More

    ಮತ ಎಣಿಕೆ ಕೇಂದ್ರಕ್ಕೆ ಅಪರ ಮುಖ್ಯ ಚುನಾವಣಾಧಿಕಾರಿ ಭೇಟಿ

    ಬಾಗಲಕೋಟೆ: ಉದ್ಯಾನಗಿರಿಯಲ್ಲಿರುವ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾದ ಮತ ಎಣಿಕೆ ಕೇಂದ್ರಕ್ಕೆ ಅಪರ ಮುಖ್ಯ ಚುನಾವಣಾಧಿಕಾರಿ ಕೂರ್ಮರಾವ್ ಎಮ್. ಅವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.

    ಎಣಿಕೆ ಕೇಂದ್ರಕ್ಕೆ ಒದಗಿಸಲಾದ ಮೂರು ಹಂತದ ಭದ್ರತೆ, ಸಿಸಿಟಿವಿ ಅಳವಡಿಕೆ ಸೇರಿದಂತೆ ಚುನಾವಣಾ ಆಯೋಗದ ಮಾರ್ಗಸೂಚಿಯನ್ವಯ ಇತರೆ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಭದ್ರತಾ ಕೊಠಡಿ, ಮತ ಎಣಿಕೆ ಕೊಠಡಿ ವೀಕ್ಷಣೆ ಮಾಡಿದರು. ಅಲ್ಲದೇ ತೋವಿವಿಯ ಕಟ್ಟಡದ ಸುತ್ತ ಒದಗಿಸಲಾದ ಭದ್ರತೆ ಕೂಡಾ ಪರಿಶೀಲಿಸಿದರು. ನಂತರ ತೋವಿವಿಯ ಸಭಾಂಗಣದ ಮುಖ್ಯ ದ್ವಾರದಲ್ಲಿ ಚುನಾವಣಾ ಅಭ್ಯರ್ಥಿ, ಎಜೇಂಟರಗಲಿಗೆ ಭದ್ರತಾ ಕೊಠಡಿಗಳ ಭದ್ರತೆಯ ಬಗ್ಗೆ ಸಿಸಿಟಿವಿ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಿರುವುದನ್ನು ಪರಿಶೀಲಿಸಿದರು.

    ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ಭೂ ದಾಖಲೆಯ ಉಪನಿರ್ದೇಶಕ ರವಿಕುಮಾರ ಎಂ, ಜಿ.ಪಂ ಯೋಜನಾ ನಿರ್ದೇಶಕ ಶಶಿಕಾಂತ ಶಿವಪೂರೆ, ತಹಶೀಲ್ದಾರ ಅಮರೇಶ ಪಮ್ಮಾರ, ಚುನಾವಣಾ ತಹಶೀಲ್ದಾರ ಪಂಪಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts