More

    ಮನೆ ಬಾಡಿಗೆ ಕಟ್ಟಲಾಗದ ಕಷ್ಟ, ಆಗ ಅವರೊಬ್ಬರೆ ನನ್ನನ್ನು ಬೆಂಬಲಿಸಿದರು: ನಿರ್ದೇಶಕ ರಾಜಮೌಳಿ ಬರೆದ ಪತ್ರ ವೈರಲ್

    ಹೈದರಾಬಾದ್: ಎಲ್ಲಾ ಹಣವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾಗ ಧೈರ್ಯ ತುಂಬಿದವರನ್ನು ಭಾರತದ ಖ್ಯಾತ ನಿರ್ದೇಶಕ ರಾಜಮೌಳಿ ನೆನಪಿಸಿಕೊಂಡಿದ್ದಾರೆ. ತೆಲುಗಿನ ಖ್ಯಾತ ಗೀತ ರಚನೆಕಾರ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ನವೆಂಬರ್ 30 ರಂದು ನಿಧನರಾಗಿದ್ದಾರೆ. 66 ವರ್ಷದ ಪದ್ಮಶ್ರೀ ಸಿರಿವೆನ್ನೆಲ ಸೀತಾರಾಮ ಶಾಸ್ತ್ರಿ ಶ್ವಾಸಕೋಶದ ಕ್ಯಾನ್ಸರ್​​ನಿಂದ ನಿಧನರಾಗಿದ್ದಾರೆ. ಸೀತಾರಾಮ ಶಾಸ್ತ್ರಿ ಅವರಿಗೆ ಬಹಳಷ್ಟು ಸಿನಿ ತಾರೆಯರು ಸಂತಾಪಗಳನ್ನು ಸೂಚಿಸಿದ್ದಾರೆ. ಹಾಗೆಯೇ, ನಿರ್ದೇಶಕ ರಾಜಮೌಳಿ ಸಹ ಸೀತಾರಾಮ ಶಾಸ್ತ್ರಿಗೆ ಒಂದು ಪತ್ರದ ಮೂಲಕ ಕೊನೆಯ ಗೌರವ ಸಲ್ಲಿಸಿದ್ದಾರೆ.

    ಸೀತಾರಾಮ ಶಾಸ್ತ್ರಿ ಅವರಿಗೆ ನಿರ್ದೇಶಕ ರಾಜಮೌಳಿ ತೀರ ಆಪ್ತರು. ಶಾಸ್ತ್ರಿ ನಿಧನ ರಾಜಮೌಳಿಗೆ ತುಂಬಾ ನೋವು ತಂದಿದೆ. ಆ ನೋವಿನಲ್ಲೇ ನಿರ್ದೇಶಕ ರಾಜಮೌಳಿ ಸೀತಾರಾಮ ಶಾಸ್ತ್ರಿಗೆಂದು ಒಂದು ಪತ್ರ ಬರೆದುಕೊಂಡರು. 1996 ರಲ್ಲಿ ನಾವು ನಿರ್ಮಿಸಿದ ‘ಅರ್ಧಾಂಗಿ’ ಸಿನಿಮಾದಿಂದ ಇದ್ದ ಹಣವನ್ನು ಪೂರ್ತಿ ಲಾಸ್ ಮಾಡಿಕೊಂಡಿದ್ದೆ. ಬಾಡಿಗೆ ಸಹ ಕಟ್ಟಲಾಗದೆ ನಾನು ಕಷ್ಟ ಅನುಭವಿಸಿದ್ದೇನೆ. ಆಗ, ನನ್ನ ಬೆಂಬಲಕ್ಕೆ ನಿಂತವರು ಸೀತಾರಾಮ ಶಾಸ್ತ್ರಿ ಒಬ್ಬರೇ. ಯಾವತ್ತಿಗೂ ಸೋಲು ಒಪ್ಪಿಕೊಳ್ಳಬೇಡ ಎಂಬ ಅರ್ಥ ಕೊಡುವ ಅವರ ಹಾಡು ನನಗೆ ಇಂದಿಗೂ ಸ್ಫೂರ್ತಿ. ಅದುವೆ ನನ್ನ ಧೈರ್ಯ’ ಎಂದು ಬರೆದುಕೊಂಡಿದ್ದಾರೆ.

    ಜೊತೆಗೆ, ‘ನನ್ನ ಅಪ್ಪನಿಗೆಂದು ಒಂದು ಹಾಡು ಬರೆಸಿಕೊಂಡಿದ್ದೆ. ಸೀತಾರಾಮ ಶಾಸ್ತ್ರಿ ಅವರ ಹಾಡಿಗೆ ನನ್ನ ತಂದೆ ತುಂಬಾ ಖುಷಿ ಪಟ್ಟರು. ಜೊತೆಗೆ ಕೆಲವು ಸಾಂದರ್ಭಿಕ ಹಾಡುಗಳನ್ನು ಬರೆಯುವಾಗ ಶಾಸ್ತ್ರಿ ಅವರಿಗೆ ತುಂಬಾ ನೋವು ಆದರೂ, ನನಗೆ ಬೈದುಕೊಂಡರು, ನನ್ನ ಸಿನಿಮಾಗೆಂದು ಇಲ್ಲ ಎನ್ನದೇ ಬರೆದುಕೊಟ್ಟರು’ ಎಂದು ಪತ್ರದ ಮೂಲಕ ರಾಜಮೌಳಿ ಹೇಳಿಕೊಂಡಿದ್ದಾರೆ. ಸದ್ಯ, ರಾಜಮೌಳಿ ಸೀತಾರಾಮ ಶಾಸ್ತ್ರಿ ಬಗ್ಗೆ ಬರೆದಿರುವ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ನಟ ಪುನೀತ್​ಗಾಗಿ 500 ಕಿ.ಮೀ. ದೂರದಿಂದ ಓಟದ ಮೂಲಕವೇ ಬೆಂಗಳೂರಿಗೆ ಆಗಮಿಸುತ್ತಿದ್ದಾಳೆ 3 ಮಕ್ಕಳ ತಾಯಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts