More

    ಚಿತ್ರರಂಗಕ್ಕೆ ಜೆಕೆ ಗುಡ್‌ಬೈ? ಅಭಿಮಾನಿಗಳ ಒತ್ತಾಯಕ್ಕೆ ಮಣಿದ ನಟ

    ಬೆಂಗಳೂರು: ನಟ ಕಾರ್ತಿಕ್ ಜಯರಾಮ್ (ಜೆಕೆ) ಕನ್ನಡದ ‘ಅಶ್ವಿನಿ ನಕ್ಷತ್ರ’, ಹಿಂದಿಯಲ್ಲಿ ‘ಸಿಯಾ ಕೆ ರಾಮ್’, ‘ಅಲಿ ಬಾಬಾ: ದಾಸ್ತಾನ್ ಎ ಕಾಬುಲ್’ ಸೇರಿದಂತೆ ಬಿಗ್‌ಬಾಸ್‌ನಲ್ಲೂ ಮಿಂಚಿದ್ದಾರೆ. ಮಾತ್ರವಲ್ಲ ‘ಕೆಂಪೇಗೌಡ, ‘ವರದನಾಯಕ’, ‘ಆ ಕರಾಳ ರಾತ್ರಿ’, ‘ಪುಟ 109’ ಹಾಗೂ ಬಾಲಿವುಡ್‌ನಲ್ಲಿ ‘ಓ ಪುಷ್ಪ ಐ ಹೇಟ್ ಟಿಯರ್ಸ್’ ಸೇರಿದಂತೆ 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಜತೆಗೆ ಕ್ರಿಕೆಟ್ ಪ್ರೇಮಿಯಾಗಿರುವ ಅವರು, ಸಿಸಿಎಲ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರ ಆಡುತ್ತಾ ಬಂದಿದ್ದಾರೆ.

    ಇಂತಹ ಜೆಕೆ ಗುರುವಾರ (ಮೇ 18) ಚಿತ್ರರಂಗಕ್ಕೆ ಅಂತಿಮ ವಿದಾಯ ಹೇಳುತ್ತಿರುವುದಾಗಿ ಜಾಲತಾಣದಲ್ಲಿ ಬರೆದುಕೊಂಡಿದ್ದರು. ‘ನಾನು ನಟನಾ ವೃತ್ತಿಯಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಹೇಳಿಕೊಳ್ಳಲು ಒಂದು ರೀತಿ ಬೇಸರವಾಗುತ್ತಿದೆ. 15 ವರ್ಷಗಳ ಸುದೀರ್ಘ ಅದ್ಭುತ ಪಯಣ. ನನ್ನ ಪೋಷಕರು ಎಂದು ತಪ್ಪು ವೃತ್ತಿಗೆ ಹೋಗಿದ್ದೀಯಾ ಎಂದು ಯಾವತ್ತೂ ಹೇಳಲಿಲ್ಲ. ನಾನು ನನ್ನ ವೃತ್ತಿಗೆ ಪ್ರಾಮಾಣಿಕ ಹಾಗೂ ನಿಷ್ಠಾವಂತನಾಗಿದ್ದೆ. ಆದರೆ, ಎಲ್ಲದಕ್ಕೂ ಒಂದು ಅವಧಿ ಅಂತಿರುತ್ತದೆ. ‘ಐರಾವನ್’ ಮತ್ತು ‘ಕಾಡ’ ನಾನು ನಟಿಸಿರುವ ಕೊನೆಯ ಚಿತ್ರಗಳಾಗಲಿವೆ. ಎಲ್ಲರಿಗೂ ಧನ್ಯವಾದ’ ಎಂದು ಪೋಸ್ಟ್ ಮಾಡಿದ್ದರು.

    ಇದನ್ನೂ ಓದಿ:ಮಕ್ಕಳು ಜೀವನದಲ್ಲಿ ಸದ್ಗುಣ ಮೈಗೂಡಿಸಿಕೊಳ್ಳಿ

    ನಟ ಅಕುಲ್ ಬಾಲಾಜಿ ಸೇರಿದಂತೆ ಹಲವಾರು ಅಭಿಮಾನಿಗಳು ಜೆಕೆ ನಿರ್ಧಾರವನ್ನು ವಿರೋಧಿಸಿದ್ದರು. ‘ಇಷ್ಟಕ್ಕೇ ಸೋಲೊಪ್ಪದೇ, ಮುಂದುವರಿಯಿರಿ. ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಸಿಗುತ್ತವೆ’ ಎಂದು ಧೈರ್ಯ ತುಂಬಿದ್ದರು. ಅದಾಗಿ ಕೆಲ ಹೊತ್ತಿನಲ್ಲೇ ಜೆಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಪೋಸ್ಟ್ ಡಿಲೀಟ್ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts