ಅಭಿಮಾನಿಗಳಿಗೆ ಸಿಹಿಸುದ್ದಿ ಕೊಟ್ಟ ದಿವ್ಯಾ ಉರುಡುಗ; ಬಿಗ್​​ಬಾಸ್ ಬಳಿಕ ಮೊದಲ ಸಿನಿಮಾ...

divya uruduga
Published on

ಬೆಂಗಳೂರು: ಟಿಕ್​​ಟಾಕ್​​ ವಿಡಿಯೋಗಳನ್ನು ಮಾಡಿಕೊಂಡು ಬಹಳಷ್ಟು ಖ್ಯಾತಿ ಪಡೆದಿದ್ದ, ನಂತರ ಕಿರುತೆರೆಯ ಬಹು ದೊಡ್ಡ ರಿಯಾಲಿಟಿ ಶೋ ಕನ್ನಡ ಬಿಗ್​ ಬಾಸ್​ ಸೀಸನ್​ 8ರ ಎರಡನೇ ರನ್ನರ್​ ಅಪ್ ದಿವ್ಯಾ ಉರುಡುಗ ತಮ್ಮ ಅಭಿಮಾನಿಗಳಿಗೆ ಒಂದೊಳ್ಳೆ ಸಿಹಿ ಸುದ್ದಿ ನೀಡಿದ್ದಾರೆ.

ಬಿಗ್​​​ಬಾಸ್​​ನಲ್ಲಿ ಭಾಗವಹಿಸಿದ ಸ್ಪರ್ಧಿಗಳು ಬಹುತೇಕ ಎಲ್ಲರೂ ಆ ಮನೆಯಿಂದ ಹೊರಬಂದ ಮೇಲೆ ತುಂಬಾನೆ ಫೇಮಸ್ ಆಗಿರುತ್ತಾರೆ. ಹೀಗೆ ಬಹಳಷ್ಟು ಮನೆ ಮಾತಾಗಿರುವ ದಿವ್ಯಾ ಉರುಡುಗ ಅವರಿಗೆ ಈಗ ಸಿನಿಮಾಗಳಲ್ಲಿ ನಟಿಸುವ ಅವಕಾಶ ಲಭಿಸಿದೆ.

ಬಿಗ್​​ಬಾಸ್ ಮುಗಿದು ಒಂದು ವರ್ಷ ಆಗುತ್ತಾ ಬಂದಿದೆ. ಆದರೆ ಈಗ ದಿವ್ಯಾ ಉರುಡುಗಾಗೆ ಬಿಗ್​​​ಬಾಸ್​​ನಲ್ಲಿ ಭಾಗವಹಿಸಿದ ನಂತರ ಮೊದಲ ಸಿನಿಮಾ ಆಫರ್ ಬಂದಿದೆ. ಯಾವುದು ಆ ಚಿತ್ರ? ಉರುಡುಗ ಅಭಿನಯಿಸುವ ಮೊದಲ ಸಿನಿಮಾ ಯಾವುದೆಂದರೆ 'ಪದವಿ ಪೂರ್ವ'. ಆದರೆ ಅವರು ಮಾಡುತ್ತಿರುವುದು ನಾಯಕಿ ರೋಲ್ ಅಲ್ಲ, ಬದಲಿಗೆ ಅದೊಂದು ಅತಿಥಿ ಪಾತ್ರವಾಗಿದೆ.
'ಪದವಿ ಪೂರ್ವ' ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಹರಿಪ್ರಸಾದ್ ಜಯಣ್ಣ, ದಿವ್ಯಾ ಉರುಡುಗ ಅವರದ್ದು, ಒಂದು ಪ್ರಮುಖವಾದ ಪಾತ್ರ. ವಾಸ್ತವವಾಗಿ, ಈ ಸಿನಿಮಾ ಒಂದು ಪ್ರೇಮ ಕಥೆಯಾಗಿದ್ದು, ಚಿತ್ರ ಮುಗಿಯುವುದು ದಿವ್ಯಾ ಉರುಡುಗ ಪಾತ್ರದಿಂದಲೇ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನೂ, ದಿವ್ಯಾ ಉರುಡುಗ ನಟಿಸುವ ದೃಶ್ಯ​​ಗಳ ಚಿತ್ರೀಕರಣವೇ ಸಿನಿಮಾದ ಕೊನೆಯ ಹಂತದ ಶೂಟಿಂಗ್ ಆಗಿದ್ದು, ಅದನ್ನು ಸಿನಿಮಾ ತಂಡ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಶೂಟ್ ಮಾಡಲಿದೆ. ಚಿತ್ರದ ಬಿಡುಗಡೆ ದಿನಾಂಕ ಶೀಘ್ರದಲ್ಲೇ ಘೋಷಣೆ ಆಗಲಿದೆ. ಬಿಗ್​​ಬಾಸ್ ಮುನ್ನ ದಿವ್ಯಾ ನಟಿಸಿದ 'ಗಿರ್ಕಿ' ಸಿನಿಮಾ ಸಹ ಬಿಡುಗಡೆಗೆ ಸಜ್ಜಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net