More

    ಒಂದೇ ಬೀಡಿ ಹಂಚಿಕೊಂಡು ಸೇದುತ್ತಿದ್ದರಂತೆ ಶಾರೂಖ್-ಮನೋಜ್ …

    ಮುಂಬೈ: ಬಾಲಿವುಡ್​ ನಟರಾದ ಶಾರೂಖ್​ ಖಾನ್​ ಮತ್ತು ಮನೋಜ್​ ಬಾಜ್ಪೇಯಿ ಇಬ್ಬರೂ ಜತೆಯಾಗಿ ನಟಿಸಿದ್ದು ಒಂದೇ ಚಿತ್ರದಲ್ಲಿ. ಅದೂ ಯಶ್​ ಚೋಪ್ರಾ ನಿರ್ದೇಶನದ ವೀರ್​-ಝಾರಾ. ಆ ನಂತರ ಇಬ್ಬರನ್ನೂ ಒಟ್ಟಿಗೆ ತರುವ ಪ್ರಯತ್ನವಾದರೂ ಇದುವರೆಗೂ ಅವರಿಬ್ಬರೂ ಜತೆಯಾಗಿ ನಟಿಸುವುದಕ್ಕೆ ಸಾಧ್ಯವಾಗಿಲ್ಲ.

    ಇದನ್ನೂ ಓದಿ: ಆರ್​ಆರ್​ಆರ್​ನ ಡಿಜಿಟಲ್ ಮತ್ತು ಸ್ಯಾಟಿಲೈಟ್ ಹಕ್ಕುಗಳು 325 ಕೋಟಿಗೆ ಮಾರಾಟ?

    ಜತೆಯಾಗಿ ನಟಿಸುವುದಕ್ಕೆ ಸಾಧ್ಯವಾಗದಿದ್ದರೇನು? ನಾವಿಬ್ಬರೂ ಒಂದೇ ಬೀಡಿ ಹಂಚಿಕೊಂಡು ಸೇದುವಷ್ಟು ಒಳ್ಳೆಯ ಸ್ನೇಹಿತರು ಎಂದು ಹೇಳಿಕೊಂಡಿದ್ದಾರೆ ಮನೋಜ್​ ಬಾಜ್ಪೇಯಿ. ಮನೋಜ್​ ಅಭಿನಯದ ದಿ ಫ್ಯಾಮಿಲಿ ಮ್ಯಾನ್​ 2, ಜೂನ್​ 4ರಂದು ಅಮೇಜಾನ್​ ಪ್ರೈಮ್​ನಲ್ಲಿ ಸ್ಟ್ರೀಮ್​ ಆಗಲಿದೆ. ಈ ವೆಬ್​ಸರಣಿಯ ಪ್ರಚಾರದ ಸಂದರ್ಭದಲ್ಲಿ ಮಾತನಾಡಿರುವ ಮನೋಜ್​, ತಮ್ಮ ಹಾಗೂ ಶಾರೂಖ್​ ಅವರ ಸ್ನೇಹದ ಬಗ್ಗೆ ಮಾತನಾಡಿದ್ದಾರೆ.

    ನಾನು ಮತ್ತು ಶಾರೂಖ್ ಇಬ್ಬರೂ ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚಿನಿಂದಲೂ ಒಳ್ಳೆಯ ಸ್ನೇಹಿತರು.​ ಇಬ್ಬರೂ ದೆಹಲಿಯಲ್ಲಿ ಬ್ಯಾರಿ ಜಾನ್​ ಟ್ರೂಪ್​ನಲ್ಲಿ ಒಟ್ಟಿಗೆ ಅಭಿನಯ ಕಲಿತವರು. ಒಂದೇ ಬೀಡಿ, ಸಿಗರೇಟ್​ ಹಂಚಿಕೊಂಡು ಸೇದುತ್ತಿದ್ದವರು. ನಮ್ಮ ಸ್ನೇಹಿತರ ಗುಂಪಲ್ಲಿ ಮಾರುತಿ ವ್ಯಾನ್​ ಇದ್ದಿದ್ದು ಶಾರೂಖ್​ ಬಳಿ ಮಾತ್ರ. ನನ್ನನ್ನು ಒಮ್ಮೆ ಶಾರೂಖ್​, ಡಿಸ್ಕೋತೆಕ್​ಗೆ ಸಹ ಕರೆದುಕೊಂಡು ಹೋಗಿದ್ದರು. ಜನರನ್ನು ಸೆಳೆಯುವ ಶಕ್ತಿ ಶಾರೂಖ್​ಗೆ ಆಗಿನಿಂದಲೂ ಇದೆ. ಅದರಲ್ಲೂ, ಶಾರೂಖ್​ ಕಂಡರೆ ಹುಡುಗಿಯರು ಬಾಯಿಬಿಡುತ್ತಿದ್ದರು ಎಂದು ಮನೋಜ್​ ನೆನಪಿಸಿಕೊಂಡಿದ್ದಾರೆ.

    ಇದನ್ನೂ ಓದಿ: ದಿ ಫ್ಯಾಮಿಲಿ ಮ್ಯಾನ್ ವಿರುದ್ಧ ಎನ್​ಟಿಕೆ ಆಕ್ರೋಶ … ಇಲ್ಲಿದೆ ಕಾರಣ

    ಆ ನಂತರ ಶಾರೂಖ್​ ಫೌಜಿ, ಸರ್ಕಸ್​ ಮುಂತಾದ ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಇನ್ನು, ಮನೋಜ್​ ಸಹ ಸ್ವಾಭಿಮಾನ್​ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿ ಚಿತ್ರರಂಗಕ್ಕೆ ಬಂದರು. ಅಲ್ಲಿಂದ ಇಲ್ಲಿಯವರೆಗೂ ಇಬ್ಬರೂ ಅಭಿನಯದಲ್ಲಿ ಸಕ್ರಿಯವಾಗಿದ್ದಾರೆ.

    ಆರ್​ಆರ್​ಆರ್​ನ ಡಿಜಿಟಲ್ ಮತ್ತು ಸ್ಯಾಟಿಲೈಟ್ ಹಕ್ಕುಗಳು 325 ಕೋಟಿಗೆ ಮಾರಾಟ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts