ಕಂಗನಾ ಬಾಡಿಗಾರ್ಡ್ ಮೇಲೆ ಅತ್ಯಾಚಾರ ಆರೋಪ

Kangana-Ranaut-1-Final
Published on

ಮುಂಬೈ: ತಮ್ಮ ಮಾತುಗಳು ಮತ್ತು ಪೋಸ್ಟ್​ಗಳ ಮೂಲಕ ಸದಾ ಒಂದಲ್ಲ ಒಂದು ವಿವಾದಕ್ಕೆ ಸಿಲುಕುವ ನಟಿ ಕಂಗನಾ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ, ಈ ಬಾರಿ ಅವರು ಸುದ್ದಿಯಲ್ಲಿರುವುದು ಅವರ ಬಾಡಿಗಾರ್ಡ್​ನಿಂದಾಗಿ.

ಕರ್ನಾಟಕದ ಮೂಲದ ಕುಮಾರ್​ ಹೆಗ್ಡೆ ಎಂಬ ಕಂಗನಾ ಅವರ ಬಾಡಿಗಾರ್ಡ್​ ಕುಮಾರ್​ ಹೆಗ್ಡೆ ಎಂಬುವವರ ವಿರುದ್ಧ ಅತ್ಯಾಚಾರ ಮತ್ತು ಮೋಸದ ಆರೋಪ ಕೇಳಿಬಂದಿದೆ. ಮುಂಬೈನ ಅಂಧೇರಿ ಮೂಲದ ಯುವತಿಯೊಬ್ಬರು, ಕುಮಾರ್ ವಿರುದ್ಧ ಡಿ.ಎನ್​. ನಗರದ ಪೊಲೀಸ್​ ಸ್ಟೇಷನ್​ನಲ್ಲಿ ದೂರು ಕೊಟ್ಟಿದ್ದು, ಕುಮಾರ್​ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.

ಯುವತಿಯ ದೂರಿನ ಪ್ರಕಾರ, ಆಕೆಗೆ ಕುಮಾರ್​ ಹೆಗ್ಡೆ ಸುಮಾರು ಎಂಟು ವರ್ಷಗಳಿಂದ ಪರಿಚಯವಂತೆ. ಕಳೆದ ವರ್ಷದ ಜೂನ್​ನಲ್ಲಿ ಕುಮಾರ್ ಹೆಗ್ಡೆ ಮದುವೆಯಾಗುವುದಾಗಿ ಹೇಳಿ, ಲಿವಿಂಗ್​ ಟುಗೆದರ್​ನಲ್ಲಿ ಇರುವುದಕ್ಕೆ ಒಪ್ಪಿಸಿದ್ದರಂತೆ. ಕೆಲವು ದಿನಗಗಳ ಬಳಿಕ ಮದುವೆಯಾಗುವುದಕ್ಕೆ ನಿರಾಕರಿಸಿದರಂತೆ. ಏಪ್ರಿಲ್​ 27ರಂದು ತನ್ನ ತಾಯಿಗೆ ಹುಷಾರಿಲ್ಲವೆಂದು ಆಕೆಯಿಂದ 50 ಸಾವಿರ ರೂ.ಗಳನ್ನು ಪಡೆದಿದ್ದರಂತೆ. ಆ ನಂತರ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಆ ಯುವತಿ ತನ್ನ ದೂರಿನಲ್ಲಿ ಹೇಳಿದ್ದಾರೆ. ಈ ಪ್ರಕರಣವನ್ನು ಪೊಲೀಸರು ದಾಖಲಿಸುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.

ಈಗ ತನ್ನ ಬಾಡಿಗಾರ್ಡ್​ ಮೇಲೆ ಈ ತರಹದ್ದೊಂದು ಗಂಭೀರವಾದ ಆರೋಪ ಬಂದಿರುವುದರಿಂದ, ಕಂಗನಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net