More

    ‘ನಾನು ಉಪೇಂದ್ರ, ಮುಖ್ಯಮಂತ್ರಿ ಆಗ್ಬೇಕು, ನೀವು ಗೆಲ್ಲಿಸ್ತೀರಾ? ಎಲ್ಲಾ ಕೆಲ್ಸ ಪಾರದರ್ಶಕತೆಯಿಂದ ಮಾಡ್ತೇನೆ’

    ಬೆಂಗಳೂರು: ನಾನು ಉಪೇಂದ್ರ, ನಾನು ಮುಖ್ಯಮಂತ್ರಿ ಆಗ್ಬೇಕು, ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ ನೀವು ನನ್ನನ್ನ ಗೆಲ್ಲಿಸ್ತೀರಾ? …

    ಹೀಗೆಂದು ನಟ ಉ‍ಪೇಂದ್ರ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್​ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್‌ ಭಾರಿ ವೈರಲ್‌ ಆಗಿದೆ.

    ಪ್ರಜಾಕೀಯ ಪಕ್ಷವನ್ನು ಹುಟ್ಟುಹಾಕಿ ನಂತರ ತಣ್ಣಗಾಗಿದ್ದ ಉಪೇಂದ್ರ ಅವರು ಇದೀಗ ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲವರಿಗೆ ಸಹಾಯ ಹಸ್ತ ನೀಡುತ್ತಿದ್ದಾರೆ. ಇದರ ಮಧ್ಯೆಯೇ ಇಂಥದ್ದೊಂದು ಪೋಸ್ಟ್‌ ಹಾಕಿದ್ದಾರೆ.

    ನೀವು ನನ್ನನ್ನ ಗೆಲ್ಲಸ್ತೀರೋ.. ಸೋಲಸ್ತೀರೋ.. ಆದರೆ ನಾನು ಎಲೆಕ್ಷನ್‍ಗೆ ನಿಲ್ಲಲ್ಲ. ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೇ ಅಂತ ಕೇಳ್ತೀರಾ ? ನಾನು (CM ) ಕಾಮನ್ ಮ್ಯಾನ್ ಆಗಿ ನಿಮ್ಮ ಜೊತೆಗೆ ಇರುತ್ತೇನೆ. ಪ್ರಜಾಕೀಯ ವಿಚಾರಧಾರೆಗಳನ್ನು ತೆಗೆದುಕೊಂಡು ಓಟ್ ಹಾಕಿ ಅವರಿಗೆ ಕೆಲಸ ಕೊಟ್ರೆ ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸೆ ಪೈಸೆ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡುವಂತಾಗಬೇಕು ಎಂದಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Upendra (@nimmaupendra)

    ಭ್ರಷ್ಟ ಪ್ರತಿನಿಧಿ ರಾಜೀನಾಮೆ ಕೊಡೋತರ ಮಾಡ್ತೀನಿ. ಈ ವ್ಯವಸ್ಥೆ ಸರೀ ಹೋಗೋಕೆ ಎರಡು ಎಲೆಕ್ಷನ್ ಜಾಸ್ತಿ ಆಗ್ಲಿ. ಜನಕ್ಕೆ ಪ್ರಜಾಪ್ರಭುಗಳಿಗೆ ಅಭ್ಯರ್ಥಿ ಇಷ್ಟ ಆಗ್ದಿದ್ರೆ ಅವನು, ಅವಳು ಕೆಳಗಿಳೀಬೇಕು ಅಂತಾ ಕಾನೂನು ಬರ್ಬೇಕು. ಅದಕ್ಕೆ ನಿಮ್ ಜೊತೆ ನಾನು ಯಾವಾಗ್ಲೂ ಇರೋ ಪರ್ಮನೆಂಟ್ CM ( ಕಾಮನ್ ಮ್ಯಾನ್) ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ. ಸರೀನಾ? ಎಂದು ಅವರು ಅದರಲ್ಲಿ ಉಲ್ಲೇಖ ಮಾಡಿದ್ದಾರೆ.

    ಇದಕ್ಕೆ ಹಲವಾರು ಅಭಿಮಾನಿಗಳು ಕಮೆಂಟ್‌ ಹಾಕುವ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಜತೆಗೆ ಒಂದಿಷ್ಟು ಸಲಹೆಗಳನ್ನೂ ನೀಡಿದ್ದಾರೆ. ಜಾತಿ, ಧರ್ಮ, ಭ್ರಷ್ಟಾಚಾರ ನೋಡಿ ಸಾಕಾಗಿದೆ. ನೀವು ಸಿಎಂ ಆಗಿ ಎಲ್ಲವನ್ನೂ ಬದಿಗೋಡಿಸಬೇಕು ಎಂದು ಅನೇಕ ಮಂದಿ ಕಮೆಂಟ್‌ ಮಾಡಿದ್ದಾರೆ.

    ಕೋವಿಡ್‌ಗೆ ಪರಿಣಾಮಕಾರಿಯಾದ ಕೊವ್ಯಾಕ್ಸಿನ್‌ಗೆ ಅನುಮೋದನೆ ಅಡ್ಡಿ! ಆರೋಗ್ಯ ಸಂಸ್ಥೆಗೆ ಕೇಂದ್ರದ ದೌಡು

    ವಾರಾಂತ್ಯದಲ್ಲೇ ವಾರಕ್ಕಾಗೋವಷ್ಟು ಕರೊನಾ: ನಾಲ್ಕು ಗಂಟೆಯಲ್ಲೇ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದರು!

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts