More

    ನವನಗರದ ಯೂನಿಟ್-೩ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹ

    ಬಾಗಲಕೋಟೆ: ನಮ್ಮ ಬೇಡಿಕೆಗಳನ್ನು ಈಡೇರಿಸುವ ವರೆಗೂ ನವನಗರದ ಯೂನಿಟ್ -೩ ನಿರ್ಮಾಣ ಕಾರ್ಯ ಸ್ಥಗೀತಗೊಳಿಸಬೇಕು ಎಂದು ಆಗ್ರಹಿಸಿ ಹೋರಾಟ ಮಾಡುತ್ತಿದ್ದ ಬಾಗಲಕೋಟೆ, ಮುಚಖಂಡಿ, ಶಿಗಿಕೇರಿ ಗ್ರಾಮದ ರೈತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದ ಘಟನೆ ಶುಕ್ರವಾರ ನಡೆದಿದೆ.

    ನವನಗರದ ಜಿಲ್ಲಾಡಳಿತ ಭವನ ಎದುರು ಪ್ರತಿಭಟನೆ ನಡೆಸಿದ್ದ ರೈತರು ನಮಗೆ ಪದೇ ಪದೇ ಅನ್ಯಾಯವಾಗುತ್ತಿದೆ. ಭೂ ಸ್ವಾಧೀನ ಪಡಿಸಿಕೊಂಡಿರುವ ರೈತರಿಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು. ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸ್ಥಳಕ್ಕೆ ಭೇಟಿ ನೀಡಿ ಭರವಸೆ ನೀಡಿದ ಬಳಿಕವು ಹೋರಾಟ ಮುಂದುವರೆದಿತ್ತು.

    ನಂತರ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದು ನವನಗರದ ಪೊಲೀಸ್ ಠಾಣೆಗೆ ಕರೆದೊಯ್ಯದರು. ಸಹಿ ಮಾಡುವಂತೆ ಒತ್ತಾಯಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತರು ಸಹಿ ಮಾಡುವ ಪ್ರಶ್ನೆ ಇಲ್ಲ. ನ್ಯಾಯ ದೊರೆಯುವ ತನಕ ಹೋರಾಟ ಮುಂದುವರೆಯಲಿದೆ. ಯಾವುದೇ ಯೂನಿಟ್ -೩ ಕಾಮಗಾರಿ ಬಂದ್ ಮಾಡಿ. ನಮ್ಮ ಬೇಡಿಕೆ ಈಡೇರಿಸಿದ ಬಳಿಕ ಆರಂಭಿಸಬೇಕು ಎಂದು ಆಗ್ರಹಿಸಿದರು. ಪೊಲೀಸರು, ರೈತರ ನಡುವೆ ವಾಕ್ಸಮರ ನಡೆದ ಬಳಿಕ ಬಿಡುಗಡೆಗೊಳಿಸಿದರು.

    ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುಳುಗಡೆಯಾಗುವ ಬಾಗಲಕೋಟೆ ನಗರ ನಿವಾಸಿಗಳಿಗೆ ಪುನರ್ವಸತಿ ಕಲಿಸಲು ನವನಗರ ಯೂನಿಟ್-೩ ನಿರ್ಮಾಣಕ್ಕಾಗಿ ಬಿಟಿಡಿಎ ವಿಶೇಷ ಭೂ ಸ್ವಾಧೀನಾಧಿ ಬಾಗಲಕೋಟೆ, ಮುಚಖಂಡಿ ಮತ್ತು ಶೀಗಿಕೇರಿ ಭಾಗದ ರೈತರ ೧೬೪೩ ಎಕರೆ ಜಮೀನುಗಳನ್ನು ವಶಪಡಿಸಿಕೊಂಡಿದ್ದು, ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ. ಸದ್ಯದ ಮಾರುಕಟ್ಟೆ ದರ ನಿಗದಿ ಪಡಿಸಬೇಕು.

    ಇದಕ್ಕೆ ಎಲ್ಲ ರೈತರ ವಿರೋಧವಿದೆ. ಬಾಗಲಕೋಟೆ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣಗಳು ದಾಖಲಾಗಿತ್ತವೆ. ೧ ವರ್ಷ ಸಮಯ ಗತಿಸಿದರೂ ಈ ವರೆಗೂ ನ್ಯಾಯಾಲಯದಲ್ಲಿ ಯಾವುದೇ ಪ್ರಕ್ರಿಯೆಗಳು ನಿಮಯನುಸಾರ ನಡೆಯುತ್ತಿಲ್ಲ. ಈವರೆಗೂ ನ್ಯಾಯ ಸಿಗದಿರುವದು ವಿಪರ್ಯಾಸದ ಸಂಗತಿ. ಈ ಭಾಗದ ರೈತ ಬಾಂಧವರು ತಮಗೆ ಆಗುತ್ತಿರುವ ಅನ್ಯಾಯವನ್ನು ಈವರೆಗೂ ಶಾಂತ ರೀತಿಯಿಂದ ಇರುವ ರೈತರ ತ್ಯಾಗಕ್ಕೆ ಆರ್ಥಿಕ ಸಂಕಷ್ಟ ಹಾಗೂ ಸಂಯಮ ಭಾವಗಳನ್ನು ಅರ್ಥ ಮಾಡಿಕೊಳ್ಳಬೇಕು. ಕೂಡಲೇ ಸೂಕ್ತ ಪರಿಹಾರ ಕಲ್ಪಿಸಿ ಯೂನಿಟ್-೩ ನಿರ್ಮಾಣ ಆರಂಭಿಸಬೇಕು. ಎಲ್ಲ ರೈತರಿಗೆ ಯೋಗ್ಯ ಪರಿಹಾರ ಸಿಗುವವರೆಗೆ ಯಾವುದೇ ತರಹದ ಕೆಲಸ ಕಾರ್ಯಗಳನ್ನು ಮಾಡಬಾರದು ಎಂದು ಆಗ್ರಹಿಸಿದರು.

    ಮುಖಂಡರಾದ ಬಸಪ್ಪ ಸ್ವಾಗಿ, ಗೋಪಾಲ ಲಮಾಣಿ, ಈರಣ್ಣ ಬಲಮಿ, ತಾವರಪ್ಪ ಲಮಾಣಿ, ರಾಜು ರುದ್ರಾಪ್ಪ, ರವಿ ಕುಮಟಗಿ, ಪರಶುರಾಮ ಛಬ್ಬಿ, ನಿಂಗಣ್ಣ ಗೋಡಿ, ಮಲ್ಲು ವಾಲಿಕಾರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts