

ಮುಂಬೈ: ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ಗಂಡಸರು ನನ್ನ ಮುಟ್ಟ ಬೇಡಿ ಎಂದು ಹೇಳುವ ಮೂಲಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಚರ್ಚೆಯಾಗುತ್ತಿದ್ದಾರೆ.
ರಾಖಿ ಸಾವಂತ್ ಇತ್ತೀಚೆಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ, ‘ನಾನು ಮೆಕ್ಕಾ ಮದೀನಾಗೆ ಹೋಗಿ ಬಂದಿದ್ದೇನೆ. ಗಂಡಸರು ದೂರ ನಿಲ್ಲಿ. ನನ್ನನ್ನು ಮುಟ್ಟಬೇಡಿ. ನಾನು ಪವಿತ್ರಳಾಗಿದ್ದೇನೆ’ ಎಂದು ರಾಖಿ ಸಾವಂತ್ ಗರಂ ಆಗಿದ್ದಾರೆ. ಅಲ್ಲಿದ್ದ ಕೆಲವು ಅಭಿಮಾನಿಗಳು ರಾಖಿಯ ವೇಷಭೂಷಣಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ವೇಳೆ ರಾಖಿ, ನಾನು ಸೌದಿಯವಳ ರೀತಿ ಕಾಣ್ತೀನಾ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಅಭಿಮಾನಿಯೊಬ್ಬರು, ‘ಇಲ್ಲ.. ದುಬೈ ಮಹಿಳೆ ರೀತಿ ಕಾಣುತ್ತಿದ್ದೀರಿ’ ಎಂದಿದ್ದಾರೆ. ‘ರೇಖಾ ರೀತಿ ಅಲ್ಲ.. ಶೇಖಾ ರೀತಿ ಕಾಣುತ್ತಿದ್ದೇನೆ’ ಎಂದು ರಾಖಿ ಸಾವಂತ್ ತಮಾಷೆಯಾಗಿ ಮಾತನಾಡಿದ್ದಾರೆ.
ಮೆಕ್ಕಾದಿಂದ ಭಾರತಕ್ಕೆ ಬಂದಿಳಿದ ರಾಖಿಗೆ ನನ್ನನ್ನು ರಾಖಿ ಎಂದು ಕರೆಯಬೇಡಿ. ನಾನು ಫಾತಿಮಾ. ಇನ್ಮುಂದೆ ನನ್ನನ್ನು ಫಾತಿಮಾ ಅಂತಾನೇ ಕರೆಯಬೇಕು’ ಎಂದು ತಾಕೀತು ಮಾಡಿದ್ದರು. ಮದುವೆಯ ನಂತರ ಫಾತಿಮಾ ಎಂದು ತಮ್ಮ ಹೆಸರನ್ನು ಬದಲಾಯಿಸಿಕೊಂಡಿರುವುದಾಗಿಯೂ ಅವರು ತಿಳಿಸಿದ್ದಾರೆ. ಮೆಕ್ಕಾದಿಂದ ಬಂದ ನಂತರ ರಾಖಿವ ವೇಷಭೂಷಣ ಕೂಡಾ ಬದಲಾಗಿದೆ. ರಾಖಿ ಸಾವಂತ್ ಎಲ್ಲಿಯೇ ಹೋದರೂ ಅಲ್ಲಿ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಆದರೆ ಇದೀಗ ಯಾರನ್ನು ಹತ್ತಿರಕ್ಕೂ ಸೇರಿಸುತ್ತಿಲ್ಲ. ಮೆಕ್ಕಾ ಮದೀನಾಗೆ ಹೋಗಿ ಬಂದ ಬಳಿಕ ಅವರಲ್ಲಿ ಬದಲಾವಣೆಯಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.