More

    ಕಂಗನಾ ರಣಾವತ್ ನಟನೆಯ ಚಿತ್ರಕ್ಕೆ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಹಿನ್ನಡೆ!; ಒಟ್ಟು ಕಲೆಕ್ಷನ್​ ಹೀಗಿದೆ..

    ಮುಂಬೈ: ಬಾಲಿವುಡ್​ ಬೆಡಗಿ, ನಟಿ ಕಂಗನಾ ರಣಾವತ್ ಅಭಿನಯದ ‘ತೇಜಸ್’ ಸಿನಿಮಾ ಅಕ್ಟೋಬರ್​ 27 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತು. ಈ ಚಿತ್ರ ರಿಲೀಸ್​ ಆದ ಮೊದಲ ದಿನದಿಂದಲೂ ಬಾಕ್ಸ್​ ಆಫೀಸ್​ನಲ್ಲಿ ಸದ್ದು ಮಾಡಲು ವಿಫಲಗೊಂಡಿದೆ. ಇದೀಗ 7ನೇ ದಿನಕ್ಕೆ ಕಾಲಿಟ್ಟಿರುವ ಚಿತ್ರ, ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುತ್ತಿದೆ.

    ಇದನ್ನೂ ಓದಿ: ನವನಗರದ ಯೂನಿಟ್-೩ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹ

    ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಕಾಣುತ್ತಿಲ್ಲ. ಸದ್ಯ ಬಾಕ್ಸ್​ ಆಫೀಸ್​ನಲ್ಲಿ ವಿಕ್ರಾಂತ್ ಮಾಸ್ಸೆ ನಟನೆಯ ’12 ಫೇಲ್’ ಮತ್ತು ಕಂಗನಾ ಅಭಿನಯದ ‘ತೇಜಸ್’ ಸಿಕ್ಕಾಪಟ್ಟೆ​ ಪೈಪೋಟಿ ನಡೆಸುತ್ತಿದೆ. ಇದೀಗ ಚಿತ್ರದ ಮೊದಲನೇ ವಾರದ ಒಟ್ಟು ಕಲೆಕ್ಷನ್​ ವರದಿ ಬಿಡುಗಡೆಯಾಗಿದ್ದು, 7ನೇ ದಿನದ ಕೊನೆಗೆ ತೇಜಸ್​ ಒಟ್ಟು 5.25 ಕೋಟಿ ರೂ. ಮೊತ್ತವನ್ನು ಗಳಿಸಿದೆ.

    ಸರ್ವೇಶ್ ಮೇವಾರ ಬರೆದು ನಿರ್ದೇಶಿಸಿರುವ ‘ತೇಜಸ್’​ ಸಿನಿಮಾವನ್ನು ರೋನಿ ಸ್ಕ್ರೂವಾಲಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ಕಂಗನಾ ರಣಾವತ್​, ಅನ್ಶುಲ್ ಚೌಹಾನ್, ವರುಣ್ ಮಿತ್ರ, ಆಶಿಶ್ ವಿದ್ಯಾರ್ಥಿ, ವಿಶಾಕ್ ನಾಯರ್, ಕಶ್ಯಪ್ ಶಂಗಾರಿ, ಸುನಿತ್ ಟಂಡನ್, ರಿಯೊ ಕಪಾಡಿಯಾ, ಮೋಹನ್ ಅಗಾಶೆ, ಮುಷ್ತಾಕ್ ಕಾಕ್ ಮುಂತಾದವರ ತಾರಾಗಣವಿದೆ, (ಏಜೆನ್ಸೀಸ್).

    ಚಿತ್ರರಂಗದ ಮಂದಿಗೆ ಸಂತಸದ ಸುದ್ದಿ; ಕೇಂದ್ರ ಸರ್ಕಾರದಿಂದ ಮಹತ್ವದ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts