ. ಇದರಿಂದಲೇ ನಾವು ಗೆದ್ದಿದ್ದೇವೆ. ಇಷ್ಟು ದೊಡ್ಡ ಕಂಬಳದಲ್ಲಿ ಭಾಗವಹಿಸಿ ಪದಕ ಗೆದ್ದಿರುವುದು ಖುಷಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

    ಸೆಲ್ಫಿಗಾಗಿ ಮುಗಿಬಿದ್ದ ಜನ

    ಕಂಬಲ ಸ್ಪರ್ಧೆಯಲ್ಲಿ ಅಪ್ಪು ಮತ್ತು ಕಿಟ್ಟು ಪದಕಗಳನ್ನು ಗೆಲ್ಲುತ್ತಿದ್ದಂತೆ ಡಿಮ್ಯಾಂಡ್​ ಹೆಚ್ಚಾಗ ತೊಡಗಿದೆ. ಕಾಂತಾರ ಸಿನಿಮಾ ಕೋಣಗಳ‌ ಜೊತೆ ಫೋಟೋ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಮಂಗಳೂರು ಸೇರಿದಂತೆ ಬೆಂಗಳೂರಿಗರು ಬಂದು ಪೋಟೋ ತೆಗೆಸಿಕೊಳ್ಳುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts