

ನವದೆಹಲಿ: ದೇಶದಲ್ಲಿ ಕ್ರಿಕೆಟ್ ವಿಶ್ವಕಪ್ 2023ರ ಪಂದ್ಯಗಳು ಬಿರುಸಿನಿಂದ ಆರಂಭಗೊಂಡಿದ್ದು, ಇಂದು ಭಾರತ ತನ್ನ ಎರಡನೇ ಪಂದ್ಯವನ್ನು ಆಫ್ಘಾನಿಸ್ತಾನದ ವಿರುದ್ಧ ಅರುಣ್ ಜೆಟ್ಲಿ ಸ್ಟೇಡಿಯಂನಲ್ಲಿ ಎದುರಿಸುತ್ತಿದೆ. ಈ ಪಂದ್ಯದ ವಿಶೇಷ ಕಾರ್ಯಕ್ರಮಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತೆ, ಬಾಲಿವುಡ್ ನಟಿ ಕಂಗನಾ ರಣಾವತ್ ಭೇಟಿ ನೀಡಿದ್ದಾರೆ.
ವಿಶ್ವಕಪ್ ಪೂರ್ವ ಶೋಗಾಗಿ ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋಗೆ ಆಗಮಿಸಿದ ನಟಿ ಕಂಗನಾ, ಏರ್‌ಫೋರ್ಸ್ ಸಮವಸ್ತ್ರವನ್ನು ಧರಿಸಿ ಕಾರ್ಯಕ್ರಮಕ್ಕೆ ಭೇಟಿ ನೀಡುವ ಮುಖೇನ ಅನೇಕರ ಗಮನ ಸೆಳೆದಿದ್ದಾರೆ. ನೆಟ್ಟಿಗರು ಈ ರೀತಿ ಬರಲು ಕಾರಣವೇನು? ಇದರ ಹಿಂದಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.
ತಮ್ಮ ಮುಂದಿನ ಸಿನಿಮಾ 'ತೇಜಸ್' ಪ್ರಚಾರಕ್ಕಾಗಿ ಕಂಗನಾ ಏರ್‌ಫೋರ್ಸ್ ಸಮವಸ್ತ್ರದಲ್ಲಿ ಆಗಮಿಸಿದರು. ನಿರ್ದೇಶಕ ಸರ್ವೇಶ್ ಮೇವಾರ ನಿರ್ದೇಶಿಸಿದ ಈ ಚಿತ್ರದಲ್ಲಿ ಏರ್ಪೋರ್ಸ್ ಪೈಲೆಟ್ ತೇಜಸ್ ಗಿಲ್ ಅವರ ಪಾತ್ರದಲ್ಲಿ ನಟಿ ಕಂಗನಾ ಅಭಿನಯಿಸಿದ್ದು, ವಿಶೇಷ ಕಥಾಹಂದರದ ಸಿನಿಮಾವನ್ನು ಪ್ರೇಕ್ಷಕರ ಮುಂದೆ ಹಾಜರುಪಡಿಸಲು ಚಿತ್ರತಂಡ ಸಿದ್ಧಗೊಂಡಿದೆ.
ಚಿತ್ರ ಇದೇ ಅಕ್ಟೋಬರ್ 27 ರಂದು ಬಿಡುಗಡೆಗೊಳಿಸಲು ತಯಾರಿ ನಡೆಸಿದೆ. ಇದರ ನಡುವೆಯೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ,(ಏಜೆನ್ಸೀಸ್).