

ಬೆಂಗಳೂರು: ಸಿನಿಮಾ ನಟ-ನಟಿಯರು ಕ್ಯಾಮೆರಾ ಮುಂದೆ ಚೆಂದವಾಗಿ ಕಾಣಬೇಕು ಎಂದು ಕೆಲವರು ಪ್ಲ್ಯಾಸ್ಟಿಕ್ ಸರ್ಜರಿ ಮೊರೆ ಹೋಗುತ್ತಾರೆ. ಆದರೆ ಸಾರ್ವಜನಿಕವಾಗಿ ಯಾವ ನಟ-ನಟಿಯರು ಕೂಡಾ ಈ ಕುರಿತಾಗಿ ಮಾತನಾಡಲು ಇಷ್ಟ ಪಡುವುದಿಲ್ಲ. ಆದರೆ ಸ್ಯಾಂಡಲ್ವುಡ್ ನಟಿಯೊಬ್ಬರು ಪ್ರತಿ ಭಾರಿ ತಮ್ಮ ದೇಹದ ಭಾಗದ ಕುರಿತಾಗಿ ತಾವು ಎದುರಿಸುತ್ತೀರುವ ಒಂದು ಪ್ರಶ್ನೆ ಕುರಿತಾಗಿ ಮಾತನಾಡಿದ್ದಾರೆ.
ನಟಿ ತಾನ್ಯಾ ಹೋಪ್ 2016 ರಿಂದ ತೆಲಗು ಚಿತ್ರಗಳ ಮೂಲಕ ಸಿನಿಪಯಣ ಆರಂಭಿಸಿದ ಇವರು ನಟ ದರ್ಶನ್‌ರವರ `ಯಜಮಾನ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಪ್ರವೇಶಿಸಿದವರು. ಸಂತಾನಂ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ನಟಿಗೆ ಅವರ ತುಟಿಯ ಕುರಿತಾಗಿ ಪ್ರಶ್ನೆಯೊಂದು ಎದುರಾಗಿದೆ. ಈ ನಟಿಯ ತುಟಿಗಳು ಕೊಂಚ ದೊಡ್ಡದಾಗಿವೆ ಅಂತೆ ಈ ಕುರಿತಾಗಿ ನಟಿ ತಾನ್ಯಾ ಹೋಪ್ಗೆ ಯಾಕೆ ನಿಮ್ಮ ತುಟಿ ದೊಡ್ಡದಾಗಿವೆ ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.
ನೀವು ನಿಮ್ಮ ತುಟಿಗೆ ಸರ್ಜರಿ ಮಾಡಿಸಿದ್ದೀರಾ? ಎಂಬ ಪ್ರಶ್ನೆಗಳೇ ತಾನ್ಯಾ ಅವರಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿದ ತಾನ್ಯಾ, ಇಂಥ ಪ್ರಶ್ನೆ ಪದೇ ಪದೇ ನಾನು ಎದುರಿಸುತ್ತಲೇ ಇದ್ದೇನೆ, ಕೆಲವೊಮ್ಮೆ ಇದರಿಂದ ಕೋಪವೂ ಬರುತ್ತದೆ. ನಿಮ್ಮ ತುಟಿಗಳು ಇಷ್ಟು ದೊಡ್ಡದಾಗಿದ್ದು ಹೇಗೆ? ನೀವು ನಿಮ್ಮ ತುಟಿಗೆ ಸರ್ಜರಿ ಮಾಡಿಸಿಕೊಂಡಿದ್ದೀರಾ? ಅಥವಾ ನೀವು ಯಾವುದಾದರೂ ಕಾಸ್ಮೆಟಿಕ್ ಬಳಸುತ್ತೀರಾ ಎಂದೆಲ್ಲಾ ಕೇಳುತ್ತಾರೆ. ಆದರೆ ನಿಜಕ್ಕೂ ನಾನು ಯಾವುದೇ ರೀತಿಯ ಆಪರೇಷನ್ ಮಾಡಿಸಿಕೊಂಡಿಲ್ಲ. ನನ್ನ ತುಟಿಯ ಮೇಲೆ ಯಾಕೆ ಕಣ್ಣೋ ಗೊತ್ತಾಗ್ತಿಲ್ಲ. ನನ್ನ ತುಟಿಗಳೇ ಹೀಗೆ. ಹುಟ್ಟಿದಿಂದಲೂ ನನ್ನ ತುಟಿಗಳು ಇರುವುದೇ ಹೀಗಿವೆ. ಇದಕ್ಕಾಗಿ ನಾನು ವಿಶೇಷ ಶಸ್ತ್ರಚಿಕಿತ್ಸೆ ಅಥವಾ ಚುಚ್ಚುಮದ್ದಿನ ಮೊರೆಹೋಗಿಲ್ಲ. ಎಲ್ಲರಿಗೂ ನನ್ನ ತುಟಿಯ ಮೇಲೆಯೇ ಕಣ್ಣು. ಭಾರತೀಯರ ತುಟಿಗಳು ಇರುವುದೇ ಹೀಗೆ. ನನ್ನ ತಾಯಿ ಮತ್ತು ಅಜ್ಜಿ ಕೂಡ ಈ ರೀತಿಯ ದೊಡ್ಡ ತುಟಿಗಳನೇ ಹೊಂದಿದ್ದಾರೆ. ಹಾಗಾಗಿ ಇದನ್ನು ದೊಡ್ಡ ವಿಚಾರ ಮಾಡಬೇಡಿ ಎಂದಿದ್ದಾರೆ.
2019ರಲ್ಲಿ ಯಜಮಾನ ಸಿನಿಮಾ ಮೂಲಕ ಕನ್ನಡಕ್ಕೆ ಬಂದ ತಾನ್ಯಾ ಹೋಪ್, ಅದಾದ ಬಳಿಕ ಉದ್ಘರ್ಷ, ಅಮರ್, ಖಾಕಿ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರ ಕೈಯಲ್ಲಿ ಉಪೇಂದ್ರ ಅವರ `ಹೋಮ್ ಮಿನಿಸ್ಟರ್', ಅಭಿಷೇಕ್ ಅಂಬರೀಶ್ ಅವರ `ಅಮರ್' ಮತ್ತು ಸುನೀಲ್ ಕುಮಾರ ದೇಸಾಯಿವರ `ಉದ್ಘರ್ಷ' ಚಿತ್ರಗಳೂ ಇವೆ.