More

    ರವಿಚಂದ್ರನ್​ ಹುಟ್ಟುಹಬ್ಬಕ್ಕೆ ‘ಕನ್ನಡಿಗ’ ಟೀಸರ್​ ಬಿಡುಗಡೆ …

    ಬೆಂಗಳೂರು: ‘ಕ್ರೇಜಿಸ್ಟಾರ್​’ ರವಿಚಂದ್ರನ್​ ಇಂದು ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ, ‘ಕನ್ನಡಿಗ’ ಚಿತ್ರತಂಡದವರು ಅವರಿಗೆ ಚಿತ್ರದ ಟೀಸರ್​ ಗಿಫ್ಟ್​ ಮಾಡಿದ್ದಾರೆ.

    ಇದನ್ನೂ ಓದಿ: ಚಿತ್ರರಂಗದವರಿಗೆ ಎರಡು ದಿನಗಳ ಕಾಲ ಉಚಿತ ಲಸಿಕೆ

    ಕಳೆದ ವರ್ಷ ರವಿಚಂದ್ರನ್​ ಅವರ ಹುಟ್ಟುಹಬ್ಬದಂದ ನಿರ್ಮಾಪಕ ರಾಜಕುಮಾರ್​ ಮತ್ತು ನಿರ್ದೇಶಕ ಗಿರಿರಾಜ್​, ರವಿಚಂದ್ರನ್​ ಅವರನ್ನು ಭೇಟಿ ಮಾಡಿ ಶುಭ ಹಾರೈಸಿದ್ದರು. ಸದ್ಯದಲ್ಲೇ ರವಿಚಂದ್ರನ್​ ಅವರ ಅಭಿನಯದಲ್ಲಿ ಒಂದು ಚಿತ್ರ ಮಾಡುವುದಾಗಿ ಅವರು ಘೋಷಿಸಿದ್ದರು. ಅದರಂತ ಅಕ್ಟೋಬರ್​ನಲ್ಲಿ ರವಿಚಂದ್ರನ್​ ಅಭಿನಯದ ‘ಕನ್ನಡಿಗ’ ಚಿತ್ರವು ಸೆಟ್ಟೇರಿತ್ತು. ಕೆಲವೇ ದಿನಗಳ ಅಂತರದಲ್ಲಿ ಚಿತ್ರದ ಶೂಟಿಂಗ್​ ಸಹ ಮುಗಿದು, ಡಿಸೆಂಬರ್​ನಲ್ಲಿ ಸೆನ್ಸಾರ್​ ಆಗಿತ್ತು.

    ರವಿಚಂದ್ರನ್​ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬುದು ಚಿತ್ರತಂಡದ ಯೋಚನೆಯಾಗಿತ್ತು. ಆದರೆ, ಲಾಕ್​ಡೌನ್​ ಇರುವುದರಿಂದ, ಇಂದು ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಚಿತ್ರದ ಟೀಸರ್​ ಬಿಡುಗಡೆ ಮಾಡಲಾಗಿದೆ. ಸ್ವಾತಂತ್ರ್ಯಪೂರ್ವ ಕಥೆ ಇರುವ ಈ ಚಿತ್ರದಲ್ಲಿ, ರವಿಚಂದ್ರನ್ ಲಿಪಿಕಾರನಾಗಿ ಕಾಣಿಸಿಕೊಂಡಿದ್ದಾರೆ.

    ಇದನ್ನೂ ಓದಿ: ರಾಜಕೀಯ ಬಿಟ್ಟು ಇನ್ಯಾವ ಬಿಜಿನೆಸ್ಸೂ ಜಾತಿ ಆಧಾರದ ಮೇಲೆ ನಡೆಯಲ್ಲ

    ‘ಕನ್ನಡಿಗ’ ಚಿತ್ರದಲ್ಲಿ ರವಿಚಂದ್ರನ್​ ಜತೆಗೆ ಪಾವನಾ ಗೌಡ, ರಾಕ್​ಲೈನ್​ ವೆಂಕಟೇಶ್​, ಗುರುದತ್​, ಜೇಮಿ ಆಲ್ಟರ್​, ಬಾಲಾಜಿ ಮನೋಹರ್, ಅಚ್ಯುತ್​ ಕುಮಾರ್​ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಗಿರಿರಾಜ್​ ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ರಚಿಸಿದ್ದಾರೆ. ರವಿ ಬಸ್ರೂರು​ ಸಂಗೀತ ಸಂಯೋಜಿಸಿದ್ದು, ಜಿ.ಎಸ್​.ವಿ. ಸೀತಾರಾಂ ಛಾಯಾಗ್ರಹಣ ಮಾಡಿದ್ದಾರೆ.

    ಅಭಿಮಾನಿಗಳಿಗೇ ಗಿಫ್ಟ್!; ಇಂದು ರವಿಚಂದ್ರನ್ ಹುಟ್ಟುಹಬ್ಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts