

ರಾಮನಗರ: ಕೊಲ್ಲಾಪುರದಮ್ಮ ದೇವಿಯ ಅಗ್ನಿಕುಂಡ ಮಹೋತ್ಸವದಲ್ಲಿ ಕೊಂಡಕ್ಕೆ ಬಿದ್ದು ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.
ಕನಕಪುರದ ದೊಡ್ಡಆಲಹಳ್ಳಿ ಗ್ರಾಮದಲ್ಲಿ ಕೊಲ್ಲಾಪುರದಮ್ಮ ದೇವಿಯ ಕೊಂಡ ಮಹೋತ್ಸವ ಶನಿವಾರ ಬೆಳಗಿನ ಜಾವ ನಡೆಯುತ್ತಿತ್ತು. ಪೂಜಾರಿ ಹಿಂದೆ ಕೊಂಡ ಹಾಯಲು ಬಂದ ಅಜ್ಜೇಗೌಡ(45) ಎಂಬುವವರು ಕೊಂಡದ ಮಧ್ಯದಲ್ಲಿ ಬಿದ್ದರು.
ಕೂಡಲೇ ಅಲ್ಲಿದ್ದ ಜನರು ಅಜ್ಜೇಗೌಡರನ್ನು ಮೇಲಕ್ಕೆತ್ತಿ ಕನಕಪುರದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ. ಗಾಯಾಳು ಅಜ್ಜೇಗೌಡ ಗ್ರಾಮದಲ್ಲಿ ವಾಟರ್ಮೆನ್ ಕೆಲಸ ಮಾಡುತ್ತಿದ್ದಾರೆ. (ಆ ದೃಶ್ಯ ನೋಡಲು ಕೆಳಗೆ ಕೊಟ್ವಿರುವ ವಿಜಯವಾಣಿ ಫೇಸ್ಬುಕ್ ಲಿಂಕ್ ಅನ್ನು ಕ್ಲಿಕ್ ಮಾಡಿ)