More

    ಜೈಲಿಗೆ ಹೋಗುವುದಕ್ಕೂ ಬೇಸರವಿಲ್ಲ ಎಂದು ಶಾರೂಖ್ ಹೇಳಿದ್ದ್ಯಾಕೆ?

    ಮುಂಬೈ: ಬಾಲಿವುಡ್​ ಬಾದ್​ಷಾ ಎಂದೇ ಜನಪ್ರಿಯರಾಗಿರುವ ಶಾರೂಖ್​ ಖಾನ್​ ಮಗಳು ಸುಹಾನಾ ಖಾನ್​ ಅವರ 21ನೇ ಹುಟ್ಟುಹಬ್ಬ ಇಂದು. ತಮ್ಮ ಮಗಳನ್ನು ಬಹಳ ಪ್ರೀತಿಸುವ ಶಾರೂಖ್​, ಆಕೆಯ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

    ಇದನ್ನೂ ಓದಿ: ಒಂದೇ ಬೀಡಿ ಹಂಚಿಕೊಂಡು ಸೇದುತ್ತಿದ್ದರಂತೆ ಶಾರೂಖ್-ಮನೋಜ್ …

    ಎಲ್ಲ ಸರಿ, ಮುಂದೊಂದು ದಿನ ಸುಹಾನಾ ಯಾರನ್ನಾದರೂ ಪ್ರೀತಿಸಿದರೆ ಏನು ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಅವರಿಗೆ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಅದಕ್ಕೆ ಉತ್ತರಿಸಿರುವ ಶಾರೂಖ್​, ತನ್ನ ಮಗಳ ಬಾಯ್​​ಫ್ರೆಂಡ್​ಗಳಿಗೆ ಏಳು ನಿಯಮಗಳನ್ನು ರೂಪಿಸಿರುವುದಾಗಿ ಹೇಳುತ್ತಾರೆ. ಅಷ್ಟೇ ಅಲ್ಲ, ಆ ನಿಯಮಗಳೇನು ಎಂದು ವಿವರಿಸುತ್ತಾರೆ.

    • ಮೊದಲು ಒಂದೊಳ್ಳೆಯ ಕೆಲಸ ಹುಡುಕಿಕೋ
    • ನಾನು ನಿನ್ನನ್ನು ಇಷ್ಟಪಡುವುದಿಲ್ಲ ಎಂದು ಗೊತ್ತಿರಲಿ
    • ನಾನು ಎಲ್ಲೆಡೆ ನಿನ್ನನ್ನು ಗಮನಿಸುತ್ತಿರುತ್ತೇನೆ
    • ಯಾವುದಕ್ಕೂ ಮೊದಲೇ ಒಬ್ಬ ಲಾಯರ್​ನ ಹುಡುಕಿಕೊಂಡಿರು
    • ಆಕೆ ನನ್ನ ರಾಜಕುಮಾರಿ, ನಿನ್ನ ಕೆಲಸದವಳಲ್ಲ
    • ಅವಳಿಗೆ ತೊಂದರೆ ಕೊಟ್ಟರೆ ಜೈಲಿಗೆ ಹೋಗುವುದಕ್ಕೂ ನನಗೆ ಬೇಸರವಿಲ್ಲ
    • ನೀನೇದರೂ ತೊಂದರೆ ಕೊಟ್ಟರೆ, ಅದೇ ತೊಂದರೆ ನಿನಗೆ ಕೊಡುತ್ತೇನೆ

    ಹೀಗೆ ಏಳು ನಿಯಮಗಳನ್ನು ಸುಹಾನಾ ಅವರ ಭವಿಷ್ಯದ ಬಾಯ್​ಫ್ರೆಂಡ್​ಗಳನ್ನು ಒಡ್ಡುವುದಾಗಿ ಶಾರೂಖ್​ ಹೇಳಿದ್ದರು. ಅಷ್ಟೇ ಅಲ್ಲ, ಇವೆಲ್ಲ ಮಾತಾಡುವುದಕ್ಕೆ ಚೆನ್ನ, ನಾಳೆ ಆಕೆ ಯಾರನ್ನಾದರೂ ಕರೆದುಕೊಂಡು ಬಂದು ಇವ ನನ್ನ ಬಾಯ್​ಫ್ರೆಂಡ್​ ಎಂದರೆ, ತನಗೆ ಒಪ್ಪದೆ ಬೇರೆ ದಾರಿ ಇರುವುದಿಲ್ಲ ಎಂದು ಸಹ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ‘ಹಮ್ ಆಪ್ಕೆ ಹೈ ಕೌನ್’ ಚಿತ್ರದ ಜನಪ್ರಿಯ ಸಂಗೀತ ಸಂಯೋಜಕ ರಾಮ್ ಲಕ್ಷ್ಮಣ್ ನಿಧನ

    ಇವೆಲ್ಲವೂ ತಮಾಷೆಗೆ ಹೇಳಬಹುದು. ಆದರೆ, ಮಗಳು ಬಂದು ತನ್ನ ಭಾಯ್​ಫ್ರೆಂಡ್​ ಇವನೇ ಎಂದು ತೋರಿಸಿದರೆ, ನಾನು ಮರುಮಾತಾಡದೇ ಒಪ್ಪಬಹುದು. ಆದರೆ, ಹೇಳುವುದಕ್ಕೇನಿದೆ. ಇದನ್ನು ಓದಿ, ಒಂದಿಷ್ಟು ಹುಡುಗರಿಗೆ ನನ್ನ ಮೇಲೆ ಗೌರವ ಅಥವಾ ಭಯ ಜಾಸ್ತಿಯಾಗಿ, ಸುಹಾನಾಳನ್ನು ಇನ್ನೂ ಚೆನ್ನಾಗಿ ನೋಡಿಕೊಂಡರೆ ಒಳ್ಳೆಯದೇ ಅಲ್ಲವೇ ಎನ್ನುತ್ತಾರೆ ಶಾರೂಖ್​.

    ಮತ್ತೊಮ್ಮೆ ಜತೆಯಾಗಿ ನಟಿಸಲಿದ್ದಾರಂತೆ ಪ್ರಭಾಸ್ ಮತ್ತು ಪೂಜಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts