More

    ಚಿತ್ರರಂಗದವರಿಗೆ ಎರಡು ದಿನಗಳ ಕಾಲ ಉಚಿತ ಲಸಿಕೆ

    ಬೆಂಗಳೂರು: ಕನ್ನಡ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಱರಿಗೆ ಉಚಿತ ಲಸಿಕೆ ಹಾಕಿಸಬೇಕು ಎಂದು ಚಿತ್ರರಂಗದ ಹಲವು ಗಣ್ಯರು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಈ ಮನವಿಗೆ ಸ್ಪಂದನೆ ಸಿಕ್ಕಿದ್ದು, ಎರಡು ದಿನಗಳ ಕಾಲ ಚಿತ್ರರಂಗದವರಿಗೆ ಉಚಿತವಾಗಿ ಕೋವಿಶೀಲ್ಡ್​ ಲಸಿಕೆ ಹಾಕಲಾಗುತ್ತದೆ.

    ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಜತೆ ನಟಿಸಿದ ನಟಿ ವಿರುದ್ಧ ಎಫ್​ಐಆರ್​

    ಮೇ 31 ಮತ್ತು ಜೂನ್​ 1ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೂ ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಕೋವಿಶಿಲ್ಡ್ ಲಸಿಕೆ ಉಚಿತವಾಗಿ ನೀಡಲಾಗುವುದು. ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಬಹುದಾಗಿದೆ. ಲಸಿಕೆ ಹಾಕಿಸಿಕೊಳ್ಳಲು ಬರುವವರು ಕಡ್ಡಾಯವಾಗಿ ಆಧಾರ್ ಪತ್ರ ತರುವುದರ ಜತೆಗೆ, ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದು ಕೊಳ್ಳಬೇಕು ಎಂದು ನೋಡಲ್​ ಆಫೀಸರ್​ ರೂಪಾ​ ಅಯ್ಯರ್​ ತಿಳಿಸಿದ್ದಾರೆ.

    ಇದನ್ನೂ ಓದಿ: ಟೈಗರ್ ಶ್ರಾಫ್​ ತಂಗಿಯ ಬಿಕಿನಿ ಬಿನ್ನಾಣ; ಬೋಲ್ಡ್ ಲುಕ್​ನಲ್ಲಿ ‘ಕೃಷ್ಣ’ ಸುಂದರಿ

    ಎರಡು ದಿನಗಳ ಈ ಲಸಿಕೆ ಅಭಿಯಾನವನ್ನು ಸೋಮವಾರ ಬೆಳಗ್ಗೆ 11.30ಕ್ಕೆ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಅಂಬರೀಶ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ರಾಕ್​ಲೈನ್ ವೆಂಕಟೇಶ್, ದೊಡ್ಡಣ್ಣ, ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿಗಳು ಹಾಗೂ ಬಿಬಿಎಂಪಿ ಕಮಿಷನರ್ ಹಾಜರಿರಲಿದ್ದಾರೆ.

    ಪ್ರಭಾಸ್ ಚಿತ್ರದಲ್ಲಿ 10ಕ್ಕೂ ಅಧಿಕ ಬಾಲಿವುಡ್ ನಟರು!; ತಂಡದ ಕಲಾವಿದರ ಸಂಭಾವನೆಯೇ 200 ಕೋಟಿ ರೂ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts