ಚೀನಾದಲ್ಲಿ ವಿಜ್ಞಾನಿಯಾಗಿದ್ದ ಕನ್ನಡಿಗ ಕರೊನಾಗೆ ಬಲಿ; 38 ವರ್ಷ ವಯಸ್ಸಿನ ಯುವವಿಜ್ಞಾನಿ ಇನ್ನಿಲ್ಲ

Sc
Published on

ಚಾಮರಾಜನಗರ: ಕರೊನಾದ ಮೂಲ ಎನ್ನಲಾಗುತ್ತಿರುವ ಚೀನಾದಲ್ಲಿ ವಿಜ್ಞಾನಿಯಾಗಿದ್ದ ಕನ್ನಡಿಗ ಕರೊನಾಗೆ ಬಲಿಯಾಗಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗುಂಡಾಪುರ ಸೆಲ್ವನಾಯಕ್ (38) ಮೃತಪಟ್ಟಿರುವ ಯುವವಿಜ್ಞಾನಿ.

ಸೆಲ್ವನಾಯಕ್​ ಚೀನಾದಲ್ಲಿ ವಿಜ್ಞಾನಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಕಳೆದ ವರ್ಷವೇ ಸ್ವಗ್ರಾಮಕ್ಕೆ ಮರಳಿದ್ದರು. 15 ದಿನಗಳ ಹಿಂದೆ ಇವರಲ್ಲಿ ಕೋವಿಡ್​-19 ಸೋಂಕಿರುವುದು ದೃಢಪಟ್ಟಿತ್ತು. ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net